• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಬಿಜೆಪಿ ಐತಿಹಾಸಿಕ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರ ರಚಿಸಲಿದೆ- ಮೋದಿ ಗೆಲುವಿಗಾಗಿ 3.75 ಕೋಟಿ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ- ಸಚಿವ ಅನಂತಕುಮಾರ ಹೆಗಡೆ

March 16, 2019 by Yogaraj SK Leave a Comment

ananth kumar,ಅನಂತಕುಮಾರ ಹೆಗಡೆ ನಡೆದು ಬಂದ ದಾರಿ

ಹಳಿಯಾಳ:- ದೇಶದಲ್ಲಿ ಬಿಜೆಪಿ ಎರಡು ಮೂರಾಂಶ ಬಹುಮತದಿಂದ ಮತ್ತೋಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿಯ ಎನ್.ಡಿಎ ಮೈತ್ರಿ ಕೂಟ ಈ ಬಾರಿ ಭಾರಿ ಬಹುಮತದೊಂದಿಗೆ ಐತಿಹಾಸಿಕ ಗೆಲುವನ್ನು ದಾಖಲಿಸಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು.
ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಮೋದಿಯವರು 5 ವರ್ಷದಲ್ಲಿ ಮಾಡಿರುವ ಸಾಧನೆಗಳಿಗೆ ದೇಶದ ಜನ ಮನಸೊತಿದ್ದು ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡುವ ಆಶಯ ವ್ತಕ್ತಪಡಿಸುತ್ತಿದ್ದು ಎಲ್ಲೆಡೆ ಸ್ಪೂರ್ತಿದಾಯಕ ಸ್ಪಂದನೆ ಬಿಜೆಪಿಗೆ ದೊರೆಯುತ್ತಿದೆ ಎಂದರು.
ಮೋದಿಯವರ ಅಪೇಕ್ಷೆಯಂತೆ ಕಾಂಗ್ರೇಸ್ ಮುಕ್ತ ಭಾರತವನ್ನು ಉತ್ತರ ಕನ್ನಡ ಜಿಲ್ಲೆಯಿಂದಲೇ ಪ್ರಾರಂಭಿಸಿದ್ದು ದೇಶದಲ್ಲಿ ಕಾಂಗ್ರೇಸ್‍ನವರು ಈಗಾಗಲೇ ಸೊತು ಶರಣಾಗಿದ್ದಾರೆಂದ ಹೆಗಡೆ ಪಕ್ಷದ ಸಂಘಟನೆ, ಕೊನೆಯ ಮಟ್ಟದ ವರೆಗೆ ಕಾರ್ಯಕರ್ತರ ಶ್ರಮ ಬಿಜೆಪಿಯ ಐತಿಹಾಸಿಕ ಗೆಲುವಿಗೆ ಕಾರಣವಾಗಲಿದೆ ಎಂದರು.
2014ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 28 ಸಾವಿರ ಹಾಗೂ ದೇಶದಲ್ಲಿ 3.75 ಕೊಟಿ ಬಿಜೆಪಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಶ್ರಮಿಸಿದ್ದರು. ಆದರೇ ಈಗ ಅದರಲ್ಲಿ ಗಣನೀಯ ಏರಿಕೆಯಾಗಿದ್ದು ತಾವೇ ಮುಂದೆ ಬಂದು ಮೋದಿಜಿಯವರ ಗೆಲುವಿಗಾಗಿ ಕೆನರಾ ಕ್ಷೇತ್ರದಲ್ಲಿ 1.17 ಲಕ್ಷ ಹಾಗೂ ದೇಶದಲ್ಲಿ 13.5 ಕೋಟಿ ಕಾರ್ಯಕರ್ತರು ಯಾವುದೇ ಫಲಾಫೇಕ್ಷೆ ಇಲ್ಲದೇ ಶ್ರಮಿಸುತ್ತಿದ್ದು ಇವರ ಕುಟುಂಬದ ಮತಗಳೇ ಬಿದ್ದರೇ ವಿಪಕ್ಷಗಳು ಧೂಳಿಪಟವಾಗಲಿವೆ ಎಂದರು ಹೆಗಡೆ.
ಭಾರತ ಈಗ ಬದಲಾಗಿದೆ ನಮ್ಮನ್ನು ಕೆಣಕಿದರೇ ನಾವು ಸುಮ್ಮನಿರಲ್ಲ ಎನ್ನುವುದನ್ನು ವಿಶ್ವಕ್ಕೆ ಮನವರಿಕೆ ಮಾಡಿ ಕೊಡಲಾಗಿದೆ. ದೇಶದಲ್ಲಿ ಈಗ ಹತಾಶೆ ನೋವು ಕಾಣಸಿಗುವುದಿಲ್ಲ –ದೇಶ ಬಲಾಢ್ಯವಾಗುತ್ತಿದೆ ಎಂದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಕೆನರಾ ಲೋಕಸಭಾ ಕ್ಷೇತ್ರದ ಭಾವಿ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಅವರು ಈ ಬಾರಿ 3 ಲಕ್ಷಕ್ಕೂ ಅಧಿಕ ಬಹುಮತದೊಂದಿಗೆ ಮತ್ತೆ ಆಯ್ಕೆಯಾಗಲಿದ್ದಾರೆ. ಈ ಬಾರಿ ಹಳೀಯಾಳ ಕ್ಷೇತ್ರದಿಂದಲೇ 90 ಸಾವಿರಕ್ಕೂ ಅಧಿಕ ಮತಗಳು ಬಿಜೆಪಿ ಪಡೆಯಲಿದೆ ಎಂದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News, Canara News Tagged With: 3.75 crore Bharatiya Janata Party (BJP), 3.75 crore for Modi's win, 3.75 Koṭi bijepi kāryakartaru, bijepi aitihāsika bahumatadondige mattom'me sarkāra racisalide, BJP's historic majority, en.Ḍi'e maitri kūṭa, kāṅgrēs mukta bhāratavannu, kāryakartaru śramisuttiddāre, kenarā kṣētra, Minister Ananthkumar Hegde., mōdi geluvigāgi 3.75 Kōṭi, mōdiyavara apēkṣeyante, NDA alliance, saciva anantakumāra hegaḍe, spūrtidāyaka spandane bijepi, uttara kannaḍa jilleyindalē, workers are working hard

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...