ಶಿರಸಿ(ಉ.ಕ) : ನೀರನ್ನು ಸರಬರಾಜು ಮಾಡುವ ಪೈಪ್‍ಗಳ ಮಧ್ಯದಲ್ಲಿ ಇರುವ ಛೇಂಬರ್‍ಗಳು ಓಪನ್ ಆಗಿದ್ದು ಹಲವು ಕಡೆ ನೀರು ಸೋರಿಕೆ ಆಗುತ್ತಿರುವುದರಿಂದ ಶಿರಸಿಯ ಭೀಮನಗುಡ್ಡದಲ್ಲಿರುವ ನೀರಿನ ಟ್ಯಾಂಕಿಗೆ ಬರುವ ನೀರು ಕಲುಷಿತಗೊಳ್ಳುವ ಆತಂಕ ಉದ್ಭವವಾಗಿದೆ.
ಶಿರಸಿ ತಾಲೂಕಿನ ಮಾರಿಗದ್ದೆ ಹೊಳೆಯಿಂದ ನೀರನ್ನು ಪೈಪ್ ಮೂಲಕ ಅಡಕಳ್ಳಿ ಕ್ರಾಸ್‍ನಲ್ಲಿರುವ ಮಧ್ಯಂತರ ಪಂಪ್‍ನ ಮನೆಗೆ ತಂದು ಅಲ್ಲಿಂದ ಭೀಮನಗುಡ್ಡದ ನೀರಿನ ಟ್ಯಾಂಕ್‍ಗೆ ಸರಬರಾಜು ಮಾಡಲಾಗುತ್ತಿದೆ.
ಮಧ್ಯದಲ್ಲಿ ಸೋರಿಕೆ-ನೀರಿನ ಪೈಪ್‍ಗಳಿಗೆ ಮಧ್ಯ ಮಧ್ಯದಲ್ಲಿ ಛೇಂಬರ್ (ಎರ್ ಹಾಲ್)ಗಳನ್ನು ಮಾಡಲಾಗಿದ್ದು ಇವುಗಳ ಮೂಲಕ ನಿತ್ಯ ನಿರಂತರವಾಗಿ ನೀರು ಸೋರಿಕೆಯಾಗುತ್ತಿದೆ. ಶಿರಸಿ ಸಿದ್ದಾಪುರ ರಸ್ತೆಯ ಕೆಲವೆಡೆ ನೀರು ಸೋರಿಕೆಯಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಾಗಿದೆ.
ನೀರು ಕಲುಷಿತವಾಗುವ ಅಪಾಯ-ನೀರು ಸರಬರಾಜು ಪೈಪ್‍ಗಳ ಮಧ್ಯದಲ್ಲಿ ಹಲವಾರು ಕಡೆ ಗಾಳಿ ಪಾಸಾಗಲು ಹಾಗೂ ರಿಪೇರಿಗೆ ಅನುಕೂಲವಾಗುವ ಕಾರಣಕ್ಕೆ ಮಾಡಿರುವ ಛೇಂಬರ್‍ಗಳು ಹಲವು ಕಡೆ ಓಪನ್ ಆಗಿದ್ದು ಇದರ ಮೂಲಕ ವಿಷ ಪದಾರ್ಥಗಳು ಅಥವಾ ಕಲುಷಿತ ಪದಾರ್ಥಗಳು ಸೇರಿದರೆ ನೀರು ಸೇವಿಸುವ ಜನರ ಆರೋಗ್ಯಕ್ಕೆ ಹಾಗೂ ಪ್ರಾಣಕ್ಕೆ ಅಪಾಯವಾಗುವ ಲಕ್ಷಣಗಳು ಕಂಡು ಬರುತ್ತಿದೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ತಕ್ಷಣಕ್ಕೆ ನೀರಿನ ಪೈಪ್‍ಲೈನ್‍ಗಳನ್ನು ಪರಿಶೀಲಿಸಿ ಎಲ್ಲೆಲ್ಲಿ ಛೇಂಬರ್‍ಗಳು ತೆರೆದಿದೆಯೋ ಅಲ್ಲಿ ಅವುಗಳನ್ನು ಭದ್ರಪಡಿಸಿ ಹಾಗೂ ನೀರು ಸೋರಿಕೆಯಾಗುವ ಕಡೆಗಳಲ್ಲಿ ಅವುಗಳನ್ನು ಸರಿಪಡಿಸಬೇಕಾಗಿದೆ. ಇನ್ನಾದರೂ ಸಂಬಂಧಪಟ್ಟವರು ಎಚ್ಚರವಹಿಸಿ ಆಗಬಹುದಾದ ಅನಾಹುತ ತಪ್ಪಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ಬಾಕ್ಸ್-ಹಾಡು ಹಗಲಿನಲ್ಲೇ ವರ್ಷಗಟ್ಟಲೆಯಿಂದ ನೀರು ಸೋರಿಕೆಯಾಗುತ್ತಿದ್ದರು ಅಧಿಕಾರಿಗಳು ಗಮನ ಹರಿಸದಿರುವುದು ಶಿರಸಿ ನಗರಸಭೆ ಅಧಿಕಾರಿಗಳ ಕಾರ್ಯವೈಖರಿಯನ್ನ ತಿಳಿಸುತ್ತದೆ. ಈ ಕೂಡಲೇ ಅಧಿಕಾರಿಗಳು ಓಪನ್ ಛೇಂಬರ್‍ಗಳನ್ನ ಮುಚ್ಚಿ ಮುಂದೆ ಆಗಬಹುದಾದ ಅನಾಹುತವನ್ನ ತಪ್ಪಿಸಬೇಕು
ಆಕಾಶ್ ಎಸ್.ಕೆ ಸಿದ್ದಾಪುರ ತಾಲೂಕಾ ಅಧ್ಯಕ್ಷರು, ಕರ್ನಾಟಕ ನಾಡ ರಕ್ಷಣಾವೇದಿಕೆ,
Leave a Comment