
ಶಿರಸಿ: ಸಿದ್ದಾಪುರ ತಾಲೂಕಿನ ಮೊಗದೂರಿನಲ್ಲಿರುವ ನಾಗರಾಜ ನಾಯ್ಕ ನಡೆಸುತ್ತಿರುವ ಆಶ್ರಯಧಾಮ ಅನಾಥಾಶ್ರಮಕ್ಕೆ ರಾಜಕೀಯ ಪ್ರೇರಿತವಾಗಿ ಶಿರಳಗಿ ಗ್ರಾಮ ಪಂಚಾಯತದವರು ಕೊಡುತ್ತಿರುವ ತೊಂದರೆಯನ್ನು, ಕ್ಷತ್ರೀಯ ಮರಾಠಾ ಮಹಾ ಒಕ್ಕೂಟದ ಉತ್ತರ ಕನ್ನಡ ಜಿಲ್ಲಾ ಘಟಕ ತೀವೃವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಪಾಂಡುರಂಗ ಪಾಟೀಲ ತಿಳಿಸಿದ್ದಾರೆ.
ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ ಇಂದಿನ ದಿನಗಳಲ್ಲಿ ಸಾಮಾಜಿಕ ಸೇವೆಯನ್ನು ನಡೆಸುವವರು ಬಹಳ ವಿರಳ. ಇಂತಹ ಸಂದರ್ಭದಲ್ಲಿ ನಾಗರಾಜ ನಾಯ್ಕ ನಡೆಸುತ್ತಿರುವ ಅನಾಥಾಶ್ರಮಕ್ಕೆ ಸ್ಥಳೀಯ ಪಂಚಾಯತದವರು ನೀರಿನ ಸಂಪರ್ಕವನ್ನು, ಏಕಾ- ಏಕಿಯಾಗಿ ಮುನ್ಸೂಚನೆ ನೀಡದೆ ಖಡಿತಗೊಳಿಸಿರುವುದು ಅಮಾನವೀಯ ಲಕ್ಷಣ. ಇಂತಹ ಅನಾಥಾಶ್ರಮಗಳಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿಕೊಡಬೇಕು ಹಾಗೂ ಅನಾಥಾಶ್ರಮಕ್ಕೆ ಸೂಕ್ತವಾದ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
Leave a Comment