ಹಳಿಯಾಳ:- ಈ ಬಾರಿಯ ಲೋಕಸಭಾ ಚುನಾವಣೆ ದೇಶದ ಬದ್ದತೆ, ಅಖಂಡತೆ, ಸುರಕ್ಷತೆಯ ಚುನಾವಣೆಯಾಗಿದ್ದು ಮತದಾರರು ದೇಶದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮತದಾನ ಮಾಡಬೇಕಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.
:ಕ್ಷೀಪ್ರ ಅಭೀವೃದ್ದಿ ಕಂಡ ದೇಶ :-
ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವವೇ ಮೆಚ್ಚುವಂತೆ ಆಡಳಿತ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸಲಿದ್ದೇವೆ. 60 ವರ್ಷದಲ್ಲಿ ಕಾಂಗ್ರೇಸ್‍ನವರು ದೇಶವನ್ನು ಅಧೋಗತಿಗೆ ತಳ್ಳಿದ್ದರು. ಆದರೇ ಮೋದಿಜಿಯವರು ದೇಶವನ್ನು ವಿಶ್ವದಲ್ಲೇ ಪ್ರಭಲ ರಾಷ್ಟ್ರವನ್ನಾಗಿ ಮಾಡಿದ್ದು. 5 ವರ್ಷದ ಆಡಳಿತಾವಧಿಯಲ್ಲಿ ಕ್ಷೀಪ್ರ ಅಭಿವೃದ್ದಿಯನ್ನು ದೇಶ ಕಂಡಿದೆ ಎಂದರು.
ಬಡವರ ಧ್ವನಿಯಾಗಿ ಕೆಲಸ:-
ಮೇಕ್ ಇನ್ ಇಂಡಿಯಾ, ಸ್ಕೀಲ್ ಇಂಡಿಯಾ, ಮುದ್ರಾ ಯೋಜನೆಗಳಿಂದ ಯುವ ಜನತೆ, ಪ್ರತಿಭಾವಂತರು ಸ್ವಾವಲಂಭಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದರೇ ದೇಶದ ಪ್ರತಿಯೊಂದು ಮೂಲೆ ಮೂಲೆಗಳಲ್ಲು ವಿದ್ಯುತ್ ಸಂಪರ್ಕ, ಶೌಚಾಲಯ, ಗ್ಯಾಸ ಸಿಲಿಂಡರ್, ಮನೆ ಹೀಗೆ ಅನೇಕ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಬಡಜನರ ಧ್ವನಿಯಾಗಿ ಬಿಜೆಪಿ ಸರ್ಕಾರ ಕೇಲಸ ಮಾಡಿದೆ.
ಎನ್.ಡಿ.ಎ. ಮೈತ್ರಿಕೂಟ 340 ಸ್ಥಾನಗಳನ್ನು ಅದರಲ್ಲಿ ಬಿಜೆಪಿ ಪಕ್ಷ 290ಸ್ಥಾನಗಳನ್ನು ಗಳಿಸಿ ಬಹುದೊಡ್ಡ ಬಹುಮತದೊಂದಿಗೆ ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚನೆಯಾಗುವುದು ಶತಸಿದ್ದ ಎಂದು ಹೆಗಡೆ ಭವಿಷ್ಯ ನುಡಿದರು.
ಜಿಲ್ಲೆಯ ಅಭೀವೃದ್ದಿಗೆ ಸಂಸದ ಹೆಗಡೆ ಕಾರಣ:-
ಉತ್ತರ ಕನ್ನಡ ಜಿಲ್ಲೆಯಲ್ಲಿ ಜನರ ಆರ್ಥಿಕ ಸ್ಥಿತಿಗತಿ ಹಾಗೂ ಶೈಕ್ಷಣಿಕವಾಗಿ ಮೇಲೆ ಬರಲು, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಉತ್ತಮ ರಸ್ತೆಗಳನ್ನು ಕಾಣಲು, ಹಳ್ಳಿಗಳಿಗೆ ವಿದ್ಯುತ್ ವ್ಯವಸ್ಥೆ, ಸೀಬರ್ಡ ನಿರಾಶ್ರೀತರ ಪರಿಹಾರ ದೊರಕಿಸುವುದು ಹೀಗೆ ಅನೇಕ ಅಭೀವೃದ್ದಿಪರ ಯೋಜನೆಗಳು ಜನರಿಗೆ ಸಿಗಲು ಸಂಸದ ಸಚಿವರಾಗಿರುವ ಅನಂತಕುಮಾರ ಹೆಗಡೆ ಅವರೇ ಕಾರಣವಾಗಿದ್ದಾರೆ.
