• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗ್ರಾಮೀಣ ಪ್ರತಿಭೆಯ ವಾಲಿಬಾಲ್ ಯಾನ ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಸಿದ್ದಾಪುರದ ಲಲಿತಾ ನಾಯ್ಕ

January 2, 2019 by Nagaraj Naik Leave a Comment

Sidapur, lalita naik

ಸಿದ್ದಾಪುರ(ಉ.ಕ) :- ಕಡಿಮೆ ಸೌಲಭ್ಯಗಳು ಹಾಗೂ ಇರುವ ಅವಕಾಶವನ್ನು ಬಳಸಿಕೊಂಡು ಎತ್ತರದ ಸಾಧನೆ ಮಾಡಬೇಕೆನ್ನುವ ಗುರಿ ಹೊಂದಿರುವ ಗ್ರಾಮೀಣ ಭಾಗದ ಮಕ್ಕಳಿಗೆ ಬಡತನ ಮತ್ತು ಛಲ ಎಲ್ಲವನ್ನು ಕಲಿಸುತ್ತದೆ ಎನ್ನುವುದನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದ ಲಲಿತಾ ಅಜ್ಜಪ್ಪ ನಾಯ್ಕ ಅಕ್ಷರಸಃ ಸತ್ಯ ಮಾಡಿದ್ದಾರೆ.
ಬಡತನ -ಪ್ರತಿಭೆಗೆ ಅಡ್ಡಿಪಡಿಸಿಲ್ಲ:-
ಅಜ್ಜಪ್ಪ ಹಾಗೂ ಸರೋಜಾ ದಂಪತಿಗಳ ಮಗಳಾಗಿರುವ ಲಲಿತಾ ಹುಟ್ಟಿ ಬೆಳೆದ್ದು ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಇವರು ಬಾಲ್ಯದಿಂದಲೇ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದರು. ಇವರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿದ ಮನೆಯವರು ಕುಟುಂಬದಲ್ಲಿ ಬಡತನವಿದ್ದರು ಆಕೆಯ ಕ್ರೀಡಾ ಪ್ರತಿಭೆಗೆ ಅಡ್ಡಿಪಡಿಸಲಿಲ್ಲ.
ಪ್ರತಿಭೆ ಅನಾವರಣ:-
ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಜಯಪ್ರಕಾಶ ನಾರಾಯಣ ಕ್ರೀಡಾ ಶಾಲೆಯಲ್ಲಿ ಸೇರಿ. ನುರಿತ ಶಿಕ್ಷಕರಿಂದ ತರಬೇತಿ ಪಡೆದು ಗ್ರಾಮೀಣ ಮಟ್ಟದಲ್ಲಿ ಸೀಮಿತವಾಗಿದ್ದ ಪ್ರತಿಭೆ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶ ಪಡೆದ ಲಲಿತಾ ಪಠ್ಯದೊಂದಿಗೆ ಕ್ರೀಡೆಗೆ ಆದ್ಯತೆ ನೀಡಿ ತನ್ನಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಬೆಳಕಿಗೆ ಬಂದಳು.
ಕ್ರೀಡೆಗೂ ಜೈ-ಶಿಕ್ಷಣಕ್ಕೂ ಸೈ:-
ರಾಜ್ಯ ಜೂನಿಯರ್ ವಾಲಿಬಾಲ್ ತಂಡದಲ್ಲಿ ಆಯ್ಕೆಯಾಗಿ ರಾಜಸ್ಥಾನದಲ್ಲಿ ರಾಷ್ಟ್ರಮಟ್ಟದಲ್ಲಿ ಆಟವಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಲಲಿತಾ ವಾಲಿಬಾಲ್‍ನಲ್ಲಿ ಸಾಧನೆ ಮಾಡುತ್ತಲೇ 10ನೇ ತರಗತಿಯಲ್ಲಿ ಪ್ರಥಮ ಸ್ಥಾನವನ್ನು ತೆಗೆದುಕೊಂಡು ಶೈಕ್ಷಣ ೀಕವಾಗಿಯೂ ಸೈ ಎನಿಸಿಕೊಂ ಇಕೆ ಸದ್ಯ ಕಾಲೇಜ್ ಶಿಕ್ಷಣವನ್ನು ಧಾರವಾಡದ ಜೆ.ಎಸ್.ಎಸ್ ಶಿಕ್ಷಣ ಕೇಂದ್ರದಲ್ಲಿ ಪಡೆಯುತ್ತಿದ್ದಾಳೆ.
ರಾಷ್ಟ್ರಮಟ್ಟದಲ್ಲಿ ಜಯಭೇರಿ:-
ಇತ್ತೀಚಿಗೆ ಛಂಡಿಗಡದಲ್ಲಿ ನಡೆದ ರಾಷ್ಟ್ರೀಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಆಟವಾಡಿದ್ದು ಪ್ರಶಂಸನೀಯವಾಗಿದೆ. ಈ ಕ್ರೀಡಾಕೂಟದಲ್ಲಿ ಲಲಿತಾ ಪ್ರತಿನಿಧಿಸಿದ್ದ ಕರ್ನಾಟಕ ರಾಜ್ಯ ತಂಡವು ಪಾಂಡಿಚೇರಿ, ಆಂಧ್ರಪ್ರದೇಶ ಹಾಗೂ ಚಂಡಿಗಢ್ ತಂಡವನ್ನು ಸೋಲಿಸಿ ಜಯಿಸಿದೆ.
ಅಂತರಾಷ್ಟ್ರೀಯ ಮಟ್ಟಕ್ಕೆ ತಯಾರಿ-ಪ್ರಶಂಸೆಗಳ ಸುರಿಮಳೆ:-
ಈದೀಗ ಲಲಿತಾ ಅಂತರ್‍ರಾಷ್ಟ್ರೀಯ ಪಂದ್ಯಗಳನ್ನು ಆಡಲು ಸಿದ್ಧತೆ ನಡೆಸುತ್ತಿದ್ದು ಗ್ರಾಮೀಣ ಭಾಗದ ಪ್ರತಿಭೆಯಾಗಿದ್ದರೂ ಕೂಡಾ ಜಿಲ್ಲೆಯ ಹೆಸರನ್ನು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾಳೆ. ಇವಳ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆಗಳು ಕೇಳಿಬರುತ್ತಿದ್ದು ಸಾಮಾಜಿಕ ಕಾರ್ಯಕರ್ತ ಆಕಾಶ್ ಎಸ್ ಕೆ ಮುಂತಾದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Sidapur, lalita naik

