
ಹಳಿಯಾಳ :- ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ
ಕೆರೆಯ ದಂಡೆಯ ಮೇಲಿನ ಭವ್ಯ ಪೀಠದಲ್ಲಿ ಪ್ರತಿಷ್ಠಾಪಿಸಲಾಗಿರುವ
ಸುಮಾರು ೧೫ ಅಡಿ ಎತ್ತರದ ಭವ್ಯ ಅಶ್ವಾರೂಢ ಶೀವಾಜಿ ಮಹಾರಾಜರ
ಪುಥ್ಥಳಿ ಸ್ಥಳಕ್ಕೇ ಭೆಟಿ ನೀಡಿದ ಕೇಂದ್ರ ಕೌಶಲ್ಯಾಭಿವೃದ್ದಿ ಸಚಿವ ಅನಂತಕುಮಾರ ಹೆಗಡೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು
ಸಚಿವರಿಗೆ, ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಮುಖಂಡ ಮಂಗೇಶ ದೇಶಪಾಂಡೆ ಅವರಿಗೆ ಕೆಸರಿ ಪೇಟಾ ತೊಡಿಸಿ ಸತ್ಕರಿಸಿದರು.
ಗ್ರಾಮಸ್ಥರೆಲ್ಲರೂ ಜಾತಿಭೆದ ಮರೆತು ಎಲ್ಲರೂ ವಂತಿಗೆಯನ್ನು ಸಂಗ್ರಹಿಸಿ ಶೀವಾಜಿ ಮೂರ್ತಿಯನ್ನು
ಪ್ರತಿಷ್ಠಾಪಿಸಿರುವುದಕ್ಕೆ ಸಚಿವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಗ್ರಾಮದ ಹಿರಿಯರು ಪ್ರಮುಖರು ಇದ್ದರು.

Leave a Comment