ಬಹಿರಂಗ ಚರ್ಚೆಗೆ ಸಿದ್ದ :-
ಕೇಂದ್ರದ ಯೋಜನೆಗಳನ್ನು ತಮ್ಮ ಯೋಜನೆಗಳೆಂದು ಬಿಟ್ಟಿ ಪ್ರಚಾರ ಪಡೆಯುವ ರಾಜ್ಯ ಸಮ್ಮಿಶ್ರ ಸರ್ಕಾರ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರು ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳ ಶ್ವೇತಪತ್ರ ಹೊರಡಿಸಲಿ ನಾವು ಅನಂತಕುಮಾರ ಹೆಗಡೆ ಅವರು ಮಾಡಿದ ಅಭಿವೃದ್ದಿ ಕಾರ್ಯಗಳ ಬಗ್ಗೆ ದಾಖಲೆ ಬಿಡುಗಡೆಗೊಳಿಸುತ್ತೇವೆ ಅಲ್ಲದೇ ಬಹಿರಂಗ ಚರ್ಚೆಗೂ ಸಿದ್ದ ಎಂದು ಸವಾಲ್ ಹಾಕಿದರು.
ಶ್ವೇತಪತ್ರ ಹೊರಡಿಸಿ:-
ಗ್ರಾಪಂ, ತಾಪಂ, ಪುರಸಭೆ ಆಡಳಿತದಲ್ಲಿ ಸಂಸದರು ಹಸ್ತಕ್ಷೇಪ ಮಾಡಲು ಬರುವುದಿಲ್ಲ ಅವರು ಸಾಕಷ್ಟು ಯೋಜನೆಗಳು, ಅನುದಾನ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಬಂದು ರಾಜ್ಯ ಸರ್ಕಾರದಿಂದ ನಿರ್ವಹಿಸಲ್ಪಡುವ ಕಾರಣ ಸಂಸದರು ಎಲ್ಲೂ ವಿನಾಃಕಾರಣ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಸುನೀಲ್ ರಸ್ತೆ ಕಾಮಗಾರಿ, ಚರಂಡಿ ನಿರ್ಮಾಣ, ಶಂಕು ಸ್ಥಾಪನೆಗಳಿಂದಲೇ ಅಭಿವೃದ್ದಿಯನ್ನು ಅಳೆಯಲು ಆಗುವುದಿಲ್ಲ ಸಚಿವ ದೇಶಪಾಂಡೆ ಅವರು ಜಿಲ್ಲೆಗೆ ಎಷ್ಟು ಕೈಗಾರಿಕೆಗಳನ್ನು ತಂದಿದ್ದಾರೆ. ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಠಿಸಿದ್ದಾರೆ. ಎಷ್ಟು ಕೈಗಾರಿಕೆ ಮೇಳಗಳನ್ನು ಮಾಡುವ ಮೂಲಕ ನಿರುದ್ಯೋಗಿಗಳಿಗೆ, ಜಿಲ್ಲೆಯ ಯುವಕರು ಉದ್ಯೋಗ ಹೊಂದುವಂತೆ ಕಾಳಜಿ ವಹಿಸಿದ್ದಾರೆಂದು ಸಮಗ್ರ ಚಿತ್ರಣವುಳ್ಳ ಶ್ವೇತಪತ್ರವನ್ನು ಹೊರಡಿಸಲಿ ಎಂದು ಸವಾಲ್ ಹಾಕಿದ ಸುನೀಲ್ ಹೆಗಡೆ ಜಿಲ್ಲೆ ಹಿಂದೂಳಿಯಲು ಹಾಗೂ ಯೋಜನೆಗಳ ವಿಳಂಬಕ್ಕೆ ಸಚಿವ ಆರ್.ವಿ.ದೇಶಫಾಂಡೆ ಪ್ರತಿಯೊಂದು ಹಂತದಲ್ಲಿ ರಾಜಕಾರಣ ಮಾಡುವು, ಎಲ್ಲರದಲ್ಲೂ ಮೂಗು ತೂರಿಸುವುದೇ ಕಾರಣ ಎಂದರು.
