ಹಳಿಯಾಳ:- ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಕಾರವಾದಲ್ಲಿ ಸುದ್ದಿಗೊಷ್ಠಿ ನಡೆಸಿ ಆರೋಪಗಳನ್ನು ಮಾಡಿರುವ ಕೆಕೆಎಮ್‍ಪಿಯ ಎನ್.ಎಸ್.ಜಿವೋಜಿ ಸೇರಿದಂತೆ ನಾಲ್ವರ ವಿರುದ್ದ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್‍ನ ಮುಖಂಡ ಹಾಗೂ ಹಿರಿಯ ನ್ಯಾಯವಾದಿ ಎಸ್.ಎಲ್.ಅರಿಶೀನಗೇರಿ ಹೇಳಿದ್ದಾರೆ.
ನೋಟಿಸ್ ಜಾರಿ :-
ಸೋಮವಾರ ಸಾಯಂಕಾಲ ಪಟ್ಟಣದ ಶಿವಾಜಿ ಬ್ಯಾಂಕ್ ಕಾರ್ಯಾಲಯದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್‍ನವರು ಈಗಾಗಲೇ ದಿ.2-1-2019ರಂದು ಕಾರವಾರದಲ್ಲಿ ಘೋಟ್ನೇಕರ ಅವರ ವಿರುದ್ದ ಆರೋಪಗಳನ್ನು ಮಾಡಿ ಪತ್ರಿಕಾ ಗೋಷ್ಠಿ ನಡೆಸಿದಂತಹ ಕರ್ನಾಟಕ ಕ್ಷತ್ರೀಯ ಮಾರಾಠಾ ಪರಿಷತ್‍ನ ಜಿಲ್ಲಾಧ್ಯಕ್ಷ ಎನ್.ಎಸ್.ಜಿವೋಜಿ, ಇತರರಾದ ಶಿವಾಜಿ ನರಸಾನಿ, ತುಕಾರಾಮ ಪಟ್ಟೇಕರ ಹಾಗೂ ದೇಮಣ್ಣಾ ಬಸವಂತ ವೆಂಕಪ್ಪಗೌಡ ಅವರ ವಿರುದ್ದ ದಾವೆ ಹೂಡುವಂತೆ ತಮಗೆ ವಕಾಲತ್ತು ನೀಡಿರುವುದರಿಂದ ಘೊಟ್ನೇಕರ ಅವರ ವಿರುದ್ದ ಆರೋಪ ಮಾಡಿರುವ ಈ ನಾಲ್ವರಿಗೆ ಈಗಾಗಲೇ ದಿ.31-1-2019 ರಂದು ಲೀಗಲ್ ನೋಟಿಸ್ ಜಾರಿ ಮಾಡಲಾಗಿದ್ದು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ ಅವರ ಕ್ಷಮೇ ಕೇಳಬೇಕು ಇಲ್ಲದಿದ್ದರೇ ಮಾನನಷ್ಟ ಮೊಕದ್ದಮೆ ಹೂಡಲಾಗುವುದೆಂದು ತಿಳಿಸಲಾಗಿದೆ ಎಂದು ಹೇಳಿದರು.
ಪರಿಣಾಮ ನೆಟ್ಟಗಿರೊಲ್ಲ :-
ಮರಾಠಾ ಸಮಾಜದ ಸಮುದಾಯ ಭವನಗಳಿಗೆ ಸರ್ಕಾರದಿಂದ ಮಂಜೂರಾದ ಯಾವುದೇ ಅನುದಾನ ದುರುಪಯೋಗವಾಗಿಲ್ಲ, ಮರಠಾ ಸಮಾಜದ ಸಂಘಟನೆ ಮತ್ತು ಅಭಿವೃದ್ದಿಯನ್ನು ಸಹಿಸದೆ ಹತಾಶರಾಗಿರುವ ಸುನೀಲ್ ಮರಾಠಾ ಸಮಾಜದ ವಿಷಯಗಳಲ್ಲಿ ಮೂಗು ತೂರಿಸಿ ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾರೆಂದು ಕಿಡಿ ಕಾರಿದರು. ಬೆರೆ ಸಮಾಜದವರು ನಮ್ಮ ಸಮಾಜದ ವಿಷಯದಲ್ಲಿ ಕೈಹಾಕಿದರೇ ಪರಿಣಾಮ ನೆಟ್ಟಗಿರೊಲ್ಲ ಅದನ್ನು ಮರಾಠಾ ಸಮಾಜ ಸಹಿಸಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ದುರ್ಗತಿ ಬಂದಿಲ್ಲ:- ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿ ಸಮಾಜಕ್ಕಾಗಿಯೇ ದುಡಿಯುತ್ತಿರುವ ನನಗೆ ಸಮಾಜದ ಹಣ ತಿನ್ನುವಷ್ಟು ದುರ್ಗತಿ ಏನು ಬಂದಿಲ್ಲ ಎಂದ ಘೊಟ್ನೇಕರ ಮರಾಠಾ ಸಮಾಜದಲ್ಲೇ ಕೆಲವರು ಬ್ರಿಟಿಷ್‍ರ ಒಡೆದು ಆಳುವ ನೀತಿಯನ್ನು ಅನುಸರಿಸಿಕೊಂಡು ನಡೆಯುತ್ತಿದ್ದಾರೆಂದು ಕಿಡಿಕಾರಿದರು.
ನಮ್ಮವರೇ ನಮಗೆ ಶತ್ರುಗಳಾಗಿದ್ದು ಸಮಾಜದ ಅಭಿವೃದ್ದಿ ಅವರಿಗೆ ಬೇಕಾಗಿಲ್ಲ ಅವರ ಸ್ವಾರ್ಥ ಸಾಧನೆಯೆ ಅವರಿಗೆ ಮುಖ್ಯವಾಗಿದೆ ಎಂದು ಕಿಡಿಕಾರಿದ ಘೋಟ್ನೇಕರ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿಕೆಯನ್ನು ಖಂಡಿಸಿದರಲ್ಲದೇ ಕ್ಷೇತ್ರದ ಜನತೆಗೆ ಸುನೀಲ್ ಹೆಗಡೆ ಯಾರೆಂದು ತಿಳಿದಿದೆ. ಮರಾಠಾ ಸಮಾಜದ ವಿಷಯದಲ್ಲಿ ಕೈ ಹಾಕಲು ಅವರ್ಯಾರು ಸಮಾಜದವರು ಈಗಾಗಲೇ ಅಸಮಾಧಾನಗೊಂಡಿದ್ದು ಮುಂದೆ ಅವರು ಹೋರಾಟಕ್ಕೂ ಇಳಿಯಬಹುದು ಎಂದು ಘೊಟ್ನೇಕರ ಪರೋಕ್ಷವಾಗಿ ಎಚ್ಚರಿಕೆಯನ್ನು ನೀಡಿದರು.
ಸುದ್ದಿಗೊಷ್ಠಿಯಲ್ಲಿ ಸಮಾಜದ ಅಶೋಕ ಘೊಟ್ನೇಕರ, ಅನಿಲ ಚವ್ವಾಣ, ಸುಂದರ ಕಾನಕತ್ರಿ, ಗಣಪತಿ ಬೆಕಣ ಇತರರು ಇದ್ದರು.
Leave a Comment