ಹಳಿಯಾಳ:- ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಜಿಲ್ಲಾ ಕುಸ್ತಿ ಅಖಾಡದಲ್ಲಿ ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್‍ನಿಂದ ನಡೆಯುತ್ತಿರುವ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ ರೊಚಕತೆಯಿಂದ ಕೂಡಿದ್ದು 2 ದಿನಗಳ ಕಾಲ 29 ಕೆಜಿಯಿಂದ 55 ಕೆಜಿ ತೂಕದ ವರೆಗೆ ಬಾಲಕ-ಬಾಲಕಿಯರು ವಿವಿಧ ವಿಭಾಗದಲ್ಲಿ ಸೆಣೆಸಾಟ ನಡೆಸಿದ್ದು ಕುಸ್ತಿ ಪ್ರೇಕ್ಷಕರಿಗೆ ಮನರಂಜನೆ ಒದಗಿಸಿದರು.
ವಿವಿಧ ವಿಭಾಗದ ಕುಸ್ತಿ ಪಂದ್ಯಾವಳಿಗಳಿಗೆ ಓಲಂಪಿಕ್ ಕುಸ್ತಿ ಪಟು ಎಮ್.ಆರ್.ಪಾಟೀಲ್, ರುಡಸೆಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇತರ ಗಣ್ಯರು ಚಾಲನೆ ನೀಡಿದರು ಅಲ್ಲದೇ ಬಳಿಕ ವಿಜೇತರಿಗೆ ಬಹುಮಾನ ವಿತರಿಸಿದರು.
ಬಾಲಕರ ವಿಭಾಗ:-
ಬಾಲಕರ 38 ಕಿ.ಜಿ ವಿಭಾಗದಲ್ಲಿ ಹಳಿಯಾಳದ ಪಾಂಡುರಂಗ ಪಿ ಧಾಮನೇಕರ ಪ್ರಥಮ- ಬಂಗಾರ ಪದಕ, ಸುರಜ ಗಂಧಿಟಕರ ಹಳಿಯಾಳ ದ್ವೀತಿಯ- ಬೆಳ್ಳಿ, ರೋಹಿತಕುಮಾರ ಆರ್ ದಾವರಣಗೇರಿ ಮತ್ತು ಸಂಜು ಹೆಗಡೆ ತೃತೀಯ- ಕಂಚಿನ ಪದಕ.
42 ಕಿ.ಜಿ ವಿಭಾಗ:- ಹಳಿಯಾಳದ ರೋಹನ ದೊಡ್ಡಮನಿ- ಬಂಗಾರ, ಅಭಿಶೇಕ ಪಿ ಬಾಗಲಕೋಟ- ಬೆಳ್ಳಿ, ಉಮೇಶ ಎಸ್ ಮತ್ತು ಮಲ್ಲಿಕಾರ್ಜುನ ತೊಲಮಟ್ಟಿ -ಕಂಚಿನ ಪದಕ, 45ಕೆ.ಜಿ ವಿಭಾಗದಲ್ಲಿ ಹಳಿಯಾಳದ ಸುಲೆಮಾನಸಾಬ್ ದೇವಕಾರಿ- ಬಂಗಾರದ ಪದಕ, ಶಿವಾನಂದ ಎಸ್ ಗದಗ- ಬೆಳ್ಳಿ, ಆದರ್ಶ ತೊಟದಾರ ಮತ್ತು ಕುಮಾರ ಜೆ- ಕಂಚು,
48 ಕೆ ಜಿ ವಿಭಾಗದಲ್ಲಿ ಬಾಗಲಕೋಟದ ರೋಹನ ಎನ್ ಘೇವಡಿ-ಚಿನ್ನ, ಮಲ್ಲಪ್ಪಾ ವಾಯ್ ಧಾರವಾಡ- ಬೆಳ್ಳಿ, ಕಾರ್ತಿಕ ಪಡತಾರೆ ಮತ್ತು ಶೈಲೆಶ ಸುತಾರ ಹಳಿಯಾಳ- ಕಂಚು. 51 ಕೆ.ಜಿ ವಿಭಾಗದಲ್ಲಿ ಬೆಳಗಾವಿಯ ಅಜೀತ ಚೌಗಲೆ – ಬಂಗಾರ, ಹಳಿಯಾದ ಉಷಾರಥ ಎಮ್- ಬೆಳ್ಳಿ, ಮಂಜುನಾಥ ಸಿ ಮತ್ತು ವೀರೆಶ ಧಾರವಾಡ- ಕಂಚು.
55 ಕೆಜಿ ವಿಭಾಗದಲ್ಲಿ ದಾವಣಗೆರೆಯ ಸುನಿಲ್ ಸಿ-ಚಿನ್ನ, ಆಕಾಶ ಪಿಎಸ್-ಬೆಳ್ಳಿ, ಧಾರವಾಡದ ರಾಮಣ್ಣಾ ಕಲಘಟಕರ ಮತ್ತು ಬಾಗಲಕೊಟೆಯ ಕೆಂಪನಗೌಡಾ ಕೆ ಕ್ರಮವಾಗಿ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಬಾಲಕೀಯರ ವಿಭಾಗ :-
42 ಕಿ.ಜಿ ವಿಭಾಗದಲ್ಲಿ ಹಳಿಯಾಳದ ಗಾಯತ್ರಿ ಸುತಾರ ಪ್ರಥಮಸ್ಥಾನ ಬಂಗಾರ ಪದಕ, ಬೆಳಗಾವಿಯ ಜ್ಯೋತಿ ಘಾಡಿ ದ್ವೀತಿಯ ಸ್ಥಾನ ಬೆಳ್ಳಿ ಪದಕ, ಹಳಿಯಾಳದ ರೂಪಾ ಕೊಲೇಕರ ಮತ್ತು ಶಲಿನಾ ಸಿದ್ದಿ ತೃತೀಯ-ಕಂಚಿನ ಪದಕ.
45 ಕಿ.ಜಿ ವಿಭಾಗ:- ಹಳಿಯಾಳದ ಮಮತಾ ಕೆಳೋಜಿ- ಬಂಗಾರ, ಹಳಿಯಾಳದ ರಕ್ಷಿತಾ ಎಸ್- ಬೆಳ್ಳಿ, ಸಂಗೀತಾ ಎಸ್ ಗದಗ ಮತ್ತು ಗೋಪವ್ವಾ – ಕಂಚಿನ ಪದಕ.
48 ಕೆ.ಜಿ ವಿಭಾಗ:- ಸೋನಿಯಾ ಜಾಧವ ಗದಗ- ಬಂಗಾರ, ನಿಖೀತಾ ಢೇಪಿ- ಬೆಳ್ಳಿ, ರೇಶ್ಮಾ ಮುರುಗುಣ ಮತ್ತು ಲಕ್ಷ್ಮೀ ಪಾಟೀಲ- ಕಂಚು.
51 ಕಿ.ಜಿ ವಿಭಾಗ ಪ್ರೇಮಾ ಎಚ್ ಗದಗ- ಬಂಗಾರ, ಐಶ್ವರ್ಯ ಕಾರಿಗರ, ಬೆಳಗಾವಿ- ಬೆಳ್ಳಿ, ಮಹಾಲಕ್ಷ್ಮೀ ಸಿದ್ದಿ-ಅಳ್ವಾಸ ಮತ್ತು ಹಳಿಯಾಳದ ಅರ್ಪನಾ ಸಿದ್ದಿ- ಕಂಚು.
55 ಕಿ.ಜಿ ವಿಭಾಗದಲ್ಲಿ ಶಾಹೀದಾ ಬೆಗಂ,ಗದಗ- ಬಂಗಾರ, ಲಕ್ಷ್ಮೀ ರೇಡೆಕರ, ಅಳ್ವಾಸ- ಬೆಳ್ಳಿ, ಸುಜಾತಾ ಪಿ ಮತ್ತು ಬಸೀರಾ ವಾಯ್- ಕಂಚಿನ ಪದಕ.
55 ಕೆಜಿ ಮೆಲ್ಪಟ್ಟ ವಿಭಾಗದಲ್ಲಿ ಲೀನಾ ಸಿದ್ದಿ ಹಳಿಯಾಳ ಪ್ರಥಮಸ್ಥಾನ ಬಂಗಾರ ಪದಕ ಶ್ವೇತಾ ಎಸ್ ಬಿ- ಬೆಳ್ಳಿ, ತುಶಾರಾ ಎ ಮತ್ತು ಸಹನಾ ಪಿ ಎಸ್ ಅವರು ತೃತೀಯ ಸ್ಥಾನ ಪಡೆದು ಕಂಚಿನ ಪದಕ ಗಳಿಸಿದ್ದಾರೆ.
Leave a Comment