• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ವಿವಿಧ ನ್ಯಾಯಯುತ ಬೇಡಿಕೆ‌ ಈಡೇರಿಸುವಂತೆ ಆಗ್ರಹಿಸಿ – ಸಚಿವ ಆರ್ ವಿ ದೇಶಪಾಂಡೆ ಅವರಿಗೆ ಲಿಖಿತ ಮನವಿ.

March 5, 2019 by Yogaraj SK Leave a Comment

ಹಳಿಯಳ : ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ನ್ಯಾಯಯುತವಾದ ಬೇಡಿಕೆಗಳು ಸೇರಿದಂತೆ ಪ್ರತಿ ತಿಂಗಳು ಸಂಬಳ ವಿತರಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಆರೋಗ್ಯ ಸಹಾಯಕರ ಮತ್ತು ಮೇಲ್ವಿಚಾರಕರ ಕೇಂದ್ರ ಸಂಘದ ಹಳಿಯಾಳ ಶಾಖೆಯ ಕಿರಿಯ ಆರೋಗ್ಯ ಸಹಾಯಕರು ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.
ಸಚಿವ ದೇಶಪಾಂಡೆ ಅವರ ಹಳಿಯಾಳದ ಜನಸಂಪರ್ಕ ಕಾರ್ಯಾಲಯಕ್ಕೆ ಆಗಮಿಸಿದ ಕಿರಿಯ ಆರೋಗ್ಯ ಪುರುಷ ಮತ್ತು ಮಹಿಳಾ ಸಹಾಯಕರು ಸಚಿವರ ಆಪ್ತ ಸಹಾಯಕ ಬಸಯ್ಯಾ ಪತ್ರಿ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕಳೆದ 6 ತಿಂಗಳಿಂದ ಸಂಬಳ ಬಟವಟೆಯಾಗದ ಕಾರಣ ಜೀವನ ನಿರ್ವಹಣೆಯು ದುಸ್ತರವಾಗಿದೆ. ಅಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತೊಂದರೆಯಾಗುತ್ತಿದೆ. ಇಗಾಗಲೇ ಹಲವಾರು ಬಾರಿ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ತಾಲೂಕಾ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿ ತಿಂಗಳು ಸಂಬಳ ಬಟವಟೆ ಮಾಡುವಂತೆ ಆಗ್ರಹಿಸಿದ್ದಾರೆ.
ಪ್ರತಿ ವರ್ಷವು ಈ ಸಮಸ್ಯೆಯನ್ನು ಎದುರಿಸುತ್ತಾ ಸೇವೆಯಲ್ಲಿ ನಿರತರಾಗಿದ್ದೇವೆ. ಜನತೆಗೆ ಆರೋಗ್ಯ ಸೇವೆ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೈ ಜೋಡಿಸಿದ್ದೇವೆ. 5 ರಿಂದ 6 ತಿಂಗಳಿಗೊಮ್ಮೆ ಸಂಬಳವಾಗುತ್ತಿದ್ದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆ ಹಾಕಬೇಕಾಗಿದೆ. ಪ್ರತಿ ತಿಂಗಳು ಜೀವನ ನಿರ್ವಹಣೆ ಸೇರಿದಂತೆ ಇನ್ನಿತರ ವೆಚ್ಚಗಳನ್ನು ಭರಿಸುವುದು ಅಸಾಧ್ಯವಾಗಿದೆ ಎಂದಿದ್ದಾರೆ.
ಚಾರ್ಜ ಅಲವೇನ್ಸ್‍ಗಳು ಪ್ರತಿ ತಿಂಗಳು ಬಟವಡೆಯಾಗಬೇಕು, ಆರೋಗ್ಯ ಸಹಾಯಕರ ಲೆಕ್ಕ ಶೀರ್ಷಿಕೆಗಳಾದ 02,03 ಮತ್ತು 08 ಪ್ರವಾಸ ಭತ್ಯೆಗಳನ್ನು ಮೂರು ತಿಂಗಳಿಗೊಮ್ಮೆ ಬಡವಟೆ ಮಾಡಬೇಕು, ಪ್ರತಿಯೊಂದು ಸಭೆಗಳಲ್ಲಿ ನಮಗೆ ಕಡ್ಡಾಯವಾಗಿ ನಮ್ಮ ಮೂಲ ಪದನಾಮ ಹೊಂದಿದ್ದ ಆರೋಗ್ಯ ಸಹಾಯಕರು ಎಂದು ಕರೆಯಬೇಕು, ಆರೋಗ್ಯ ಸಹಾಯಕರ ಸೇವಾ ಪುಸ್ತಕವನ್ನು ದ್ವಿಪ್ರತಿಯಲ್ಲಿ ನಿರ್ವಹಿಸಲು ಅವಕಾಶ ನೀಡಬೇಕು, ಹೊಸದಾಗಿ ನೇಮಕವಾಗಿರುವವರ ವೇತನವನ್ನು ತಕ್ಷಣ ನೀಡಬೇಕು, ವಿಶೇಷ ಭತ್ಯೆಯನ್ನು ಕಿರಿಯ ಹಾಗೂ ಹಿರಿಯ ಸಹಾಯಕರಿಗೆ ಸಿಗುವಂತೆ ಮಾಡಬೇಕು ಹಾಗೂ ಟೈಂ ಬಾಂಡ್‍ಗಳನ್ನು ಸರಿಯಾದ ಸಮಯದ ಒಳಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಿರ್ವಹಿಸಿ ಜಿಲ್ಲಾ ಮಟ್ಟಕ್ಕೆ ಕಳುಹಿಸಲು ಸೂಚನೆ ನೀಡುವಂತೆ ಮನವಿಯ ಮೂಲಕ ಆಗ್ರಹಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: avarige likhita manavi, bahudinagaḷinda nenegudige biddiruva, demanding that the issue be solved, fair demands, īḍērisuvante āgrahisi, karnāṭaka rājya ārōgya, Karnataka state health, kiriya ārōgya sahāyakaru, Minister of State for Home Affairs Basavaya Patri, Minister of State for Home Affairs RV Deshpande, n'yāyayutavāda bēḍikegaḷu, saciva ār vi dēśapāṇḍe, Sacivara āpta sahāyaka basayyā patri, salary distribution, samasyege parihāra, sambaḷa vitaraṇe, the junior health assistants, various fair demand, vividha n'yāyayuta bēḍike‌, written a letter to him, ಅವರಿಗೆ ಲಿಖಿತ ಮನವಿ, ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಆರೋಗ್ಯ, ಕಿರಿಯ ಆರೋಗ್ಯ ಸಹಾಯಕರು, ನ್ಯಾಯಯುತವಾದ ಬೇಡಿಕೆಗಳು, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ, ವಿವಿಧ ನ್ಯಾಯಯುತ ಬೇಡಿಕೆ‌, ಸಚಿವ ಆರ್ ವಿ‌ ದೇಶಪಾಂಡೆ, ಸಚಿವರ ಆಪ್ತ ಸಹಾಯಕ ಬಸಯ್ಯಾ ಪತ್ರಿ, ಸಂಬಳ ವಿತರಣೆ, ಸಮಸ್ಯೆಗೆ ಪರಿಹಾರ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar