ಕಾರವಾರ :- ಸಿದ್ಧಗಂಗೆಯ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ ಭಾವಪೂರ್ಣ ಚಿರಸ್ಮರಣೆಯನ್ನು ಕೈಗಾ ಅಣು ವಿದ್ಯುತ್ ಕೇಂದ್ರದ ವಸತಿ ಸಂಕೀರ್ಣದಲ್ಲಿ ಆಚರಿಸಲಾಯಿತು.
” ಬಸವ ಬಳಗ ಕೈಗಾ ” ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಿದ್ಯುತ್ ಕೇಂದ್ರದ ಸಿಬ್ಬಂದಿ ವರ್ಗ ಹಾಗೂ ವಸತಿ ಸಂಕೀರ್ಣದ ಗೃಹಿಣಿಯರು ಉಪಸ್ಥಿತರಿದ್ದರು.
ಶ್ರೀಗಳನ್ನು ಕಂಡ ಹಾಗೂ ಮಠದ ವಿದ್ಯಾರ್ಥಿಗಳಾಗಿದ್ದ ಅನೇಕರು ಸ್ವಾಮಿಗಳ ಕುರಿತ ತಮ್ಮ ಭಾವನೆಗಳನ್ನು ಹಂಚಿಕೊಂಡರು. ಬಸವಣ್ಣನ ಆಶಯಗಳನ್ನು ಶ್ರೀಗಳಲ್ಲಿ ಕಣ್ಣಾರೆ ಕಂಡ ಅನುಭವಗಳನ್ನು ಹಾಗೂ ಸಿದ್ದಗಂಗೆಗೆ ಬಂದ ಯಾವುದೇ ಧರ್ಮ ದವರಿರಲಿ “ಇವನಾರವ ? ಇವನಾರವ ? ಎಂದು ಕೇಳದೆ ಇವ ನಮ್ಮವ ಇವ ನಮ್ಮವ ನೆಂದು ಅಪ್ಪಿಕೊಂಡ ಶ್ರೀ ಗಳ ಸಾಧನೆಯನ್ನು ಬಹುತೇಕರು ನೆನಪಿಸಿಕೊಂಡು ಕಾರ್ಯಕ್ರಮದಲ್ಲಿ ಕೊಂಡಾಡಿದರು.
Leave a Comment