
ಶಿರಸಿ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರನ್ನು ಬೆಳೆಸಿಲ್ಲ ಎಂಬ ಮಾಧ್ಯಮ ವರದಿಯನ್ನು ಜಿಲ್ಲಾ ಕಾಂಗ್ರೆಸ್ ವಿರೋಧಿಸಿದ್ದು, ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಭೀಮಣ್ಣ, ದೇಶಪಾಂಡೆ ಕಾಂಗ್ರೆಸ್ ನಲ್ಲಿ ಎಲ್ಲಾ ವರ್ಗದವರನ್ನು ಬೆಳೆಸಿದ್ದು, ಅವರ ವಿರುದ್ಧದ ಹೇಳಿಕೆಯನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.
ದೇಶಪಾಂಡೆ ಅವರು ಎಲ್ಲಾ ಧರ್ಮದವರಿಗೆ, ಯುವಕರಿಗೆ ಅವಕಾಶ ನೀಡಿದ್ದಾರೆ. ಸರ್ಕಾರ ಮತ್ತು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನೀಡಿದ್ದಾರೆ. ಅವರು ಒಬ್ಬ ಜನನಾಯಕರಾಗಿದ್ದು, ಅಭಿವೃದ್ಧಿ ಹರಿಕಾರರೂ ಹೌದು. ಅವರ ವಿರುದ್ಧದ ಹೇಳಿಕೆಗಳನ್ನು ನಾವು ಸಹಿಸಲ್ಲ ಎಂದರು.
ದೋಸ್ತಿ ಸರ್ಕಾರದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಜೆಡಿಎಸ್ ಟಿಕೇಟ್ ಸಿಗಲಿದೆ ಎಂದಿದ್ದರೂ ಅಧಿಕೃತ ವಾಗಿ ಘೋಷಣೆಯಾಗಿಲ್ಲ. ಘೋಷಣೆ ಯಾದ ಮೇಲೆ ಹಿರಿಯ ನಾಯಕರ ತಿರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದ ಅವರು, ಟಿಕೇಟ್ ಇಲ್ಲದಿದ್ದರೂ ಪಕ್ಷ ಚಟುಚಟಿಕೆ, ಸಂಘಟನೆ ಮುಂದುವರೆದಿದ್ದು, ಕಾಂಗ್ರೆಸ್ ಚುನಾಬಣೆಯಲ್ಲಿ ಸಕ್ರಿಯವಾಗಿ ಇರಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ನಲ್ಲಿ ಯಾವುದೇ ಬಣ ರಾಜಕೀಯವಿಲ್ಲ. ನಾವು ರಾಷ್ಟ್ರೀಯ ನಾಯಕರ ತಿರ್ಮಾನಕ್ಕೆ ಬದ್ಧರಾಗಿದ್ದೇವೆ. ಅವರ ತಿರ್ಮಾನಕ್ಕೆ ವಿರುದ್ಧವಾಗಿ ಯಾರೂ ಸಹ ಜಿಲ್ಲಾ ಕಾಂಗ್ರೆಸ್ ನಿಂದ ಬಂಡಾಯ ನಿಲ್ಲುವುದಿಲ್ಲ ಎಂದು ಹೇಳಿದರು.
ಈ ವೇಳೆ ಪ್ರಮುಖರಾದ ಎಸ್.ಕೆ.ಭಾಗ್ವತ್, ದೀಪಕ ದೊಡ್ಡುರು, ಜಗದೀಶ ಗೌಡ, ರಾಜು ಉಗ್ರಾಣಕರ ಇದ್ದರು.
Leave a Comment