ಹೊನ್ನಾವರ; ತಾಲೂಕಿನ ಜನತಾವಿದ್ಯಾಲಯ ಕಡತೋಕಾ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ 63 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 54 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 85.71 ಫಲಿತಾಂಶ ದಾಖಲಾಗಿದೆ.
ಕಲಾ ವಿಭಾಗದಿಂದ 46ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 82.61 ಫಲಿತಾಂಶ ಬಂದಿರುತ್ತದೆ.
ವಿಷೆಶ ದರ್ಜೆಯಲಿ 01, ಪ್ರಥಮ ದರ್ಜೆಯಲ್ಲಿ 13, ದ್ವಿತೀಯ ದರ್ಜೆಯಲ್ಲಿ 13, ಹಾಗೂ ತೃತೀಯ ದರ್ಜೆಯಲ್ಲಿ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಕುಮಾರಿ ಕಾವ್ಯ ಚಂದ್ರಶೇಖರ ನಾಯ್ಕ ಶೇ. 95.00% ಅಂಕ ಪಡೆದು ಕಾಲೇಜಿಗೆ ಪ್ರಥಮ ಬಂದಿರುವುದರ ಜೊತೆಗೆ ಕಾಲೇಜು ಪರೀಕ್ಷಾ ಫಲಿತಾಂಶದಲ್ಲಿ ಇತಿಹಾಸ ದಾಖಲಿಸಿದ್ದಾಳೆ. ದ್ವೀತಿಯ ಸ್ಥಾನದೀಪಕ ಗಣಪತಿ ಗೌಡ, ನಾಗಶ್ರೀ ನಾಗೇಶ ಗೌಡ 82.34% ಅಂಕ ಪಡೆದರೆ ತೃತೀಯ ಸ್ಥಾನ ತನುಜಾ ಬೀರು ಗೌಡ 77.34% ಅಂಕ ಗಳಿಸಿರುತ್ತಾಳೆ. 2017-18 ನೇ ಸಾಲಿನಲ್ಲಿ ಆರಂಭವಾದ ವಾಣಿಜ್ಯ ವಿಭಾಗದಿಂದ 17 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 16 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ. 94.12% ಫಲಿತಾಂಶ ಬಂದಿರುತ್ತದೆ. ಪ್ರಥಮ ದರ್ಜೆಯಲ್ಲಿ 11, ದ್ವಿತೀಯ ದರ್ಜೆಯಲ್ಲಿ 05 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ವಿನಾಯಕ ಸುಬ್ರಾಯ ಮಡಿವಾಳ 77.83% ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದರೆ ರಮ್ಯಾ ರಮೇಶ ಭಂಡಾರಿ 75.17% ತೃತೀಯ ಸ್ಥಾನವನ್ನು ವಿಷ್ಣು ನಾಗಪ್ಪ ಗೌಡ 73.83% ಅಂಕ ಗಳಿಸುವ ಮೂಲಕ ಸಾಧನೆ ಮಾಡಿರುತ್ತಾರೆ







Leave a Comment