• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಕುಟುಂಬಕ್ಕಷ್ಟೇ ಅಲ್ಲ ಸೈನಿಕರಿಗೊಸ್ಕರವು ಪ್ರತಿದಿ‌ನ ಪ್ರಾರ್ಥಿಸಿ ಹಳಿಯಾಳ ಹಬ್ಬ ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ನವೀನ ನಾಗಪ್ಪ ಮನದಾಳದ ಮನವಿ ಹಳಿಯಾಳ ಹಬ್ಬಕ್ಕೆ ತೆರೆ.

February 11, 2019 by Yogaraj SK Leave a Comment

 

2019 ,haliyal Habba ending

ಹಳಿಯಾಳ:- ತನಗೊಸ್ಕರ ಹಾಗೂ ಕುಟುಂಬಕ್ಕೊಸ್ಕರ ಪ್ರತಿದಿನ ದೇವರಲ್ಲಿ ಪ್ರಾರ್ಥನೆ ಮಾಡುವ ದೇಶದ ಜನತೆ ಇನ್ನು ಮುಂದೆ ತನ್ನ ತಾಯಿ ನಾಡಿಗೊಸ್ಕರ, ದೇಶದ ಭದ್ರತೆಗಾಗಿ ಹಗಲಿರುಳು ದೇಶದ ಗಡಿ ಕಾಯುತ್ತಿರುವ ಸೈನಿಕರಿಗಾಗಿಯು ಪ್ರತಿನಿತ್ಯ ಪ್ರಾರ್ಥನೆ ಮಾಡಿರೆಂದು ಭಾರತೀಯ ಸೆನೆಯ ಮಾಜಿ ಸೈನಿಕ ಕಾರ್ಗಿಲ್ ಹಿರೋ ಕ್ಯಾಪ್ಟನ್ ನವೀನ ನಾಗಪ್ಪ ಕರೆ ನೀಡಿದರು.
ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಹಳಿಯಾಳ ಹಬ್ಬ ಕಾರ್ಯಕ್ರಮದ ಅಂಗವಾಗಿ ಛತ್ರಪತಿ ಶೀವಾಜಿ ಮಹಾರಾಜರ ಮೈದಾನದಲ್ಲಿಯ ಭವ್ಯ ವೇದಿಕೆಯಲ್ಲಿ ಸಾಂಕೃತೀಕ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.

2019 ,haliyal Habba ending
ನವೀನ ನಾಗಪ್ಪ ಅವರು ತಾವು ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ ರೋಚಕ ಕ್ಷಣಗಳು, ಯುದ್ದ ಹೇಗಾಯಿತು ಎಂಬ ಬಗ್ಗೆ ಮಾತನಾಡುವಾಗ ಸಾವಿರಾರು ಜನ ಕಿಕ್ಕಿರಿದ್ದು ಸೇರಿದ್ದ ಮೈದಾನದಲ್ಲಿ ನಿರವ ಮೌನ ಹಾಗೂ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳು ಮೊಳಗುತ್ತಿದ್ದವು. ದೇಶಕ್ಕಾಗಿ ಏನಾದರು ಕೊಡುಗೆ ನೀಡುವಂತೆ ಅವರು ಯುವ ಸಮುದಾಯಕ್ಕೆ ಕರೆ ನೀಡಿದರು.
ಟ್ರಸ್ಟ್‍ನ ಧರ್ಮದರ್ಶಿ ಪ್ರಸಾದ ದೇಶಪಾಂಡೆ ಮಾತನಾಡಿ ಸೈನಿಕರ ಕಾರ್ಯವನ್ನು ಶ್ಲಾಘಿಸಿದರಲ್ಲದೇ ಸೈನಿಕರಿಗಾಗಿ ಪ್ರತಿನಿತ್ಯ ಪ್ರಾರ್ಥನೆ ಮಾಡುವುದಾಗಿ ಕ್ಯಾಪ್ಟನ್ ನಾಗಪ್ಪ ಅವರಿಗೆ ಹಳಿಯಾಳ ಜನತೆಯ ಪರವಾಗಿ ವೇದಿಕೆಯಲ್ಲಿ ಪ್ರಮಾಣ ಮಾಡಿದರು.
ಇದೆ ಸಂದರ್ಭದಲ್ಲಿ ಕ್ಯಾಪ್ಟನ್ ನವೀನ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಟ್ರಸ್ಟ್‍ನ ಧರ್ಮದರ್ಶಿ ರಾಧಾಬಾಯಿ ದೇಶಪಾಂಡೆ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಟ್ರಸ್ಟ್‍ನ ಆಡಳಿತಾಧಿಕಾರಿ ಪ್ರಕಾಶ ಪ್ರಭು ಇತರರು ಇದ್ದರು.

watermarked 11 hly 1
ಭಾನುವಾರದಂದು 2ನೇ ದಿನ ಬೆಳಿಗ್ಗೆ 7.30ರಿಂದ ಮನೆ ಮನೆ ರಂಗೋಲಿ ಸ್ಪರ್ದೆ, ಬೆಳಿಗ್ಗೆ 10.30ರಿಂದ ವಲ್ಲಭಭಾಯಿ ಗಾರ್ಡನ್, ಮರಡಿಗುಡ್ಡ ಉದ್ಯಾನವನ ಹಾಗೂ ವಿವಿಡಿಎಸ್ ಶಾಲೆಯಲ್ಲಿ ವಿವಿಧ ವಿಭಾಗಗಳ ಶಾಲಾ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ದೆ. ಶಿವಾಜಿ ಕಾಲೇಜು ಮೈದಾನದಲ್ಲಿ ಮಹಿಳೆಯರಿಗಾಗಿ ನಿಧಾನಗತಿಯ ಮೊಪೆಡ್ ರೇಸ್. ಪುಟಾಣ ಮಕ್ಕಳಿಗಾಗಿ ಬೈಸಿಕಲ್ ರೇಸ್ ಹಾಗೂ ಎಪಿಎಮ್‍ಸಿ ಆವರಣದಲ್ಲಿ ಜಾನುವಾರು ಪ್ರದರ್ಶನ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.
ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಹಾಗೂ ಜನಪ್ರತಿನಿಧಿಗಳು ಸ್ಪರ್ದಾ ಸ್ಥಳಗಳಿಗೆ ಭೇಟಿ ನೀಡಿ ಮಕ್ಕಳಿಗೆ-ಯುವಕ-ಯುವತಿಯರಿಗೆ ಪ್ರೋತ್ಸಾಹಿಸಿದರು. ಜಾನುವಾರ ಪ್ರದರ್ಶನ ವೇದಿಕೆ ಕಾರ್ಯಕ್ರಮವನ್ನು ಸಚಿವ ದೇಶಪಾಂಡೆ ಉಧ್ಘಾಟಿಸಿದರು.

