ಹಳಿಯಾಳ:- ಪಟ್ಟಣದ ಶಿವಾಜಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭಾನುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರದ ಪಿ.ಆರ್.ಓ/ಎ.ಪಿಆರ್.ಓಗಳಿಗೆ ತರಬೇತಿಯನ್ನು ನೀಡಲಾಯಿತು ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ತಿಳಿಸಿದರು,
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ತರಬೇತಿಯಲ್ಲಿ ಒಟ್ಟೂ 496 ಪಿ.ಆರ್.ಓ ಮತ್ತು ಎ.ಪಿ.ಆರ್.ಓ ಮತಗಟ್ಟೆ ಸಿಬ್ಬಂದಿಗಳಲ್ಲಿ 454 ಸಿಬ್ಬಂದಿಗಳು ಹಾಜರಾಗಿದ್ದರು. 42 ಪಿ.ಆರ್.ಓ ಮತ್ತು ಎ.ಪಿ.ಆರ್.ಓ ಮತಗಟ್ಟೆ ಸಿಬ್ಬಂದಿಗಳು ಹಳಿಯಾಳ ಮತ್ತು ಜೊಯಿಡಾ ತಾಲೂಕಿನ 11 ಕಾಲೇಜಿನಲ್ಲಿ ಪದವಿ ಪೂರ್ವ ಪರೀಕ್ಷೆ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಮಂಗಳೂರು ಹಾಗೂ ಬೆಂಗಳೂರು ಹೋದ ಕಾರಣ ಈ 42 ಸಿಬ್ಬಂದಿಗಳು ಗೈರು ಹಾಜರಾಗಿದ್ದು ಅವರಿಗೆ ಪ್ರತ್ಯೇಕವಾಗಿ ತರಬೇತಿಯನ್ನು ಆಯೋಜಿಸಲಾಗುವುದು ಎಂದರು,
ತರಬೇತಿಯ ನೋಡಲ್ ಅಧಿಕಾರಿಯಾಗಿ ಆಗಮಿಸಿದ ಕೆಎಎಸ್ ಹಿರಿಯ ಅಧಿಕಾರಿ ವಿನಾಯಕ ಪಾಲನಕರ ಸೂಕ್ತ ನಿರ್ದೇಶನ ನೀಡಿದರು ಎಂದು ವಿವರಿಸಿದ ಪುಟ್ಟಸ್ವಾಮಿ ಒಟ್ಟು 8 ಕೊಠಡಿಗಳಲ್ಲಿ ತರಬೇತಿಯನ್ನು ಆಯೋಜಿಸಲಾಗಿದ್ದು, 4 ಕೊಠಡಿಗಳಲ್ಲಿ ಮೂರು ಜನ ಸೆಕ್ಟರ್ ಅಧಿಕಾರಿಗಳು ಹಾಗೂ ಒಬ್ಬರು ಮಾಸ್ಟರ್ ಟ್ರೇನರ್ ಇ.ವಿ.ಎಂ ಪ್ರಾತ್ಯಕ್ಷಿತೆ ತರಬೇತಿಯನ್ನು ನೀಡಿದರು ಮತ್ತು 4 ಕೊಠಡಿಗಳಲ್ಲಿ ಚುನಾವಣೆಯ ಸಾಮಾನ್ಯ ವಿಷಯಗಳ ತರಬೇತಿಯನ್ನು ನೀಡಿದರು,
ತರಬೇತಿ ಕೇಂದ್ರದಲ್ಲಿ ಇ.ಡಿ.ಸಿ / ಪೋಸ್ಟಲ್ ಬ್ಯಾಲೇಟ್ ಕೌಂಟರ್‍ನ್ನು ಸ್ಥಾಪಿಸಲಾಗಿತ್ತು . ಈ ವರೆಗೂ ಒಟ್ಟು 225 ಇ.ಡಿ.ಸಿ/ ಮತ್ತು ಪೋಸ್ಟಲ್ ಬ್ಯಾಲೆಟ ಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ತರಬೇತಿ ಕೇಂದ್ರದಲ್ಲಿ ತರಬೇತಿದಾರರಿಗೆ ಅನುಕೂಲವಾಗುವಂತೆ , ವೈದ್ಯಕೀಯ ಪ್ರಥಮ ಚಿಕಿತ್ಸೆ ಕೌಂಟರ್‍ನ್ನು ಕೂಡ ತೆರೆಯಲಾಗಿದ್ದು ವಿಶೇಷವಾಗಿತ್ತು.
ಒಟ್ಟಾರೆ ಲೋಕ ಸಭಾ ಚುನಾವಣೆಗಾಗಿ ಸಿಬ್ಬಂದಿಗಳಿಗೆ ಸರಿಯಾದ ಮಾರ್ಗದರ್ಶನ, ತರಬೇತಿ ನೀಡಿ ಚುನಾವಣಾ ಕರ್ತವ್ಯಕ್ಕೆ ಸಜ್ಜು ಮಾಡಲಾಗುತ್ತಿದೆ ಎಂದು ಎಆರ್ ಓ ಪುಟ್ಟಸ್ವಾಮಿ ತಿಳಿಸಿದರು. ತಹಶೀಲ್ದಾರ್‍ಗಳಾದ ಹಳಿಯಾಳದ ಶಿವಾನಂದ ಉಳ್ಳೇಗಡ್ಡಿ, ದಾಂಡೇಲಿಯ ಚಾಮರಾಜ ಪಾಟೀಲ್, ಜೋಯಿಡಾದ ಸಂಜಯ ಕಾಂಬಳೆ, ಗ್ರೇಡ್ 2- ತಹಶೀಲ್ದಾರ್ ಜಿಕೆ ರತ್ನಾಕರ ಇದ್ದರು.
Leave a Comment