
ಬೆಂಗಳೂರು :- ಕಾರವಾರದ ಕೂರ್ಮಗಢ ದ್ವೀಪದ ಬಳಿ ದೋಣಿ ಮುಳುಗಿ, 9 ಜನ ಸಾವಿಗೀಡಾಗಿರುವ ದುರಂತಕ್ಕೆ ಕಂದಾಯ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
ದುರಂತದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಸಚಿವರು, ಅವಘಡದ ಸುದ್ದಿ ತಿಳಿದ ಕೂಡಲೇ ಸ್ಥಳದತ್ತ ಹೊರಟಿದ್ದಾರೆ.
“ಈ ಘಟನೆ ತುಂಬಾ ದುರದೃಷ್ಟಕರವಾದುದು. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಸರಕಾರದ ಕಡೆಯಿಂದ ಎಲ್ಲ ನೆರವನ್ನೂ ಒದಗಿಸಲಾಗುವುದು. ಬದುಕುಳಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ಸೂಕ್ತ ನೆರವು ನೀಡಲಾಗುವುದು,’’ ಎಂದು ಸಚಿವರು ಹೇಳಿದ್ದಾರೆ.
“ದುರಂತದ ಸ್ಥಳದಲ್ಲಿ ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮೀನುಗಾರರು ಕೂಡಲೇ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜಿಲ್ಲಾಧಿಕಾರಿ ಕೂಡ ಸ್ಥಳಕ್ಕೆ ತೆರಳಿದ್ದು ಕಾರ್ಯಾಚರಣೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ,’’ ಎಂದು ದೇಶಪಾಂಡೆ ತಿಳಿಸಿದ್ದಾರೆ.
Leave a Comment