ಹಳಿಯಾಳ :- ಹಳಿಯಾಳ ತಾಲೂಕಾ ಆಸ್ಪತ್ರೆಯ ತಜ್ಞ ವೈಜ್ಞ ಡಾ.ರಮೇಶ ಕದಂ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಇವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಇತ್ತೀಚೆಗೆ ದಲಿತ ಸಂಘರ್ಷ ಸಮೀತಿ ಕೆಂಪು ಸೇನೆಯವರು ತಾಲೂಕ ಪಂಚಾಯತ ಕಾರ್ಯನಿರ್ವಣಾಧಿಕಾರಿಗೆ ಸಲ್ಲಿಸಿದ ಮನವಿಯನ್ನು ವಿರೋಧಿಸಿ ತಾಲೂಕಾ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಸುಳ್ಳು ಆರೋಪ :-
ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು ಪ್ರತಿಭಟನಾ ಮೇರವಣ ಗೆ ಮೂಲಕ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಸಚಿವ ಆರ್.ವಿ.ದೇಶಪಾಂಡೆ ಅವರ ಹೆಸರಿನಲ್ಲಿದ್ದ ಮನವಿಯನ್ನು ತಹಶೀಲ್ದಾರ್ ಅವರಿಗೆ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರಿಗೂ ಮನವಿ ಸಲ್ಲಿಸಿ ಡಾ.ರಮೇಶ ಕದಂ ಉತ್ತಮ, ಪ್ರಾಮಾಣ ಕ ತಜ್ಞ ವೈದ್ಯರಾಗಿದ್ದು ಕೆಂಪು ಸೇನೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ಡಾ. ಕದಂರಿಂದ ಉತ್ತಮ ಸೇವೆ :-
ಮನವಿಯಲ್ಲಿ ತಜ್ಞ ವೈದ್ಯರಾಗಿರುವ ಕದಂ ಅವರು ನಿಷ್ಟೇಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಳಿಯಾಳ ತಾಲೂಕಾ ಆಸ್ಪತ್ರೆಯ ಪ್ರಭಾರ ತಾಲೂಕಾ ಆರೋಗ್ಯಾಧಿಕಾರಿಯಾಗಿ ಆರೋಗ್ಯ ಇಲಾಖೆಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಜಿಲ್ಲಾ ಮಟ್ಟದ ಸಭೆಗಳನ್ನು ಪಾಲ್ಗೊಳ್ಳುತ್ತಾರೆ. ಇಂತಹ ಒತ್ತಡದ ನಡುವೆ ಈ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ನಡುವೆ ಸಾರ್ವಜನೀಕರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ.
ಸಂಘಟನೆಗಳಿಂದ ಕಿರುಕುಳ- ವರ್ಗಾವಣೆ ಮಾಡಿದರೇ ಊಗ್ರ ಹೋರಾಟ:-
ಆದರೇ ಕೆಲವು ಸಂಘಟನೆಗಳ ಹೆಸರಿನಲ್ಲಿ ವೈದ್ಯರಿಗೆ ಕಿರುಕುಳ ಮತ್ತು ದುರುದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಇದರಿಂದ ವೈದ್ಯರ ಮನೋಸ್ಥೈರ್ಯ ಕುಗ್ಗಿಸುವಂತಾಗಿದೆ. ಎಂದು ವಿವರಿಸಿರುವ ಸಿಬ್ಬಂದಿಗಳು ಸಾರ್ವಜನೀಕ ಹಿತದೃಷ್ಠಿಯಿಂದ ಸದ್ರಿ ವೈದ್ಯರನ್ನು ವರ್ಗಾವಣೆ ಮಾಡಬಾರದು. ಒಂದಾನುವೇಳೆ ಕೆಂಪು ಸೇನೆಯ ಮನವಿಗೆ ಸ್ಪಂದಿಸಿ ವೈದ್ಯರನ್ನು ವರ್ಗಾವಣೆ ಮಾಡಿದರೇ ಊಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.
ಮನವಿ ಸ್ಲಲಿಸುವಾಗ ವೈದ್ಯರಾದ ಡಾ.ಅರುಣಾ ಅನ್ವೇಕರ, ಸ್ಟೇನ್ಲಿ, ಮೊಹಮದ ನದಿಮ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ ಮಾನೆ, ಪೂನಂ ಕೊಟಾರಕರ, ಮನೋಹರ ಕಲಗುಟಕರ, ಎಸ್.ಸಿ ಮಲ್ಕಾನಿ, ಎಸ್.ಎಸ್.ಬುಲ್ಲಾ, ವಿಕೆ ನಾಯ್ಕ, ವಸಂತಾ, ಎಐ ಕನವಿ ಮೊದಲಾದವರು ಇದ್ದರು.
Leave a Comment