• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ ಸಚಿವ ಆರ್ ವಿ ದೇಶಪಾಂಡೆ ಚಾಲನೆ. 27 ಪ್ರಶಸ್ತಿಗಳಿಗಾಗಿ ಕುಸ್ತಿ ಕಲಿಗಳ ಕದನ

January 27, 2019 by Yogaraj SK Leave a Comment

watermarked 27 hly 2
ಹಳಿಯಾಳ: ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್, ಕರ್ನಾಟಕ ರಾಜ್ಯ ಕುಸ್ತಿ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಮೊತಿಕೆರೆ ಪಕ್ಕದ ಜಿಲ್ಲಾ ಕುಸ್ತಿ ಅಖಾಡದಲ್ಲಿ ದಿ.28 ರವರೆಗೆ ನಡೆಯಲಿರುವ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗೆ ವಿಜೃಂಭಣೆಯ ಚಾಲನೆ ದೊರೆತಿದೆ.
ಪಟ್ಟಣದಲ್ಲಿಯ ಶ್ರೀ ತುಳಜಾಭವಾನಿ ದೇವಸ್ಥಾನದಿಂದ ಕುಸ್ತಿ ಪಟುಗಳಿಂದ ಆರಂಭಿಸಲಾದ ಕ್ರೀಡಾ ಜ್ಯೋತಿಯನ್ನು ರಾಯಣ್ಣ ವೃತ್ತ, ಬಜಾರ, ಶಿವಾಜಿ ಸರ್ಕಲ್ , ವನಶ್ರೀ ಸರ್ಕಲ್ ಮಾರ್ಗದ ಮೂಲಕ ಕುಸ್ತಿ ಆಖಾಡಾಕ್ಕೆ ತಲುಪಿ ಕ್ರೀಡಾಂಗಣದಲ್ಲಿ ಜ್ಯೋತಿಯನ್ನು ಬೆಳಗಿಸಿ, ಕುಸ್ತಿ ಅಖಾಡಾದಲ್ಲಿ ಹನುಮಾನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ವಿದ್ಯುಕ್ತವಾಗಿ ಕ್ರೀಡೆಗೆ ಚಾಲನೆ ನೀಡಲಾಯಿತು.
ಕುಸ್ತಿ ಪಟುಗಳು ಪಟ್ಟಣದ ಪ್ರಮುಖ ಬೀದಿಯಲ್ಲಿ ಬೆಳಗಾವಿಯ ಮಹಿಳೆಯರ ಜಾಂಝ ಪಥಕದ ಮೂಲಕ ಸಾಂಪ್ರದಾಯಿಕ ಮೇರವಣ ೀಗೆ ನಡೆಸುವ ಮೂಲಕ ಜನರ ಗಮನ ಸೆಳೆದರು.
ಹೆಮ್ಮೆಯ ಸಂಗತಿ :– ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ವಿ.ಆರ್.ಡಿಎಮ್ ಟ್ರಸ್ಟ್ ನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು ಜ್ಯೋತಿ ಬೆಳಗಿಸುವ ಮೂಲಕ ವೇದಿಕೆಯ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ಕುಸ್ತಿ ಕ್ರೀಡೆಯಲ್ಲಿ ಇಂದು ಹಳಿಯಾಳ ಕ್ಷೇತ್ರದ ಯುವಕ-ಯುವತಿಯರು ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಯುವ ಪ್ರತಿಭೆಗಳಿಗೆ ವಿ.ಆರ್.ಡಿಎಮ್ ಟ್ರಸ್ಟ್‍ನಿಂದ ಸದಾಕಾಲ ಪ್ರೊತ್ಸಾಹ ದೊರೆಯಲಿದೆ ಎಂದು ಕುಸ್ತಿ ಪಟುಗಳಿಗೆ ಶುಭ ಹಾರೈಸಿದರು.

