
ದಾಂಡೇಲಿ :- ಸಿದ್ದರಾಮಯ್ಯನವರ ತಿಲಕ ಇಟ್ಟವರನ್ನು ಕಂಡರೆ ಭಯವಾಗುತ್ತದೆ ಎಂಬ ಹೇಳಿಕೆ ಹಾಗೂ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೋಲ್ಲಬೇಕು ಎಂದು ಬೇಜವಾಬ್ದಾರಿ ತನದ ಹೇಳಿಕೆ ನಿಡಿದ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಹೇಳಿಕೆಯನ್ನು ಖಂಡಿಸಿ
ದಾಂಡೇಲಿ ನಗರದ ಅಟಲ್ ಅಭಿಮಾನಿ ಸಂಘಟನೆ ಹಾಗೂ ಭಜರಂಗದಳ ವತಿಯಿಂದ ದಾಂಡೇಲಿ ನಗರದ ಬಸ್ ನಿಲ್ದಾಣದ ಎದುರುಗಡೆ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ ಹಾಗೂ ಸಂತೋಷ ಸೋಮನಾಚೆ ಸಿದ್ದರಾಮಯ್ಯನವರು ಅಧಿಕಾರ ಕಳೆದುಕೊಂಡಾಗಿನಿಂದ ಮಾನಸಿಕ ಅಸ್ವಸ್ಥರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅಧಿಕಾರ ಇದ್ದಾಗಲು ಕೂಡ ಅವರು ಹಿಂದು ವೀರೋಧಿ ನೀತಿಯನ್ನು ಅನುಸರಿಸುತ್ತಿದ್ದರು ಅಧಿಕಾರ ಹೋದಾಗಲು ಅದನ್ನೆ ಮುಂದುವರೆಸಿಕೊಂಡು ಬರುತ್ತಿದ್ದಾರೆ ಕೂಡಲೆ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಬಳಿ ಕ್ಷಮೆ ಯಾಚಿಸಬೇಕು ಮತ್ತೆ ಮುಂದೆ ಈ ರೀತಿ ಬೇಜವಾಬ್ದಾರಿತನದ ಹೇಳಿಕೆ ನಿಡುವುದನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಅಟಲ್ ಸಂಘಟನೆ ಮುಖಂಡರಾದ. ರಾಮಾ ನಾಯ್ಡು, ಜೋತಿಬಾ ತುಳಸೆಕರ, ಎಮ್ ಎಸ್ ನಾಯ್ಕ, ರವೀಂದ್ರ ಶಾ, ಅನಂತ ನಾಯ್ಕ, ಗಂಗಾಧರ, ಪವನ ಅವೋರ್ಲಿ
ನಗರ ಸಭಾ ಸದಸ್ಯರಾದ ಬುದ್ದಿವಂತ ಗೌಡ ಪಾಟೀಲ್, ವಿಜಯ ಕೋಲೆಕರ್ ಹಾಗೂ ಭಜರಂಗದಳ ಮುಖಂಡರಾದ ಲಿಂಗಯ್ಯ ಪೂಜಾರ, ಚಂದ್ರ ಮೌಳಿ, ರಾಜೇಶ್ ಗಿರಿ, ರವಿ ಕಾಮತ್ಶಂ,ಶಂಕ್ರಯ್ಯ ಹೀರೆಮಠ..ಸಂದಿಪ್ ನಾಯ್ಕ.ಲಾಲ ಸಿಂದ. ಉದಯ ನಾಯ್ಕ.ಮಂಜು ಸಿಂತೆ.ನಾಗಯ್ಯ ಪೂಜಾರ..ಹಾಗೂ ಮುಂತಾದವರು ಉಪಸ್ಥಿತರಿದ್ದರು

Leave a Comment