
ಶಿರಸಿ ಫೆ24: ಮನೆಗೆ ಆಕಸ್ಮಿಕ ಬೆಂಕಿ ಬಿದ್ದು, ಮಾರಾಟಕ್ಕೆ ತಂದಿದ್ದ ಇಲೆಕ್ಟ್ರಾನಿಕ್ ವಸ್ತುಗಳು ಸೇರಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ನಡೆದಿದೆ.
ದಾಸನಕೊಪ್ಪದ ರುಕ್ಮಿಣಿ ಎಂಬುವವರು ಬಾಡಿಗೆಗೆ ವಾಸವಿದ್ದ ಮನೆಗೆ ಬೆಂಕಿ ತಗುಲಿದ್ದು, ಬೀದಿ ಬೀದಿಯಲ್ಲಿ ಮಾರಾಟ ಮಾಡಲು ತಂದಿದ್ದ ಮಿಕ್ಸಿ, ಫ್ಯಾನ್, ಗ್ರ್ಯಾಂಡರ್, ಪಾತ್ರೆಗಳು ಸೇರಿದಂತೆ 2.5ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿದೆ.
ಇಲೆಕ್ಟ್ರಾನಿಕ್ ವಸ್ತುಗಳ ಜೊತೆಯಲ್ಲಿ ಮನೆಯಲ್ಲಿದ್ದ ಚಿನ್ನಾಭರಣ, 12 ಸಾವಿರ ಹಣ ಸೇರಿದಂತೆ ದಿನಬಳಕೆ ವಸ್ತುಗಳೂ ಸೇರಿ ಒಟ್ಟೂ 5 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದೆ. ಬೆಂಕಿ ಕಂಡೊಡನೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು ಬೆಂಕಿ ನಂದಿಸಿದ್ದಾರೆ.
ದೇವರಿಗೆ ಹಚ್ಚಿದ್ದ ದೀಪದಿಂದ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment