ಹಳಿಯಳ :- ತಾಲೂಕಿನ ತಟ್ಟಿಗೇರಿ ಗ್ರಾಮದಲ್ಲಿ 12 ವರ್ಷದ ಬಳಿಕ ಗ್ರಾಮ ದೇವತೆಯರಾದ ದ್ಯಾಮವ್ವಾ ಹಾಗೂ ದುರ್ಗಾಮಾತೆಯರ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾತ್ರೆಯ ಪ್ರಮುಖ ಘಟ್ಟ ದೇವಿಯರ ಹೊನ್ನಾಟ ಮಂಗಳವಾರ ನಡೆಯಿತು.
ದಿ.21 ಕ್ಕೆ ಪ್ರಾರಂಭವಾಗಿರುವ ಜಾತ್ರೆ ದಿ.8 ರವರೆಗೆ ಸುಧೀರ್ಘ 16 ದಿನಗಳ ಕಾಲ ನಡೆಯಲಿದೆ. ಅರಣ್ಯದಂಚಿನ ಗ್ರಾಮವಾಗಿರುವ ತಟ್ಟಿಗೇರ ಜಾತ್ರೆಗೆ ತಾಲೂಕು, ಪಕ್ಕದ ಜಿಲ್ಲೆಗಳು ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ದೇವಿಯರ ಜಾತ್ರೆಯೊಂದಿಗೆ ಹಜರತ ಅದಂ ದೆಸಾಯಿವಲಿ ದೇವರ ಉರುಸು ಕೂಡ ನಡೆದಿದ್ದು ಜಾತ್ರೆಯ ವಿಶೇಷತೆಯಾಗಿದ್ದು ಹಿಂದೂ-ಮುಸ್ಲಿಂ ಭಾವೈಕ್ಯತೆ ಹಾಗೂ ಸೌಹಾರ್ದತೆಗೆ ಗ್ರಾಮ ಸಾಕ್ಷೀಯಾಗಿದೆ.
ಜಾತ್ರೆಯ ಪ್ರಮುಖ ಘಟ್ಟವಾದ ದಿ.5 ಮಂಗಳವಾರದಂದು ಗ್ರಾಮದೇವತೆಯರಾದ ದ್ಯಾಮವ್ವಾ ಹಾಗೂ ದುರ್ಗಾಮಾತೆಯರ ಹೊನ್ನಾಟ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಉಧೋ ಉಧೋ- ಹರ ಹರ ಮಹಾದೇವ ಘೊಷಣೆಗಳೊಂದಿಗೆ ಭಂಡಾರದ ಓಕುಳಿಯಾಡಿ ಭಕ್ತಿಯ ಪರಾಕಾಷ್ಟೇ ಮೆರೆದರು. ಬೋಗುರು ಹಾಗೂ ಮಸಳಿಕಟ್ಟಿ ಗ್ರಾಮಗಳಲ್ಲಿ ದೇವಿಯರ ಹೊನ್ನಾಟ ವಿಜೃಂಭಣೆಯಿಂದ ನಡೆಯಿತು.
Leave a Comment