
ಲಯನ್ಸ್ ಕ್ಲಬ್ ಹೊನ್ನಾವರ ಇವರು ಆಯೋಜಿಸಿದ ರಾಜ್ಯಮಟ್ಟದ ಆಹ್ವಾನಿತ ತಂಡದ ಪುರುಷ ಹಾಗೂ ಮಹಿಳೆಯರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಜಿಲ್ಲಾ ಲಯನ್ಸ್ ಸೆಂಕಡರಿ ಗರ್ವನರ್ ಗಿರೀಶ ಕುಚಿನಾಡು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿ ಕಳೆದ ೨೫ ವರ್ಷಗಳಿಂದ ಲಯನ್ಸ್ ಸದಸ್ಯನಾಗಿದ್ದು ಈ ಕಾರ್ಯಕ್ರಮ ಉದ್ಘಾಟನೆ ಮಾಡುವ ಸುಯೋಗ ಬಂದಿರುವುದು ಹೆಮ್ಮೆ . ವಿಶ್ವದ ವಿವಿಧ ಸಂಘಟನೆ ಇದ್ದರೂ ನಮ್ಮ ಲಯನ್ಸ ಸಂಘಟನೆಯು ಮುಂಚೂನೆಯಲ್ಲಿದೆ. ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಈ ಭಾಗದ ಡಯಾಲಿಸಿಸ್ ಸಮಸ್ಯೆ ಸಹಾಕಾರ ನೀಡುವ ಮೂಲಕ ಇತರೆ ಸಂಘಟನೆಗೆ ಮಾದರಿ ಆಗುವಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶುಭಹಾರೈಸಿದರು.
ಕ್ರೀಡಾಂಗಣವನ್ನು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕರಾದ ಸುನೀಲ ನಾಯ್ಕ ಚಾಲನೆ ನೀಡಿದ ನಂತರ ಮಾತನಾಡಿ ಜನಪ್ರತಿನಿಧಿ ಮಾಡುವ ಕೆಲಸ ಒಂದು ಸಂಘಟನೆ ಮಾಡುವುತ್ತಿರುವುದು ಹೆಮ್ಮೆ. ಮಾನವೀಯ ಮೌಲ್ಯ ಹೆಚ್ಚಿಸುವ ಇಂತಹ ಕಾರ್ಯಕ್ರಮ ಜಿಲ್ಲೆಗೆ ಮಾದರಿ ಕಾರ್ಯಕ್ರಮ.ಲಯನ್ಸ್ ಸಂಘಟಿಸುವ ಪ್ರತಿಯೊಂದು ಕಾರ್ಯಕ್ರಮವು ಉತ್ತಮ ಆಗಿದೆ. ಕ್ರೀಡಾಭಾವನೆಯಿಂದ ಕ್ರೀಡಾ ಸ್ಪೂರ್ತಿ ಮೆರೆದು ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ಸ್ಪರ್ಧಾಳುವಿಗೆ ಕರೆನೀಡಿದರು.
ಲಯನ್ಸ್ ಅಧ್ಯಕ್ಷ ರಾಜೇಶ ಸಾಲೆಹಿತ್ತಲ್ ಮಾತನಾಡಿ ಹಲವು ಸಮಾಜಮುಖಿ ಕಾರ್ಯಕ್ರಮವನ್ನು ಏರ್ಪಟಿಸುವ ಮೂಲಕ ತಾಲೂಕಿನ ಜನರ ಮನ್ನಣಿ ಪಡೆದಿರುವ ಲಯನ್ಸ್ ಕ್ಲಬ್ ಈ ವಾಲಿಬಾಲ್ ಸ್ಪರ್ಧೆ ಏರ್ಪಡಿಸುವ ಮೂಲಕ ಬಂದ ಹಣದಿಂದ ಡಯಾಲಿಸಸ್ ಯಂತ್ರವನ್ನು ಸೆಂಟ್ ಇಗ್ನೆಶಿಯಸ್ ಆಸ್ಪತ್ರೆಗೆ ನೀಡುವ ಗುರಿಯನ್ನು ಹೊಂದಿದ್ದೇವೆ ಎಂದು ಕಾರ್ಯಕ್ರಮದ ಆಯೋಜನೆಯ ಕುರಿತು ಹಾಗೂ ಒಂದು ವರ್ಷದ ಲಯನ್ಸ್ ಸಾಧನೆಯನ್ನು ವಿವರಿಸಿದರು
ವೇದಿಕೆಯಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ರಾಜಶ್ರೀ ನಾಯ್ಕ, ನವೊಲ್ಲಾಸ ಕ್ರೀಡಾ ಘಟಕದ ಅಧ್ಯಕ್ಷರಾದ ಕಿರಣ ಪ್ರಭು, ವಾಲಿಬಾಲ್ ಏಕಲವ್ಯ ಪ್ರಶಸ್ತಿ ಎನ್.ಜಿ.ಹೆಗಡೆ, ಜಿ.ವಿ.ಬಿಂದಗಿ,ಸುರೇಶ ಎಸ್,ಯೋಗಿಶ ರಾಯ್ಕರ್ ಉಪಸ್ಶಿತರಿದ್ದರು
೫ ಪುರುಷ ತಂಡ ೪ ಮಹಿಳಾ ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಆಗಮಿಸಿದ ಸರ್ವರನ್ನು ಪ್ರಮೋದ ಪಾಯ್ದೆ ಸ್ವಾಗತಿಸಿದರೆ, ಎಸ್.ಜೆ.ಕೈರನ್ ಪ್ರಸ್ತಾವಿಕವಾಗಿ ಮಾತನಾಡಿದರೆ ಯೋಗಿಶ ರಾಯ್ಕರ ವಂದಿಸಿದರು.

.
Leave a Comment