ಹಳಿಯಾಳ:- ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಪರ್ಸಂಟೆಜ್ ದೇಶಪಾಂಡೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ನೀಡಿರುವ ಹೇಳಿಕೆಗೆ ತಮ್ಮ ಅನುಮೋದನೆ ಇದ್ದು ದೇಶಪಾಂಡೆ ಅವರು ಆರೋಪ ಸುಳ್ಳು ಎನ್ನುವಂತಿದ್ದರೇ ಮಂಪರು ಪರೀಕ್ಷೆಗೆ ಸಿದ್ದರಾಗಲಿ ಹಾಗೂ ತಾಯಿ ತುಳಜಾಭವಾನಿ ದೇವಿಯ ಮೇಲೆ ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದ್ದಾರೆ.
ಪಟ್ಟಣದಲ್ಲಿ ಹಳಿಯಾಳ ಬಿಜೆಪಿ ಘಟಕದವರು ಕರೆದಿದ್ದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತ ದೇಶಪಾಂಡೆ ಅವರ ವಿರುದ್ದ ಯಾವುದಾದರೊಂದು ಹೇಳಿಕೆ ಅಥವಾ ಆರೋಪಗಳು ಬಂದ ತಕ್ಷಣ ಅವರ ಮುಖಂಡರು ಹಾಗೂ ಚೆಲಾಗಳು ದೇಶಪಾಂಡೆ ಪರವಾಗಿ ವಾದಿಸುತ್ತಾರೆ ಎಂದು ಕಿಡಿಕಾರಿದ ಹೆಗಡೆ ಅವರದೇ ಅಧ್ಯಕ್ಷತೆಯಲ್ಲಿರುವ ವಿ.ಆರ್.ಡಿಎಮ್ ಟ್ರಸ್ಟ್‍ಗೆ ಈವರೆಗೆ ಎಷ್ಟು ಹಣ ಯಾವ ಯಾವ ಉದ್ಯಮಿಗಳಿಂದ ಬರುತ್ತೆ ಹಾಗೂ ಇತರೆ ಎಲ್ಲ ವಿವರಗಳನ್ನು ಸಾರ್ವಜನೀಕವಾಗಿ ಬಹಿರಂಗ ಪಡಿಸಲಿ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಗುತ್ತಿಗೆ ಕೆಲಸ ನೀಡಲು ಬರಗಾಲ ಘೋಷಿಸುವ ಸಚಿವ ದೇಶಪಾಂಡೆ ಅವರು ಈವರೆಗೆ ಬರಗಾಲ ಘೋಷಣೆಗಾಗಿ ಎಷ್ಟು ಹಣ ಬಂದಿದೆ. ಅನುದಾನ ಹೇಗೆ ಬಳಸಿಕೊಳ್ಳಲಾಗಿದೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲ್ ಹಾಕಿದರು.
ಎಸಿಬಿ ಅವರು ಇತ್ತೀಚೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಬಂಧನಕ್ಕೊಳಗಾಗಿದ್ದ ಸ್ವಾಮಿ ಎನ್ನುವಾತ ನೀಡಿರುವ ಹೇಳಿಕೆಗಳ ಬಗ್ಗೆ ತನಿಖೆ ಮಾಡಿಸಬೇಕು. ದೇಶಪಾಂಡೆ ಅವರು 40 ವರ್ಷಗಳಲ್ಲಿ ಜಿಲ್ಲೆಗೆ ತಂದ ಅನುದಾನ, ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆಗೆ ತಾವೆ ಆದೇಶ ಹೊರಡಿಸಲಿ ಎಂದರು.
ಜೋಯಿಡಾ ಭಾಗದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಲ್ಲೆಡೆ ಕಳಪೆ ಕಾಮಗಾರಿಗಳು ನಡೆದಿದೆ. ಹಳಿಯಾಳ-ಜೋಯಿಡಾ ಕ್ಷೇತ್ರದಲ್ಲಿ ಕಾಮಗಾರಿಯ ಮೊತ್ತಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಅನುದಾನವನ್ನು ತರಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಎನ್.ಎಸ್.ನಾಯ್ಕ ಎನ್ನುವ ಗುತ್ತಿಗೆದಾರನಿಗೆ ನೀಡಲಾಗುತ್ತಿರುವುದರ ಹಿಂದಿನ ಒಳಗುಟ್ಟೇನು ಎಂದು ಪ್ರಶ್ನೀಸಿದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಯಾರ ಕ್ಷಮೆ ಕೆಳೋ ಅಗತ್ಯವಿಲ್ಲ ಎಂದ ಸುನೀಲ್ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜಿಲ್ಲೆಯಾದ್ಯಂತ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ದೇಶಪಾಂಡೆ ಅವರು ಚುನಾವಣೆ ರಾಜಕೀಯ ಬಿಟ್ಟು ಜನರ ಧ್ವನಿಯಾಗಿ ಪ್ರಾಮಾಣ ಕವಾಗಿ ಜನರ ಸೇವೆ ಮಾಡಲಿ ಎಂದರು.
ಇನ್ನೂ ಮರಾಠಾ ಸಮಾಜದ ಮುಖಂಡರೊಬ್ಬರು ಜಿಲ್ಲಾಧಿಕಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಸಮಾಜದ ಹೆಸರಿನಲ್ಲಿ ಅನುದಾನ ತಂದು ಭ್ರಷ್ಟಾಚಾರ ನಡೆಸಿದ್ದು ಹಣದ ದುರ್ಬಳಕೆ ಆಗಿರುವ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇದು ಸಚಿವರಿಗೆ ಕಾಣ ಸುತ್ತಿಲ್ಲವೇ ನೀವು ಭ್ರಷ್ಟಾಚಾರ ವಿರೋಧಿಗಳಾಗಿದ್ದರೇ ಮೆಲ್ನೋಟಕ್ಕೆ ಹಣ ದುರ್ಬಳಕೆ ಆಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದ್ದು ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯನ್ನು ಅಮಾನತ್ತಿನಲ್ಲಿಟ್ಟು ತನಿಖೆಗೆ ಆದೇಶ ನೀಡಬೇಕಿತ್ತು.
ಆದರೇ ತಾವು ಭ್ರಷ್ಟರನ್ನು ಕಾಪಾಡುವವರು ಎಂದು ವ್ಯಂಗ್ಯವಾಡಿದ ಸುನೀಲ್ ಹೆಗಡೆ ಘೋಟ್ನೇಕರ ಅವರು ತನಿಖೆಗೆ ಸಹಕರಿಸಬೇಕು. ಜಿಲ್ಲಾಧಿಕಾರಿಗಳ ತನಿಖೆ ಪೂರ್ಣಗೊಂಡ ಬಳಿಕ ಒಂದಾನುವೇಳೆ ಸಮರ್ಪಕ ನ್ಯಾಯ ದೊರೆಯದೆ ಇದ್ದರೇ ಬಿಜೆಪಿಯಿಂದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೊಷ್ಠಿಯಲ್ಲಿ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ಅನಿಲ್ ಮುತ್ನಾಳ್, ಉದಯ ಹುಲಿ, ಸಂತೋಷ ಘಟಕಾಂಬಳೆ, ಚಂದ್ರು ಕೆ ಇತರರು ಇದ್ದರು.
Leave a Comment