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: SIDDAPURA, Trending Tagged With: lalita naik, Sidapur, ಅಂತರಾಷ್ಟ್ರೀಯ ಮಟ್ಟಕ್ಕೆ ತಯಾರಿ, ಅಂತರ್ರಾಷ್ಟ್ರೀಯ ಮಟ್ಟ, ಕ್ರೀಡೆಗೂ ಜೈ-ಶಿಕ್ಷಣಕ್ಕೂ ಸೈ, ಗುರುತಿಸಿಕೊಳ್ಳುತ್ತಿರುವ, ಗ್ರಾಮೀಣ ಪ್ರತಿಭೆಯ ವಾಲಿಬಾಲ್, ಗ್ರಾಮೀಣ ಭಾಗದ ಮಕ್ಕಳಿಗೆ ಬಡತನ ಮತ್ತು ಛಲ, ಪ್ರತಿಭೆ ಅನಾವರಣ, ಪ್ರಶಂಸೆಗಳ ಸುರಿಮಳೆ-, ಬಡತನ -ಪ್ರತಿಭೆಗೆ ಅಡ್ಡಿಪಡಿಸಿಲ್ಲ, ಯಾನ, ರಾಜಸ್ಥಾನದಲ್ಲಿ ರಾಷ್ಟ್ರಮಟ್ಟದಲ್ಲಿ ಆಟ, ರಾಷ್ಟ್ರಮಟ್ಟದಲ್ಲಿ ಜಯಭೇರಿ, ಸಿದ್ದಾಪುರ ತಾಲೂಕಿನ ಕಾನಗೋಡು ಗ್ರಾಮ, ಸಿದ್ದಾಪುರದ ಲಲಿತಾ ನಾಯ್ಕ

Explore More:

About Nagaraj Naik

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,111 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...