ಹಳಿಯಳ :- ಪಟ್ಟಣದ ಬಸವನಗಲ್ಲಿಯಲ್ಲಿರುವ ಶ್ರೀ ಶನೇಶ್ವರ ದೇವರ ದ್ವಿತಿಯ ವರ್ಧಂತಿ ಮಹೋತ್ಸವ ಶ್ರದ್ದಾಭಕ್ತಿ ಹಾಗೂ ವಿಜೃಂಭಣೆಯಿಂದ ನಡೆಯಿತು.
ದಿ.4 ಮತ್ತು 5 ರಂದು 2 ದಿನಗಳ ಕಾಲ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ದಿ.4 ರಂದು ಶನೇಶ್ವರ ದೇವರಿಗೆ ಅಭೀಷೇಕ, ರಾತ್ರಿ ತೇಗನಳ್ಳಿ ಭಜನಾ ಮಂಡಳಿಯಿಂದ ಭಾರೂಢ ಕಾರ್ಯಕ್ರಮ, ನಿರಲಗಾದ ಸಂಗೀತ ಭಜನಾ ಮಂಡಳದ ಶೀವಾಜಿ ದುಮಾಳೆ ಅವರಿಂದ ಕೀರ್ತನೆ, ಭಜನಾ ಕಾರ್ಯಕ್ರಮದ ಮೂಲಕ ಶಿವರಾತ್ರಿ ಜಾಗರಣೆ ಮಾಡಲಾಯಿತು.
ದಿ.5 ಮಂಗಳವಾರದಂದು ಶನೇಶ್ವರ ದೇವರಿಗೆ ರುದ್ರಾಭಿಷೇಕ ಹಾಗೂ ಶನೇಶ್ವರ ಶಾಂತಿ ಹೋಮದ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.
Leave a Comment