
ದಾಂಡೇಲಿ:- ಉತ್ತರ ಕನ್ನಡ ಜಿಲ್ಲೆಯ ಖ್ಯಾತ ಪ್ರವಾಸಿ ತಾಣ ದಾಂಡೇಲಿಯ ಪ್ರಸಿದ್ದ ದಾಂಡೇಲಪ್ಪ ದೇವಸ್ಥಾನದ
ಹತ್ತಿರ ರೂ.2ಕೋಟಿ 99 ಲಕ್ಷ ಬೃಹತ್ ಮೊತ್ತವನ್ನು ವ್ಯಯಿಸಿ
ಮೊಸಳೆ ಉದ್ಯಾನವನ (Crocodile park) ನಿರ್ಮಾಣವಾಗಲಿದೆ.
ಸಚಿವ ಆರ್.ವಿ.ದೇಶಪಾಂಡೆ ಅನುಪಸ್ಥಿತಿಯಲ್ಲಿ ಕಾಮಗಾರಿಯನ್ನು ಆಲೂರು ಗ್ರಾಮ ಪಂಚಾಯಿತಿಯ ಅಧ್ಯೆಕ್ಷೆ ಕಸ್ತುರಿಯವರು ಚಾಲನೆ ನೀಡಿದರು.

ಈ ಪ್ರದೇಶದಲ್ಲಿ ಅನೇಕ ದಶಕಗಳಿಂದ ಮೊಸಳೆಗಳು ಬಿಡು ಬಿಟ್ಟಿದ್ದು ಇಲ್ಲಿ ಮೊಸಳೆ ಉದ್ಯಾನವನ ನಿರ್ಮಿಸಬೇಕು ಎಂದು ದಾಂಡೇಲಿಯ ಜನತೆ ಹಾಗೂ ದಾಂಡೇಲಿ ಪ್ರವಾಸೋದ್ಯಮಿಗಳ ಸಂಘವು 2007ರಿಂದ ಹೋರಾಟ ನಡೆಸುತ್ತಾ ಬಂದಿತ್ತು ಅಲ್ಲದೇ ಸಚಿವ ಆರ್ ವಿ ದೇಶಪಾಂಡೆಯವರ ಮೇಲೆ ನಿರಂತರ ಒತ್ತಡ ಹೆರಿತ್ತು..
ಕೊನೆಗೂ ಸಚಿವರು ಮೊಸಳೆ ಉದ್ಯಾನವನಕ್ಕೆ ಬೃಹತ್ ಅನುದಾನವನ್ನೇ ಸರ್ಕಾರದಿಂದ ಮಂಜೂರಿ ಮಾಡಿಸಿದ್ದು ದಾಂಡೇಲಿಗರ ಆಶಯ ಈಡೇರಿದೆ.
ಮೊಸಳೆ ಉದ್ಯಾನವನದ ಸಲುವಾಗಿ ಹೋರಾಟ ಮಾಡಿದ ಪ್ರವಾಸೋದ್ಯಮಿಗಳ ಸಂಘದ ಮಾಜಿ ಅಧ್ಯಕ್ಷರಾದ ಅನಿಲ್ ಗೋವಿಂದ ದಂಡಗಲ್,
ಪ್ರಧಾನ ಕಾರ್ಯದರ್ಶಿ ಹಾಗೂ ಹಾಲಿ ಉಪಾಧ್ಯಕ್ಷರಾದ ಕೀರ್ತಿ ಗಾಂವಕರ, ಹಾಲಿ ಪ್ರ.ಕಾರ್ಯದರ್ಶಿಯಾದ ಮೋಹನ ಹಲವಾಯಿ, ಸುನಿಲ್ ಪಡವಲಕರ, ಖಜಾಂಚಿ ಯಾದ ಮುರಳಿ ನಾಯ್ಕ , ಮಂಜುನಾಥ ರಾಠೋಡರವರು ಸಚಿವರಿಗೆ ಅಭಿನಂದನೆ ಸಲ್ಲಿಸಿದ್ದು,
ದಾಂಡೇಲಿಯಲ್ಲಿ ಮೊಸಳೆ ಪಾರ್ಕ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ದೇವೆಂದ್ರ ಹನುಮಸಾಗರ್, ಇಂಜೆನಿಯರ ದೇವೇಂದ್ರ ಅಮರಗೋಲ್, ನಾಗರಾಜ್ ಪಾಟೀಲ್ ಗುತ್ತಿಗೆದಾರ ಶೆಟ್ಟಿ ಇದ್ದರು..


Leave a Comment