
ಕಾರವಾರ: ಚುನಾವಣಾ ಕಾವು ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಯಾರ್ ಯಾರು ಅಭ್ಯರ್ಥಿಗಳಾಗ ಬಹುದು ಎನ್ನುವ ಕುತೂಹಲ ಎಲ್ಲೆಡೆ ಮನೆಮಾಡಿದೆ.
ಈ ಮಧ್ಯೆ ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಹಾಗೂ ಪ್ರಗತಿಪರ ಹೋರಾಟಗಾರ, ಕರ್ನಾಟಕ ರಾಹುಲ್ ಗಾಂಧಿ ಟೀಮ್ ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ , ಹಾಲಿ ಸಿದ್ದಾಪುರದಲ್ಲಿ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ಸ್ಪರ್ಧಿಸಲು ಸಿದ್ದರಾಗಿದ್ದಾರೆ.
*ಕಾಂಗ್ರೇಸ್ ನಲ್ಲಿ ಆಕ್ರೋಶ:*
ಅಭ್ಯರ್ಥಿ ಆಯ್ಕೆಯಲ್ಲಿ ಸೋತು ಕ್ಷೇತ್ರವನ್ನು ಕಾಂಗ್ರೇಸ್ ಜೆಡಿಎಸ್ ಗೆ ಬಿಟ್ಟು ಕೊಟ್ಟಿದ್ದು ಜೆಡಿಎಸ್ ನಿಂದ ಆನಂದ ಅಸ್ನೋಟಿಕರ್ ಹೆಸರು ಕೇಳಿಬರುತ್ತಿದ್ದಂತೆ ಕಾಂಗ್ರೇಸ್ ಪಾಳಯದಲ್ಲಿ ಆಕ್ರೋಶ ಬೀದಿಗೆ ಬಂದಿದೆ. ಯಾವುದೆ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟುಕೊಡಲು ಕಾಂಗ್ರೇಸ್ ಕಾರ್ಯಕರ್ತರು ಸಿದ್ದರಿಲ್ಲ ಎಂದು ಹೇಳುತ್ತಿರುವುದು ಹೈ ಕಮಾಂಡಗೆ ತಲೆ ನೋವಾಗಿ ಪರಿಣಮಿಸಿದೆ.

*ಪಕ್ಷೇತರ ಅಭ್ಯರ್ಥಿಯಾಗಿ ಕರ್ನಾಟಕ ರಾಹುಲ್ ಗಾಂಧಿ ಟೀಮ್ ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ :*
ಕಳೆದ 18 ವರ್ಷಗಳಿಂದ ಪತ್ರಕರ್ತರಾಗಿ , ಜನಪರ ಹೋರಾಟಗಾರರಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡು ಮನೆಮಾತಾಗಿರುವ ಹಾಗೂ ಸಿದ್ದಾಪುರದಲ್ಲಿ ಅನಾಥಾಶ್ರಮ ಪ್ರಾರಂಭಿಸಿ ಅನಾಥರ ಸೇವೆ ಮಾಡುತ್ತಿರುವ ಕರ್ನಾಟಕ ರಾಹುಲ್ ಗಾಂಧಿ ಟೀಮ್ ನ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ ನಾಯ್ಕ ಚುನಾವಣೆಗೆ ಸ್ಪರ್ಧಿಸಲು ಸಿದ್ದರಾಗಿದ್ದಾರೆ.
ಹಿಂದೆ ಜೆಡಿಯು ಪಕ್ಷದ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿ ಹಾಗೂ ಜನಹಿತ ಪಕ್ಷದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಅನುಭವ ಹೊಂದಿರುವ ನಾಗರಾಜ ನಾಯ್ಕ ಕಳೆದ ವಿಧಾನ ಸಭಾ ಚುನಾವಣೆಯ ಸಂಧರ್ಭದಲ್ಲಿ ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೇಸ್ ಪಕ್ಷಕ್ಕೆ ತಮ್ಮ ಬೆಂಬಲಿಗರೊಂದಿಗೆ ಸೇರ್ಪಡೆಯಾಗಿದ್ದರು.
ನಂತರ ಕೆಪಿಸಿಸಿ ಯಿಂದ ಡಿಸಿಸಿಗೆ ನಾಗರಾಜ ನಾಯ್ಕರನ್ನು ಹಾಗೂ ಅವರ ಬೆಂಬಲಿಗರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುವಂತೆ ಅಧಿಕೃತ ಪತ್ರ ಬಂದಿದ್ದರು ಕೂಡ ಕಾಂಗ್ರೇಸ್ ಜಿಲ್ಲಾ ಕಮೀಟಿ ನಾಗರಾಜ ನಾಯ್ಕರಿಗೆ ಪಕ್ಷದ ಪ್ರಾರ್ಥಮಿಕ ಸದಸ್ಯತ್ವವನ್ನೆ ನೀಡದೆ ಅವಮಾನಮಾಡಿದೆ ಎನ್ನಲಾಗಿದೆ. ಅಲ್ಲದೇ ಪಕ್ಷದ ಯಾವುದೆ ಸಭೆ ಸಮಾರಂಭಗಳಿಗೆ ಆಮಂತ್ರಣ ನೀಡದೆ ದೂರ ಇಟ್ಟಿದ್ದರು ಎಂದು ಖುದ್ದು ನಾಗರಾಜ ಅವರೇ ಹೆಳಿದ್ದಿದೆ.
ಇದರಿಂದ ಡಿಸಿಸಿ ವರ್ತನೆಗೆ ಬೇಸರಗೊಂಡಿರುವ ನಾಗರಾಜ ನಾಯ್ಕ ಡಿಸಿಸಿ ವಿರುದ್ದ ಬೇಸರ ಹೊರಹಾಕಿದ್ದು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಕೈಗೊಂಡಿದ್ದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ.

Leave a Comment