ಹಳಿಯಾಳ :- ಹಳಿಯಾಳದ ಪ್ರಸಿದ್ದ ಮಹಾಗಣಪತಿ ದೇವಸ್ಥಾನದ 28 ನೇಯ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವದ ಅಂಗವಾಗಿ ದಿ.11 ಮತ್ತು 12 ಎರಡು ದಿನಗಳ ಕಾಲ ವಿಶೇಷ ಪುಜೆ ಪುನಸ್ಕಾರ, ಹೋಮ ಹವನಗಳು ಹಾಗೂ ರಥೋತ್ಸವ ವಿಜೃಂಭಣೆಯಿಂದ ನೆರವೆರಿದವು.
ಮಂಗಳವಾರ ದೇವಸ್ಥಾನದಲ್ಲಿ ನವಗ್ರಹ ಹೋಮ, ತತ್ವ ಕಲಾವೃದ್ದಿ ಹವನ, ಗಣಹೊಮ, ಸಹಸ್ರನಾಮ ಹೋಮ, ಮೃತ್ಯುಂಜು ಹೋಮ, ಬ್ರಹ್ಮಣಸ್ಪತಿ ಹೋಮ, ಅಥರ್ವಶಿರ್ಷ ಹೋಮ, ನವಗ್ರಹ ಬಲಿ, ಪುರ್ಣಾಹುತಿ, ಮಹಾಗಣಪತಿ ಮತ್ತು ಪರಿವಾರ ದೇವತೆಗೆ ಬಲಿ ಮಹಾ ಮಂಗಳಾರತಿ ಹಾಗೂ ಮಹಾಪ್ರಸಾದ ಕಾರ್ಯಕ್ರಮಗಳು ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನೆರವೆರಿದವು.
ಮಾಜಿ ಶಾಸಕ ಸುನೀಲ್ ಹೆಗಡೆ, ತಾಯಿ ಸುನೀತಾ ಹಡೆಗೆ, ಪತ್ನಿ ಸುವರ್ಣಾ,
ಸಚಿನ ಹಳ್ಳಿಕೆರಿ, ಜೆವಿ ಬೆಂಗಳೂರು, ಪ್ರಮೋದ ಹುನ್ಸವಾಡಕರ, ಶ್ರೀಕಾಂತ ಹೂಲಿ, ನಿಂಗರಾಜ ಹಳ್ಳಿಕೆರಿ, ವಿಶ್ವನಾಥ ಬೆಂಗಳೂರು, ಮಂಜುನಾಥ ಪಂಡಿತ, ಉದಯ ಹೂಲಿ, ಮೋಹನ ಬೆಳಗಾಂವಕರ ಮೊದಲಾವದರು ಇದ್ದರು.

Leave a Comment