ಹಳಿಯಾಳ:- ಹುಬ್ಬಳ್ಳಿಯ ಕೆ. ಎಲ್ ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಟಿ. ಸಿ. ಎಸ್. ಟೆಕ್ ಬೈಟ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಹಳಿಯಾಳದ ಕರ್ನಾಟಕ ಲಾ ಸೊಸೈಟಿ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿದ್ದಾರೆಂದು ಪ್ರಾಂಶುಪಾಲರಾದ ಡಾ|| ವಿ. ವಿ. ಕಟ್ಟಿ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಈ ಕ್ವಿಜ್ ಸ್ಪರ್ಧೆಯು ಟಿ. ಸಿ. ಎಸ್. ಮತ್ತು ಬೋರ್ಡ ಆಫ್ ಐಟಿ ಎಜುಕೇಶನ್ ಸ್ಟ್ಯಾಂಡಡ್ರ್ಯ್ ಸಂಸ್ಥೆಗಳ ಜಂಟೀ ಸಹಯೋಗದಲ್ಲಿ ಪ್ರತಿ ವರ್ಷ ಆಯೋಜಿಸಲ್ಪಡುತ್ತದೆ.
ಈ ವರ್ಷದ ಸ್ಪರ್ದೆಯಲ್ಲಿ ವಿದ್ಯಾರ್ಥಿಗಳಾದ ವಿಜೇತ ರೇವಣಕರ್ ಮತ್ತು ಮತಿಉರೆಹೆಮಾನ್ ಮೀರ್‍ಸೈಯದ್ ಅವರೇ ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದು ಮಾರ್ಚ್ 21 ರಂದು ಬೆಂಗಳೂರಿನ ಎಸ್. ಜಿ. ಬಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಟೆಕ್ ಬೈಟ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರಲ್ಲದೇ ಟಿ.ಸಿ.ಎಸ್.ಸಂಸ್ಥೆ ನೀಡುವ ರೂ 12,000 ದ ವಿದ್ಯಾರ್ಥಿ ವೇತನವನ್ನೂ ಪಡೆದುಕೊಂಡಿದ್ದಾರೆಂದು ಕಟ್ಟಿ ತಿಳಿಸಿದ್ದಾರೆ.
2014 ನೇ ಇಸ್ವಿಯಲ್ಲಿ ನಡೆದ ಇದೇ ಸ್ಪರ್ಧೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಯಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದೆಂದು ಡಾ|| ವಿ. ವಿ. ಕಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Leave a Comment