VRDM trust state and national level kusti sports inauguration
ಕೆಕೆ ಹಳ್ಳಿ ನಿತ್ಯಾನಂದ ಮಠದ ಸುಬ್ರಹ್ಮಣ್ಯ ಸ್ವಾಮಿಜಿ, ಆದಿಶಕ್ತಿ ಪಿಠದ ಕೃಷ್ಣಾನಂದ ಭಾರತಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕುಸ್ತಿ ಸಂಘಟಕ ಯಶವಂತ ಸ್ವಾಮೀಜಿ, ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸೈಯದ ತಂಗಳ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯ ಕೃಷ್ಣಾ ಪಾಟಿಲ್, ಟ್ರಸ್ಟ್‍ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಮೊದಲಾದವರು ಇದ್ದರು.
18 ಲಕ್ಷಕ್ಕೂ ಅಧಿಕ ಮೊತ್ತದ ಬಹುಮಾನ ಘೊಷಿಸಲಾಗಿರುವ 27 ಪ್ರಶಸ್ತಿಗಳಿಗಾಗಿ ನಡೆಯುತ್ತಿರುವ ಈ ಕುಸ್ತಿ ಪಂದ್ಯಾವಳಿಗೆ ಈಗಾಗಲೇ ಶನಿವಾರ ಕಿರಿಯರ ವಿಭಾಗದಲ್ಲಿ 297 ಬಾಲಕರು, 87 ಬಾಲಕಿಯರು ಹೀಗೆ 380 ಕ್ಕೂ ಅಧಿಕ ಕಿರಿಯ ಪೈಲ್ವಾನರು ಹೆಸರನ್ನು ನೊಂದಾಯಿಸಿದ್ದು. ದಿ.28 ರಂದು ನಡೆಯಲಿರುವ ಹಿರಿಯ ವಿಭಾಗದ ಕುಸ್ತಿ ಪಂದ್ಯಾವಳಿಗೆ ಭಾನುವಾರ ಸಾಯಂಕಾಲ ರಾಜ್ಯ-ರಾಷ್ಟ್ರಮಟ್ಟದ ಕುಸ್ತಿ ಕಲಿಗಳು ಹೆಸರು ನೊಂದಾಯಿಸಿಕೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದರು.
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕುಸ್ತಿ ಕ್ರಿಡೆಗಾಗಿ ಹೆಸರುವಾಸಿಯಾಗಿರುವ ಹಳಿಯಾಳವು ಕುಸ್ತಿಯ ತವರುರೆಂದು ಪ್ರಸಿದ್ದಿಯಾಗಿದ್ದು 2 ದಿನಗಳ ಕಾಲ ಪಟ್ಟಣದಲ್ಲಿ ನಡೆಯಲಿರುವ ಕುಸ್ತಿ ಕಲಿಗಳ ಕದನವನ್ನು ವಿಕ್ಷಿಸಲು ಸಾವಿರಾರು ಜನತೆ ರಾಜ್ಯದ ವಿವಿದೆಡೆಯಿಂದ ಹಾಗೂ ಹೊರ ರಾಜ್ಯಗಳಿಂದ ಆಗಮಿಸುತ್ತಿರುವುದು ಪಂದ್ಯಾವಳಿಯ ಮೆರಗನ್ನು ಹೆಚ್ಚಿಸಿದೆ. ಅಲ್ಲದೇ ಸಂಘಟಕರು ಪಟ್ಟಣದ ಬಸ್ ನಿಲ್ದಾಣ, ಶಿವಾಜಿ ವೃತ್ತ ಸೇರಿದಂತೆ ಪ್ರಮುಖ ಭಾಗದಲ್ಲಿ ಸಾರ್ವಜನೀಕರಿಗೆ ಕುಸ್ತಿ ಪಂದ್ಯಾವಳಿ ವಿಕ್ಷಣೆಗೆ ಬೃಹತ್ ಎಲ್‍ಇಡಿ ಸ್ಕ್ರಿನ್ ವ್ಯವಸ್ಥೆ ಮಾಡಿದ್ದು ಎಲ್ಲರು ಕುಸ್ತಿಯನ್ನು ವಿಕ್ಷೀಸಲು ಅವಕಾಶ ಮಾಡಿಕೊಡಲಾಗಿದೆ.

watermarked 27 hly 3

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: Belgaum Women's Jana Path, Deshpande Memorial Trust, Hailala District Wrestling Arena, Karnataka State Wrestling Association, KK Village, Krishnananda Bharathi Swamiji of Adi Shakti Pitha, organized by Minister RV Deshpande, State and Country Level Wrestling, Subrahmanya Swamiji of Nityananda Math, The tournament, Traditional Marriage, won 27 awards Battle of wrestling

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...