ಹಳಿಯಾಳ :- ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು ಮೈತ್ರಿ ಧರ್ಮದಂತೆ ಈಗಾಗಲೇ ಲೋಕಸಭಾ ಚುನಾವಣೆಗೆ ಸೀಟುಗಳ ಹಂಚಿಕೆಯಾಗಿದೆ. ಕಾಂಗ್ರೇಸ್ ಮತ್ತು ಜೆಡಿಎಸ್ 2 ಪಕ್ಷಗಳ ಕಾರ್ಯಕರ್ತರು ಹೈಕಮಾಂಡ ನಿರ್ಧಾರಕ್ಕೆ ಕಟಿಬದ್ದರಾಗಿ ಹೃದಯ ಶ್ರೀಮಂತಿಕೆಯಿಂದ ಮೈತ್ರಿ ಧರ್ಮ ಪಾಲಿಸಿದರೇ ರಾಜ್ಯದಲ್ಲಿ 22 ಸೀಟು ಗೆಲ್ಲುವುದು ಶತಸಿದ್ದ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್,ಎಚ್.ಕೊನರೆಡ್ಡಿ ಹೇಳಿದರು.
ಪಟ್ಟಣದಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳ ಆಧ್ಯಾತ್ಮಿಕ ಪ್ರವಚನದಲ್ಲಿ ಪಾಲ್ಗೊಂಡು ಬಳಿಕ ಕಿಲ್ಲಾ ಕೋಟೆಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳನ್ನು ಬೇಟಿಯಾಗಿ ಆಶೀರ್ವಾದ ಪಡೆದ ಅವರು ಬಳಿಕ ಸುದ್ದಿಗೊಷ್ಠೀಯಲ್ಲಿ ಮಾತನಾಡಿದರು.
ಕಾಂಗ್ರೇಸ್‍ನ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಜೆಡಿಎಸ್‍ನ ಎಚ್.ಡಿ.ದೇವೆಗೌಡ, ಕುಮಾರಸ್ವಾಮಿ ಅವರನ್ನೊಳಗೊಂಡ ಮುಖ್ಯ ಸಮೀತಿ ಲೋಕಸಭಾ ಚುನಾವಣೆಗೆ ಕಾಂಗ್ರೇಸ್ 20 ಹಾಗೂ ಜೆಡಿಎಸ್ 8 ಸೀಟು ಹಂಚಿಕೆಯಾಗಿದ್ದು ಹೈಕಮಾಂಡ ನಿರ್ಧಾರಕ್ಕೆ ಎಲ್ಲರೂ ಬದ್ದರಾಗಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾಂಗ್ರೇಸ್ ಅದೇ ರೀತಿ ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ನವರು ಶ್ರಮವಹಿಸಬೇಕೆಂದರು.
ಸೀಟು ಹಂಚಿಕೆಯ ಬಳಿಕ ನಡೆದಿರುವ ಪ್ರತಿಭಟನೆಗಳ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೇಗೆ ಉತ್ತರಿಸಿದ ಕೊನರೆಡ್ಡಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿರುವಾಗ ಪ್ರತಿಭಟನೆಗಳು ಒಳ್ಳೆಯದಲ್ಲಾ, ಹಿರಿಯರ ನಿರ್ಧಾರಕ್ಕೆ ಬೆಲೆ ಕೊಡಬೇಕು. ಮನೆಯಲ್ಲಿಯ ಜಗಳವನ್ನು ಬೀದಿಗೆ ತಂದು ವಿರೋಧ ಪಕ್ಷಗಳಿಗೆ ಆಹಾರವಾಗಬೇಡಿ ನೀವು ಈಗಲೇ ಈ ರೀತಿ ಅಪಸ್ವರ ಎತ್ತಿದರೇ ನಾಳೆ ಮತದಾರರ ಬಳಿ ಹೇಗೆ ಹೊಗುತ್ತಿರಿ ಎನ್ನುವುದನ್ನು ಅರಿತುಕೊಂಡು ಮೈತ್ರಿ ಧರ್ಮ ಪಾಲನೆ ಮಾಡುವಂತೆ ಕರೆ ನೀಡಿದರು.
