• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಗೋಸಂರಕ್ಷಣೆಗೆ ವೈಜ್ಞಾನಿಕ ಪರಿಭಾಷೆ ಅಗತ್ಯ: ರಾಘವೇಶ್ವರ ಶ್ರೀ

March 17, 2019 by Vishwanath Shetty Leave a Comment

Malnad Gidda- Swamiji Speech

ಹೊನ್ನಾವರ: ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಇಂದು ಭಾರತದಲ್ಲಿ ಧರ್ಮಶಾಸ್ತ್ರ, ಪ್ರಾಚೀನ ಗ್ರಂಥಗಳ ಅಗತ್ಯ ಎಷ್ಟಿದೆಯೋ ವೈಜ್ಞಾನಿಕ ಪರಿಭಾಷೆಯ ಅಗತ್ಯವೂ ಅಷ್ಟೇ ಇದೆ ಎಂದು ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಪ್ರತಿಪಾದಿಸಿದರು.

ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ- ಕರ್ನಾಟಕ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಗರದ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಲೆನಾಡು ಗಿಡ್ಡ ಹಬ್ಬ ಸಮಾರೋಪ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಇಂದಿನ ಪೀಳಿಗೆಗೆ ವೈಜ್ಞಾನಿಕ ಭಾಷೆಯಲ್ಲಿ ಹೇಳಿದರಷ್ಟೇ ಅರ್ಥವಾಗುತ್ತದೆ. ಆದ್ದರಿಂದ ದೇಶಿ ತಳಿಗಳ ಮಹತ್ವ ವಿವರಿಸುವಲ್ಲಿ ವಿಜ್ಞಾನದ ಪಾತ್ರ ಮಹತ್ವದ್ದು. ಮಲೆನಾಡು ಗಿಡ್ಡದಂಥ ಅಪೂರ್ವ ತಳಿಗಳ ಮಹತಿಯನ್ನು ಸಮಾಜ ಅರ್ಥ ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಲೆನಾಡು ಗಿಡ್ಡ ಹಬ್ಬದಂಥ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತ ಎಂದು ಬಣ್ಣಿಸಿದರು.

Malnad Gidda- Swamiji Speech

ಮನೆಯಲ್ಲಿ ಶೋಕಿಗಾಗಿ ನಾಯಿ ಸಾಕುವುದಕ್ಕಿಂತ ಮಲೆನಾಡು ಗಿಡ್ಡದಂಥ ತಳಿಗಳನ್ನು ಮನೆಯಲ್ಲೇ ಬೆಳೆಸಿದರೂ ಸಾಕಷ್ಟು ಪ್ರಯೋಜನವಿದೆ. ಈ ಅವಕಾಶವನ್ನು ನಾವು ಬಳಸಿಕೊಳ್ಳಬೇಕು; ಗೋವುಗಳನ್ನು ನಿಸ್ವಾರ್ಥವಾಗಿ ಸಾಕುವವರನ್ನು ಸಮಾಜ ಗುರುತಿಸಿ, ಗೌರವಿಸಬೇಕಿದೆ ಎಂದರು.

ಗೋವುಗಳನ್ನು ಸಾಗಾಣಿಕೆ ಮಾಡುವಲ್ಲಿ ಇಂದು ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಪ್ರಯಾಣದ ಸುಧೀರ್ಘ ಅವಧಿಯಲ್ಲಿ ಮೇವು, ನೀರು, ಗಾಯದ ಸಮಸ್ಯೆಯಂಥ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಗೋಸ್ವರ್ಗ ವಿಶೇಷ ವಾಹನ ಅಭಿವೃದ್ಧಿಪಡಿಸುತ್ತಿದೆ. ಅಂತೆಯೇ ಗೋವುಗಳಿಗೆ ಸಾಗಾಣಿಕೆಯಲ್ಲಿ ತೊಂದರೆಯಾಗದಂತೆ ಪ್ರತ್ಯೇಕ ಕಂಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿ, ಅದರಲ್ಲಿ ಮೇವು- ನೀರಿನ ಲಭ್ಯತೆ ಇರುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸಿದರು.

