ಹಳಿಯಾಳ: ಜೆಡಿಎಸ್- ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಭಿವೃದ್ದಿಗೆ ಹೆಚ್ಚಿನ ಮಹತ್ವ ನೀಡಿದ್ದು ನೂತನ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರು ಆಗಿರುವ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಎಲ್.ಘೋಟ್ನೇಕರ ಹೇಳಿದರು.
ತಾಲೂಕಿನ ಬಾಣಸಗೇರಿ ಗ್ರಾಮಕ್ಕೆ ಶಿಕ್ಷಣ ಇಲಾಖೆಯಿಂದ ಮಂಜೂರಾಗಿರುವ ಹೊಸ ಶಾಲಾ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿ ಮಾತನಾಡಿದರು. ಹಳಿಯಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.
ತಾಲೂಕ ಪಂಚಾಯತ ಸದಸ್ಯ ದೇಮಾಣ ಶಿರೋಜಿ, ಜಿಲ್ಲಾ ಪಂಚಾಯತ ಸದಸ್ಯೆ ಮಹೇಶ್ರೀ ಮಿಶ್ಯಾಳಿ, ಪಿಡಬ್ಲ್ಯೂಡಿ ಇಂಜಿನೀಯರ್ ಸುದರ್ಶನ, ಮುಖ್ಯಾಧ್ಯಾಪಕ ರಮೇಶ ಚವ್ಹಾಣ, ಸಹಶಿಕ್ಷಕಿ ವೆರೊನಿಕಾ ಡಿಸೋಜಾ, ಎಸ್‍ಡಿಎಂಸಿ ಅಧ್ಯಕ್ಷ ಪರಶುರಾಮ ಮೇತ್ರಿ, ಉಪಾಧ್ಯಕ್ಷೆ ಸವಿತಾ ಸೋನಾರ, ಪಾಂಡುರಂಗ ಪಾಟೀಲ, ರಮೇ±, ಡಿಎಸ್‍ಎಸ್ ಸಂಘದ ಸದಸ್ಯ ಭರಮೋಜಿ ವಡ್ಡರ್ ಇದ್ದರು.
Leave a Comment