
ಹಳಿಯಾಳ :- ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನವರು ಆಯೋಜಿಸಿರುವ ಹಳಿಯಾಳ ಹಬ್ಬ ಕಾರ್ಯಕ್ರಮಕ್ಕೆ ಟ್ರಸ್ಟ್ ನ ಧರ್ಮದರ್ಶಿ ಸಚಿವ ದೇಶಪಾಂಡೆ ಅವರ ಪತ್ನಿ ರಾಧಾಬಾಯಿ ದೇಶಪಾಂಡೆ ಚಾಲನೆ ನೀಡಿದರು.
ಹಳಿಯಾಳದ ತುಳಜಾಭವಾನಿ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಶೃದ್ದಾ ಕೇಂದ್ರಗಳಿಂದ ಜ್ಯೋತಿಯನ್ನು ತರುವ ಮೂಲಕ ಪಟ್ಟಣದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ಜ್ಯೋತಿ ಬೆಳಗಿ ಹಳಿಯಾಳ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಸತ್ಯಜೀತ ಗಿರಿ, ಉಮೇಶ ಬೋಳಶೆಟ್ಟಿ, ಅಜರ ಬಸರಿಕಟ್ಟಿ, ವಿ.ಆರ್.ಡಿಎಮ್ ಟ್ರಸ್ಟ್ ನ ಸಿಬ್ಬಂದಿಗಳು, ಅಧಿಕಾರಿಗಳು ಇತರರು ಇದ್ದರು.


Leave a Comment