1.40 ಲಕ್ಷ ಕಾರ್ಯಕರ್ತರ ಪಡೆ:-
ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ 217 ಬೂತಗಳಿದ್ದು. 9 ಮಹಾಶಕ್ತಿ ಕೇಂದ್ರ, 66 ಶಕ್ತಿ ಕೇಂದ್ರ ಪ್ರತಿ ಬೂತಗೆ 20 ರಿಂದ 30 ಕಾರ್ಯಕರ್ತರು ಪಕ್ಷಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು 6 ಸಾವಿರ ಕಾರ್ಯಕರ್ತರ ಪಡೆ ಹಳಿಯಾಳ ಕ್ಷೇತ್ರದಿಂದ ಹಾಗೂ ಕೆನರಾ ಲೋಕಸಭಾ ಕ್ಷೇತ್ರದಲ್ಲಿ 1ಲಕ್ಷ 40 ಸಾವಿರ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ದುಡಿಯಲಿದ್ದಾರೆಂದು ಬಿಜೆಪಿ ಹಳಿಯಾಳ ತಾಲೂಕಾಧ್ಯಕ್ಷ ಶಿವಾಜಿ ನರಸಾನಿ ಹಾಗೂ ಚುನಾವಣಾ ಉಸ್ತುವಾರಿ ಮಂಗೇಶ ದೇಶಪಾಂಡೆ ಮಾಹಿತಿ ನೀಡಿದರು.
ಪ್ರಶ್ನಾತೀತ ನಾಯಕರು:-
ಸಚಿವ ಅನಂತಕುಮಾರ ಹೆಗಡೆ ಅವರು ಪ್ರಶ್ನಾತೀತ ನಾಯಕರಾಗಿದ್ದು 5 ಬಾರಿ ಸಂಸದರಾಗಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿರುವ ಅವರೇ ಮತ್ತೊಮ್ಮೆ ಅಭ್ಯರ್ಥಿಯಾಗಬೆಕೆಂಬುದು ತಮ್ಮ ಹಾಗೂ ಎಲ್ಲರ ಆಶಯವಾಗಿದ್ದು ಅವರನ್ನೇ ಹೈಕಮಾಂಡ ಅಭ್ಯರ್ಥಿಯಾಗಿ ಕಣಕ್ಕಿಳಿಸಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಸುದ್ದಿಗೊಷ್ಠಿಯಲ್ಲಿ ಪುರಸಭೆ ಸದಸ್ಯರಾದ ಉದಯ ಹೂಲಿ, ಚಂದ್ರು ಕಮ್ಮಾರ, ರಾಜೇಶ್ವರಿ ಹಿರೇಮಠ, ಶಾಂತಾ ಹಿರೆಕರ, ರೂಪಾ ಅನಿಲ ಗಿರಿ, ಮುಖಂಡರಾದ ವಿಜಯ ಬೋಬಾಟಿ, ವಿಎಮ್ ಪಾಟೀಲ್, ಉಮೇಶ ದೇಶಪಾಂಡೆ, ಸಂತಾನ ಸಾವಂತ, ವಿಲಾಸ ಯಡವಿ, ಮಂಜು ಪಂಡಿತ, ಪ್ರದೀಪ ಹಿರೆಕರ, ಉಲ್ಲಾಸ ಬಿಡಿಕರ, ಬಾಬಿ ತೊರ್ಲೆಕರ, ತುಕಾರಾಮ ಪಟ್ಟೇಕರ ಮೊದಲಾದವರು ಇದ್ದರು.
Leave a Comment