ಹಳಿಯಾಳ:- ಹಳಿಯಾಳದ ದಂಗಲ ಕುಸ್ತಿ ಕಲಿಗಳು ಬೆಳಗಾವಿಯಲ್ಲಿ ನಡೆದ 2018-19ನೇ ಸಾಲಿನ ಪ್ರಥಮ “ಕರ್ನಾಟಕ ಕುಸ್ತಿ ಹಬ್ಬ’’ ಕುಸ್ತಿ ಪಂದ್ಯಾವಳಿಯಲ್ಲಿ ಪದಕಗಳ ಬೆಟೆಯಾಡಿದ್ದು 11 ಚಿನ್ನ ,04 ಬೆಳ್ಳಿ, 02 ಕಂಚು ಬಾಚಿಕೊಳ್ಳುವ ಮೂಲಕ ಹಳಿಯಾಳದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಳಿಯಾಳದ ಕ್ರೀಡಾ ವಸತಿ ನಿಲಯದ ಕುಸ್ತಿ ಪಟುಗಳಾಗಿರುವ ಇವರು ಕಳೆದ ಬಾರಿ ಇದೆ ರೀತಿ 18 ಪ್ರಶಸ್ತಿಗಳನ್ನು ಗಳಿಸಿ ಹೆಸರು ಮಾಡಿದ್ದರು ಈಗ 17 ಪ್ರಶಸ್ತಿಗಳಿಗೆ ಮುತ್ತಿಕ್ಕುವುದರ ಮೂಲಕ ರಾಷ್ಟ್ರಮಟ್ಟದ ಕುಸ್ತಿಯಲ್ಲಿಯೂ ತಾವು ಸಾಧನೆ ಮಾಡಬಲ್ಲೆವು ಎಂದು ತೊರಿಸಿಕೊಡುವ ಸಾಧನೆ ಮಾಡಿದ್ದಾರೆ.
14 ವರ್ಷ- ಬಾಲಕಿಯರು:- 36 ಕೆ.ಜಿ ವಿಭಾಗದಲ್ಲಿ ಶ್ವೇತಾ ಅಣ ್ಣಕೇರಿ- ಚಿನ್ನ, 46 ಕೆ.ಜಿ ವಿಭಾಗದಲ್ಲಿ ಗಾಯತ್ರಿ ಸುತಾರ-ಚಿನ್ನ(ಬಾಲ ಕೇಸರಿ), ದ್ರಾಕ್ಷಾಯಣ ಕವರೇಕರ 50 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಶಾಲಿನಾ ಸಿದ್ದಿ 46 ಕೆ.ಜಿ-ಬೆಳ್ಳಿ.
17ವರ್ಷದ ಬಾಲಕಿಯರು:- ರೂಪಾ ಕೋಲೆಕರ 40 ಕೆ.ಜಿ-ಚಿನ್ನ, 43 ಕೆ.ಜಿ ವಿಭಾಗದಲ್ಲಿ ಕಾವ್ಯಾ ಘಟಗೋಳಕರ-ಚಿನ್ನ, ರಕ್ಷೀತಾ ಸೂರ್ಯವಂಶಿ 46ಕೆ.ಜಿ- ಚಿನ್ನ, ಸುಜಾತಾ ಪಾಟೀಲ 53 ಕೆ.ಜಿ- ಪ್ರಥಮ ಸ್ಥಾನ(ಕರ್ನಾಟಕ ಕಿಶೋರ), ಸ್ವಾತಿ ಅಣ ್ಣಕೇರಿ 43 ಕೆ.ಜಿ- ಬೆಳ್ಳಿ, ನಿಖಿತಾ ಢೇಪಿ 49 ಕೆ.ಜಿ- ಬೆಳ್ಳಿ, ಅಕ್ಷತಾ ತೋರಸ್ಕರ 40 ಕೆ.ಜಿ ವಿಭಾಗದಲ್ಲಿ ಕಂಚು.
18 ವರ್ಷಮೇಲ್ಪಟ್ಟ ಬಾಲಕಿಯರು:- ಲೀನಾ ಸಿದ್ದಿ 59 ರಿಂದ 76 ಕೆ.ಜಿ ವಿಭಾಗದಲ್ಲಿ ಪ್ರಥಮ ಸ್ಥಾನ(ಮಹಿಳಾ ಕರ್ನಾಟಕ ಕೇಸರಿ), ಮಮತಾ ಕೆಳೋಜಿ – 50 ಕೆ.ಜಿ ವಿಭಾಗದಲ್ಲಿ-ಬೆಳ್ಳಿ.
14 ವರ್ಷದೊಳಗಿನ ಬಾಲಕರ 57 ಕೆ.ಜಿ ವಿಭಾಗದಲ್ಲಿ ಅಶೋಕ ಮಾಕನ್ನವರ -ಚಿನ್ನ, 17 ವರ್ಷದೊಳಗಿನ ಬಾಲಕ – 45 ಕೆ.ಜಿ ವಿಭಾಗದಲ್ಲಿ ರೋಹನ ದೊಡ್ಮನಿ-ಚಿನ್ನ, ಸುಲೇಮಾನ ದೇವಕಾರಿ 48 ಕೆ.ಜಿ-ಚಿನ್ನ, ಶೈಲೇಶ ಸುತಾರ – 51 ಕೆ.ಜಿ- ಕಂಚಿನ ಪದಕ.
ವಿಶೇಷತೆ :- ಬಾಲಕಿಯರ ವಿಭಾಗದಲ್ಲಿ ಬಾಲ ಕೇಸರಿ,ಕರ್ನಾಟಕ ಕಿಶೋರ, ಮಹಿಳಾ ಕರ್ನಾಟಕ ಕೇಸರಿ ಪ್ರಶಸ್ತಿಗಳನ್ನು ಗೆದ್ದ ಹಳಿಯಾಳದ ದಂಗಲ ಕಲಿಗಳು. ಹಳಿಯಾಳದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಳಿಯಾಳದ ಕ್ರೀಡಾ ವಸತಿ ನಿಲಯದಲ್ಲಿ ತರಬೇತಿಯನ್ನು ಪಡೆಯುತ್ತಿರುವ ಈ ಯುವ ಕುಸ್ತಿ ಪಟುಗಳಿಗೆ ತರಬೇತುದಾರರಾದ ಕಾಡೇಶ ನ್ಯಾಮಗೌಡ ಮತ್ತು ಬಾಳಕೃಷ್ಣ ದಡ್ಡಿ ಉತ್ತಮ ತರಬೇತಿಯನ್ನು ನೀಡುತ್ತಿದ್ದಾರೆ. ಕುಸ್ತಿ ಪಟುಗಳ ಸಾಧನೆಗೆ ಹಳಿಯಾಳದ ಗಣ್ಯರಿಂದ ಅಭಿನಂದನೆಗಳು ಸಲ್ಲಿಸಲಾಗಿದೆ.
Leave a Comment