ಇಂದು ಗೋಸಾಕಾಣಿಕೆಯನ್ನು ಎಷ್ಟೋ ಮಂದಿ ತ್ಯಜಿಸಿ, ಗೋವುಗಳನ್ನು ಗೋಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಇದು ಸಲ್ಲದು. ನಮ್ಮ ಅಪೂರ್ವ ತಳಿಗಳ ಮಹತ್ವ ತಿಳಿದುಕೊಂಡು ಅದನ್ನು ಉಳಿಸಿ ಬೆಳೆಸಬೇಕು ಎಂದು ಸಲಹೆ ಮಾಡಿದರು.

ಗೋವುಗಳು ರೈತರ ಜತೆಗೆ, ಸಮಾಜದ ಜತೆಗೆ ಇದ್ದರಷ್ಟೇ ಸಮಾಜಕ್ಕೆ ಹಿತವಾಗುತ್ತದೆ. ಯಾವುದೋ ಸಂಘ ಸಂಸ್ಥೆ, ಮಠ ಮಾನ್ಯಗಳು ಇವುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡರೂ ಅದರ ಪ್ರಯೋಜನ ಸೀಮಿತವಾಗುತ್ತದೆ ಎಂದು ನುಡಿದರು.

ನಮ್ಮ ಸುತ್ತಲಿನ ಪರಿಸರ, ಗೋ ತಳಿಗಳನ್ನು ತಿಳಿದುಕೊಳ್ಳುವುದೇ ಆತ್ಮಜ್ಞಾನ. ಗೋಸಂಕುಲದಲ್ಲಿ ಭಾರತೀಯ ತಳಿಗಳು ಶ್ರೇಷ್ಠ. ಅದರಲ್ಲೂ ಮಲೆನಾಡು ಗಿಡ್ಡ ಸರ್ವಶ್ರೇಷ್ಠ. ನಮ್ಮ ಊರು, ದೇಶ, ಗಿಡಮರ, ಗೋವುಗಳ ಬಗ್ಗೆ ತಿಳಿವಳಿಕೆ ಅಗತ್ಯ. ಇದು ಎಷ್ಟೋ ಕೆಡುಕುಗಳನ್ನು ನಿವಾರಿಸಬಲ್ಲದು ಎಂದು ಹೇಳಿದರು. ಇದು ವಿಜ್ಞಾನದ ಜತೆಗೆ ಆಧ್ಯಾತ್ಮ ಕೂಡಾ ಹೌದು. ಗೋವಿನಲ್ಲಿ ನಮ್ಮ ಊಹೆಗೂ ನಿಲುಕದ ಹಲವು ಅಂಶಗಳಿವೆ. ಇವು ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ವೈಜ್ಞಾನಿಕ ಅಂಶಗಳನ್ನು ತಿಳಿದುಕೊಂಡರೂ ನಾವು ಗೋವುಗಳನ್ನು ಪೂಜಿಸಲು ಆರಂಭಿಸುತ್ತೇವೆ ಎಂದು ಅಭಿಪ್ರಾಯಪಟ್ಟರು.

Malnad Gidda- Swamiji Speech

ಎನ್‍ಡಿಆರ್‍ಐ ದಕ್ಷಿಣ ವಿಭಾಗ ನಿರ್ದೇಶಕ ಡಾ.ಕೆ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಗೋ ಪರಿವಾರ- ಕರ್ನಾಟಕದ ಖಜಾಂಚಿ ಮುರಳೀಧರ ಪ್ರಭು ಅವಲೋಕನ ನಡೆಸಿದರು. ಡಾ.ಎಂ.ಪಿ.ಕರ್ಕಿ, ಮಂಜುನಾಥ ಭಟ್ ಸುವರ್ಣಗದ್ದೆ, ರಾಜು ಹೆಬ್ಬಾರ್, ಡಾ.ವಿಶ್ವನಾಥ್ ವಿ.ಭಟ್, ತಾಲೂಕು ಗೋ ಪರಿವಾರದ ಅಧ್ಯಕ್ಷ ಯೋಗೀಶ್ ರಾಯ್ಕರ್ ಉಪಸ್ಥಿತರಿದ್ದರು.

ಗೋಸೇವೆಯಲ್ಲಿ ನಿರತರಾದ ವಿನಾಯಕ ಭಟ್ ಕಾನ್ಸೂರು, ಸುಬ್ರಾಯ ಪರಮೇಶ್ವರ ಶೆಟ್ಟಿ, ಸತೀಶ್ ಗೌಡ ಮುಲ್ಲೆಹಿತ್ಲು ಅವರನ್ನು ಸನ್ಮಾನಿಸಲಾಯಿತು. ಹೆಚ್ಚು ಹಾಲು ಕೊಡುವ ಹಸು ಸಾಕಿದವರಿಗೆ ಬಹುಮಾನ ವಿತರಿಸಲಾಯಿತು. 

