ಹಳಿಯಾಳ:- ಗ್ರಾಮೀಣ ಭಾಗದಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಶಾಖೆಗಳನ್ನು ತೆಗೆಯುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ತಾಲೂಕಾ ಘಟಕದ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೇದಿಕೆಯ ತಾಲೂಕಾಧ್ಯಕ್ಷ ಬಸವರಾಜ ಬೇಂಡಿಗೆರಿಮಠ ಹೇಳಿದರು.
ಪಟ್ಟಣದಲ್ಲಿ ನಡೆದ ಸರಳ ವಾರ್ಷಿಕೊತ್ಸವ ಸಮಾರಂಭದಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳ ಬಗ್ಗೆ ಮತ್ತು ಸಂಘಟನೆಯನ್ನು ಬಲಗೊಳಿಸಲು ಸಂಘಟನೆಯ ವಿಸ್ತಾರದ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು ಎಂದಿರುವ ಬೆಂಡಿಗೇರಿ ಕಾರ್ಯಕ್ರಮದಲ್ಲಿ ನೂತನ 50 ಸದಸ್ಯರನ್ನು ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿಯಿತು ಎಂದರು.
ಕಾರ್ಯಕ್ರಮದಲ್ಲಿ ಮಹಾತೇಂಶ ದೇಸಾಯಿಸ್ವಾಮಿ, ಉಪಾಧ್ಯಕ್ಷರಾದ ಚಂದ್ರಕಾಂತ ದ್ರುವೆ, ವಿನೋಧ ದೊಡ್ಡಮನಿ, ಕಾರ್ಯದರ್ಶಿ ಮಹೇಶ ಆನೆಗುಂದಿ, ಶ್ರೀಶೈಲ್ ಮಠದೇವರು, ವಿಜಯ ಪಡನ್ನಿಸ್, ಚಂದ್ರಕಾಂತ ಅರಿಶಿಣಗೇರಿ, ಈರಯ್ಯಾ ಹಿರೇಮಠ, ಸುಧಾಕರ ಕುಂಬಾರ, ಶಿವು ಡಮ್ಮಗಿಮಠ ಇತರರು ಇದ್ದರು.
Leave a Comment