ಬಿಜೆಪಿನ್ನು ಸೋಲಿಸುವುದೊಂದೆ ನಮ್ಮ ಎದುರಿಗಿರುವ ಗುರಿಯಾಗಿದ್ದು ರಾಜ್ಯದಲ್ಲಿ 20ಕ್ಕೂ ಅಧಿಕ ಸೀಟುಗಳನ್ನು ಗೆಲ್ಲುವುದಾಗಿ ಹೇಳಿದ ಕೊನರೆಡ್ಡಿಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅಚ್ಚರಿಯ ಫಲಿತಾಂಶ ಹೊರಬಿಳಲಿದ್ದು ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿದರು.
ಇನ್ನೂ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ತಿಂಗಳ ಒಳಗೆ ಅರಣ್ಯ ಅತಿಕ್ರಮಣದಾರರ ಸಮಸ್ಯೆಯನ್ನು ಬಗೆಹರಿಸುವುದಾಗಿ ವಾಗ್ದಾನ ಮಾಡಿದ್ದ ಕುಮಾರಸ್ವಾಮಿಯವರು ಏಕೆ ಮಾಡಿಲ್ಲ ಹಾಗೂ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್ ಪಕ್ಷದವರೇ ಆದ ರವೀಂದ್ರ ನಾಯ್ಕ ಅವರು ಅರಣ್ಯ ಅತಿಕ್ರಮಣದಾರರನ್ನು ಒಂದುಗೂಡಿಸಿ ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯವಲ್ಲವೇ ಎಂದು ಕೇಳಿದ ಪ್ರಶ್ನೇಗೆ ಕೊನರೆಡ್ಡಿ ಅವರು ಈ ಪ್ರಶ್ನೇಗಳಿಗೆ ಉತ್ತರ ನೀಡಲು ನೀತಿ ಸಂಹಿತೆ ಅಡ್ಡಿಯಾಗುತ್ತದೆ ಎಂದುನೇಪ ಹೇಳಿ ಜಾರಿಕೊಂಡರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಡೆದಷ್ಟೇ ಮತಗಳನ್ನು ಜೆಡಿಎಸ್ ಪಡೆದಿದೆ. ಹೀಗಿರುವಾಗ ಜೆಡಿಎಸ್ ಅಭ್ಯರ್ಥಿಯ ಪರ ಅಪಸ್ವರ ಎತ್ತುವುದು ಸರಿಯಲ್ಲ ಕಾಂಗ್ರೇಸ್‍ಗೆ ಟಿಕೆಟ್ ಸಿಕ್ಕಿಲ್ಲ ಎನ್ನುವ ಬೇಸರವಿದ್ದರೇ ಹೈಕಮಾಂಡಗೆ ತಿಳಿಸಿ. ಹಿರಿಯ ಅನುಭವಿ ರಾಜಕಾರಣಿ ಆರ್.ವಿ.ದೇಶಪಾಂಡೆ ಅವರು ಜಿಲ್ಲೆಯಲ್ಲಿದ್ದು ಅವರ ಮೂಲಕ ಹೈಕಮಾಂಡ ಜೊತೆ ಚರ್ಚಿಸಿ ವಿನಃ ಪ್ರತಿಭಟನೆ ಮಾಡಿ ಬಿಜೆಪಿಯವರಿಗೆ ಆಹಾರವಾಗಬೇಡಿ ಎಂದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಕೆಲವೆ ದಿನಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಹಾಗೂ ಒಂದು ಸುತ್ತಿಗೆ ಮಾಜಿ ಪ್ರಧಾನಿ ದೇವೆಗೌಡ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಸಲಾಗುವುದು ಎಂದು ಕೊನರೆಡ್ಡಿ ಮಾಹಿತಿ ನೀಡಿದರು.
Leave a Comment