
ಹಳಿಯಾಳ;- ಗೋವಾ ಮುಖ್ಯಮಂತ್ರಿ, ಕೇಂದ್ರದ ಮಾಜಿ ರಕ್ಷಣಾ ಸಚಿವರಾದ ಮನೋಹರ ಪರಿಕ್ಕರ್ ಅವರ ನಿಧನಕ್ಕೆ ರಾಜ್ಯದ ಕಂದಾಯ ಸಚಿವರಾದ ಆರ್.ವಿ.ದೇಶಪಾಂಡೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ತಮ್ಮೊಂದಿಗೆ ಬಹಳ ವರ್ಷಗಳ ಆತ್ಮೀಯ ಸ್ನೇಹ ಹೊಂದಿದ್ದ ಪರಿಕ್ಕರ್ ಅವರು, ದಕ್ಷ ಆಡಳಿತಗಾರರು,ದೇಶ ಭಕ್ತರು ಹಾಗೂ ಸರಳತೆಯ ಪ್ರತೀಕದಂತಿದ್ದರು ಅವರ ಸೇವೆ ಪಕ್ಷಾತೀತವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ಅವರ ಕುಟುಂಬ, ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ಬರಲಿ ಎಂದು ಸಚಿವ ದೇಶಪಾಂಡೆ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
Leave a Comment