watermarked 11 hly 2
ಇನ್ನೂ ಸಾಯಂಕಾಲ ಶೀವಾಜಿ ಕಾಲೇಜ್ ಮೈದಾನದಲ್ಲಿಯ ಭವ್ಯ ವೇದಿಕೆಯಲ್ಲಿ ಸಿಲ್ಲಿ ಲಲ್ಲಿ ಹಾಗೂ ಪಾಪಾ ಪಾಂಡು ಧಾರವಾಹಿಗಳ ಕಿರುತೆರೆ/ಬೆಳ್ಳಿ ತೆರೆ ನಟರಾದ ವಿಕ್ರಂ ಸೂರಿ ಹಾಗೂ ನಮಿತಾ ರಾವ್ ತಂಡದಿಂದ ನೃತ್ಯ ರೂಪಕ, ಜ್ಯೂನಿಯರ್ ಮೈಕಲ್ ಜ್ಯಾಕ್ಸ್‍ನ್ ಖ್ಯಾತಿಯ ರಜತ ನಾಯ್ಕನಿಂದ ವಿಶಿಷ್ಠ ನೃತ್ಯ ಪ್ರದರ್ಶನ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಬೆಳಗಾವಿ ಎಕ್ಸಪ್ರೇಸ್ ತಂಡದಿಂದ ಮನಮೋಹಕ ನೃತ್ಯ ಪ್ರದರ್ಶನ, ಬಾಲಿವುಡ್‍ನ ಖ್ಯಾತ ಉದಯೋನ್ಮುಖ ಗಾಯಕ ಕಿಂಜಲ್ ಚಟರ್ಜಿ ತಂಡದಿಂದ ಸಂಗೀತ ರಸ ಸಂಜೆ, ಸ್ಥಳೀಯ ಮಂಜುನಾಥ ಡ್ಯಾನ್ಸ್ ಅಕಾಡೇಮಿ, ದುರ್ಗಾ ನಾಟ್ಯ ಸಂಘ, ವಿವಿಡಿ ಸ್ಕೂಲ್‍ಆಫ್ ಎಕ್ಸ್‍ಲೆನ್ಸ್ ಸೇರಿದಂತೆ ವಿವಿಧ ಸ್ಥಳೀಯ ಕಲಾವಿದರಿಂದ ನೃತ್ಯ ರೂಪಕಗಳು ಪ್ರದರ್ಶನಗೊಂಡವು. ಸುಮಾರು 12 ಸಾವಿರಕ್ಕೂ ಅಧಿಕ ಜನ ಕಾರ್ಯಕ್ರಮ ವಿಕ್ಷಿಸಿದರು.
ಟ್ರಸ್ಟ್‍ನ ವತಿಯಿಂದ ಎಲ್ಲ ಕಲಾವಿದರು ಹಾಗೂ 2 ದಿನಗಳ ಕಾಲ ನಡೆದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೊತ್ಸಾಹಿಸಲಾಯಿತು.

watermarked IMG 20190211 WA0195 watermarked IMG 20190211 WA0196 watermarked IMG 20190211 WA0197 watermarked IMG 20190211 WA0194

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: but also for the soldiers, Captain Navne Nappappa's appeal, Captain Nivana Nagappa's Appeal to the Festival of Haliya on the occasion of the Haliya Festival, chatrapati śīvāji mahārājara maidāna, daily prayers for soldiers, dēśada bhadrategāgi hagaliruḷu, dēśada gaḍi kāyuttiruva, kārgil yuddadalli bhāgavahisidda, kuṭumbakkaṣṭē alla, Kyāpṭan navīna, not for families, on the occasion of Haliya Festival, Open to Hallya festival, participating in the Kargil War, prayed daily for the soldiers, praying daily for the family and not for the soldiers., rōcaka kṣaṇagaḷu, sainikarigāgiyu pratinitya prārthane, sainikarigoskaravu, tāyi nāḍigoskara, the battlefield of the Chhatrapati Shivaji Maharaj, the epic battle of the Kargil War, the mother of the Chhatrapati Shivaji Maharaj, waiting for the country's borders, yudda, ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿದ್ದ, ಕುಟುಂಬಕ್ಕಷ್ಟೇ ಅಲ್ಲ, ಕ್ಯಾಪ್ಟನ್ ನವೀನ, ಕ್ಯಾಪ್ಟನ್ ನವೀನ ನಾಗಪ್ಪ ಮನದಾಳದ ಮನವಿ, ಛತ್ರಪತಿ ಶೀವಾಜಿ ಮಹಾರಾಜರ ಮೈದಾನ, ತಾಯಿ ನಾಡಿಗೊಸ್ಕರ, ದೇಶದ ಗಡಿ ಕಾಯುತ್ತಿರುವ, ದೇಶದ ಭದ್ರತೆಗಾಗಿ ಹಗಲಿರುಳು, ಯುದ್ದ, ರೋಚಕ ಕ್ಷಣಗಳು, ಸೈನಿಕರಿಗಾಗಿಯು ಪ್ರತಿನಿತ್ಯ ಪ್ರಾರ್ಥನೆ, ಸೈನಿಕರಿಗೊಸ್ಕರವು ಪ್ರತಿದಿ‌ನ ಪ್ರಾರ್ಥಿಸಿ, ಹಳಿಯಾಳ ಹಬ್ಬ ಕಾರ್ಯಕ್ರಮದಲ್ಲಿ, ಹಳಿಯಾಳ ಹಬ್ಬಕ್ಕೆ ತೆರೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...