ಹಳಿಯಾಳ:- ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ವಿದ್ಯಾರ್ಹತೆಯನ್ನು ಪಡೆಯುವುದು ಮಾತ್ರವಲ್ಲದೆ ವಿದ್ಯಾರ್ಹತೆಗೆ ಸೂಕ್ತವಾದಂತಹ ಕೌಶಲ್ಯ ಹೊಂದುವುದು ಅತಿ ಅವಶ್ಯಕವಾಗಿದೆ ಎಂದು ವಿ.ಆರ್.ಡಿ.ಎಮ್ ಟ್ರಸ್ಟ್ ಧರ್ಮದರ್ಶಿ ಪ್ರಸಾದ ಆರ್.ದೇಶಪಾಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಪದವಿ ಹಾಗೂ ಸ್ನಾತ್ತಕೋತ್ತರ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ 63 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 1,39,000 ರೂಪಾಯಿಗಳ ಶಿಷ್ಯವೇತನ ವಿತರಣೆ ಮಾಡಿ ಬಳಿಕ ಕೆನರಾ ಬ್ಯಾಂಕ ದೇಶಪಾಂಡೆ ಆರ್‍ಸೆಟಿ ಯಲ್ಲಿ ಯಶಸ್ವಿಯಾಗಿ ಲಘುವಾಹನ ಚಾಲನಾ ತರಬೇತಿಯನ್ನು ಪಡೆದ 16 ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಾವೂ ಪಡೆದ ಶಿಷ್ಯವೇತನವನ್ನು ಮುಂದಿನ ವಿದ್ಯಾರ್ಜನೆಗೆ ಉಪಯೋಗಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬಾಳಬೇಕೆಂದು ಪ್ರಸಾದ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ ದೇಶಪಾಂಡೆ ಆರ್‍ಸೆಟಿಯ ಹಿರಿಯ ಮಾರ್ಗದರ್ಶಕರಾದ ಅನಂತಯ್ಯ ಆಚಾರ, ಎಸ್.ಆರ.ವಿ. ಕೆನಿಟ್‍ಟೆಕ್ ಮತ್ತು ಬ್ಲಿಸ್‍ಸ್ ಎರೋಸ್ಪೆಸ್ ವ್ಯವಸ್ಧಾಪಕ ನಿರ್ದೇಶಕ ಅಖಿಲ್ ಕಣ್ಣನ್, ನಂದುಸ್ ಚಿಕನ್ ನಿರ್ದೇಶಕರಾದ ನವೀನ್ ಪಶುಪತಿ, ರೆನೈಸೆನ್ಸ್ ಹೊಲ್ಡಿಂಗ ವ್ಯವಸ್ಥಾಪಕ ನಿರ್ದೇಶಕರಾದ ರಾಮಾನಜ್ ಶ್ರೀನಿವಾಸನ್, ನಾಶ ಇಂಡಸ್ಟ್ರಿಜ್ ವ್ಯವಸ್ಥಾಪಕ ನಿರ್ದೇಶಕರಾದ ಸಂಜಯ ವಾದಾ, ಎಸ್.ವಾಯ್ ಡೈಸ್ ನಿರ್ದೇಶಕ ಯೋಗಿ ಸಚದೇವ, ಟಾಟಾ ಮೋಟರ್ಸ್ ಉಪ ಮಹಾಪ್ರಬಂದಕ ರಾಜಶೇಖರ ಬೆಲ್ಲದ ವೇದಿಕೆಯಲ್ಲಿದ್ದರು.
ನಿರೂಪಣೆಯನ್ನು ಹಿರಿಯರಾದ ಅನಂತಯ್ಯಾ ಆಚಾರ ಹಾಗೂ ತರಬೇತಿದಾರ ಕೆಂಪಣ್ಣ ಶೆನ್ಗೂಣಸಿ ಕಾರ್ಯಕ್ರಮ ನಿರ್ವಹಿಸಿದರು.
Leave a Comment