
ಶಿರಸಿ :- ತಾಲೂಕಿನ ಕಾನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬಾಳಗಾರನಲ್ಲಿ ಕಳೆದ ೧೫ ದಿನಗಳಿಂದ ಚಿರತೆಯ ಹಾವಳಿ ಹೆಚ್ಚಾಗಿದ್ದು ಈ ಭಾಗದ ಸಾರ್ವಜನಿಕರು ಆತಂಕಕ್ಕೆ ಇಡಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಚಿರತೆ ದಾಳಿಯಿಂದ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ ದನವನ್ನು ತಿಂದು ಹೋಗಿದ್ದು ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ಪರಿಶಿಲಿಸಿದ್ದಾರೆ.
ಕಾನಸೂರು ಫಾರೇಸ್ಟರ ವಸಂತ ಬ್ಯೆಂದೂರ ಈಗಾಗಲೇ ಪಂಚನಾಮೆ ನಡೆಸಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದು ಊರ ನಾಗರಿಕರು ಮಾತ್ರ ಇದು ಚಿರತೆ ಅಲ್ಲ ಹುಲಿ ಎಂದು ಹೇಳುತ್ತಿದ್ದು ಜನರು ಮಾತ್ರ ಆತಂಕದಲ್ಲೇ ದಿನ ಕಳೆಯುತ್ತಿದ್ದಾರೆ.
Leave a Comment