
ಯಲ್ಲಾಪುರ:- ಚೆಕ್ ಪೋಸ್ಟ್ ಬಿಗಿಗೊಳಿಸಿದ ಬೆನ್ನಲ್ಲೇ ಕಿರುವತ್ತಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.44 ಕೆಜಿ ಬಂಗಾರ, 3ಕೆಜಿ ಬೆಳ್ಳಿ ಹಾಗೂ ₹2.68 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ.
ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ವಾಹನದಲ್ಲಿ ಐವರು ಪುರುಷರು ಇದ್ದು ಎಲ್ಲರನ್ನು ಬಂಧಿಸಲಾಗಿದೆ.
ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ಇದನ್ನು ಭೇದಿಸಿದ್ದು ಬಂದಿತರು ಕಳವು ಮಾಡಿದ್ದು ಎಂದು ಹೇಳುತ್ತಿರುವುದಾಗಿ
ಯಲ್ಲಾಪುರ ತಹಸೀಲ್ದಾರ್ ಶಂಕರ್ ಜಿ.ಎಸ್ ತಿಳಿಸಿದ್ದಾರೆ..
ಡಿವೈಎಸ್ಪಿ ಭಾಸ್ಕರ,
ಪಿಎಸ್ ಐ ಮಂಜುನಾಥ, ಎಆರ್ ಓ ರುದ್ರೇಶಪ್ಪಾ ಕಾರ್ಯಾಚರಣೆಯಲ್ಲಿ ಇದ್ದರು.
Leave a Comment