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: adaralli mēvu- nīrina labhyate, ātmajñāna. Gōsaṅkuladalli bhāratīya taḷigaḷu śrēṣṭha. Adarallū malenāḍu giḍḍa sarvaśrēṣṭha. Nam'ma ūru, bhāratadalli dharmaśāstra, bhāratīya gō parivāra- karnāṭaka mattu rōṭari klab sanyukta āśraya, country, cow, dēśa, En‍ḍi'ār‍ai dakṣiṇa vibhāga, eṣṭideyō vaijñānika paribhāṣeya agatya, Gausswara special vehicle, giḍamara, gōsanrakṣaṇege vaijñānika, gōsvarga viśēṣa vāhana, gōvugaḷa, gōvugaḷannu nisvārtha, gōvugaḷannu sāgāṇike, ham'mikoṇḍidda, havyaka sabhābhavana, hawking ceremony, including fodder-water availability, Karnataka Rotary Club United Shelter, malenāḍu giḍḍa habba samārōpa, Not India Theology, organized by the National Dairy Research Institute, paribhāṣe agatya, plantation, prācīna granthagaḷa agatya, prācīna granthagaḷalli ullēkha, pratyēka kampārṭ‍meṇṭ‍gaḷannu nirmisi, Quote in Ancient Texts, Raghaveshwara Sri, rāghavēśvara śrī, rāṣṭrīya hainugārike sanśōdhanā sansthe, scientific, Self-Knowledge. Indian breeds are the best in coconut. Especially in the hilly terrain. Our home, selfless, separate compartments, South Division of NDRI, Terminology Required for Growing, the need for ancient texts, the need for scientific terminology, transportation of cattle, ಅದರಲ್ಲಿ ಮೇವು- ನೀರಿನ ಲಭ್ಯತೆ, ಆತ್ಮಜ್ಞಾನ. ಗೋಸಂಕುಲದಲ್ಲಿ ಭಾರತೀಯ ತಳಿಗಳು ಶ್ರೇಷ್ಠ. ಅದರಲ್ಲೂ ಮಲೆನಾಡು ಗಿಡ್ಡ ಸರ್ವಶ್ರೇಷ್ಠ. ನಮ್ಮ ಊರು, ಎನ್‍ಡಿಆರ್‍ಐ ದಕ್ಷಿಣ ವಿಭಾಗ, ಎಷ್ಟಿದೆಯೋ ವೈಜ್ಞಾನಿಕ ಪರಿಭಾಷೆಯ ಅಗತ್ಯ, ಗಿಡಮರ, ಗೋವುಗಳ, ಗೋವುಗಳನ್ನು ನಿಸ್ವಾರ್ಥ, ಗೋವುಗಳನ್ನು ಸಾಗಾಣಿಕೆ, ಗೋಸಂರಕ್ಷಣೆಗೆ ವೈಜ್ಞಾನಿಕ, ಗೋಸ್ವರ್ಗ ವಿಶೇಷ ವಾಹನ, ದೇಶ, ಪರಿಭಾಷೆ ಅಗತ್ಯ, ಪ್ರತ್ಯೇಕ ಕಂಪಾರ್ಟ್‍ಮೆಂಟ್‍ಗಳನ್ನು ನಿರ್ಮಿಸಿ, ಪ್ರಾಚೀನ ಗ್ರಂಥಗಳ ಅಗತ್ಯ, ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖ, ಭಾರತದಲ್ಲಿ ಧರ್ಮಶಾಸ್ತ್ರ, ಭಾರತೀಯ ಗೋ ಪರಿವಾರ- ಕರ್ನಾಟಕ ಮತ್ತು ರೋಟರಿ ಕ್ಲಬ್ ಸಂಯುಕ್ತ ಆಶ್ರಯ, ಮಲೆನಾಡು ಗಿಡ್ಡ ಹಬ್ಬ ಸಮಾರೋಪ, ರಾಘವೇಶ್ವರ ಶ್ರೀ, ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಹಮ್ಮಿಕೊಂಡಿದ್ದ, ಹವ್ಯಕ ಸಭಾಭವನ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...