ಹಳಿಯಾಳ:- ತಾಲೂಕಿನ ಮುರ್ಕವಾಡ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಬಾರಿಯು ಉತ್ತಮ ಫಲಿತಾಂಶ ದಾಖಲಿಸಿದೆ. ಅಲ್ಲದೇ ಕಳೆದ 2 ವರ್ಷಗಳಿಂದ ವಾಣಿಜ್ಯ ವಿಭಾಗದಲ್ಲಿ ಶೇ. ನೂರರಷ್ಟು ಸಾಧನೆ ಈ ಗ್ರಾಮೀಣ ಪ್ರದೇಶದ ಕಾಲೇಜಿನ ಹೆಗ್ಗಳಿಕೆಯಾಗಿದೆ.
ಈ ವರ್ಷದ ಫಲಿತಾಂಶವೂ ವಾಣಿಜ್ಯ ವಿಭಾಗದಲ್ಲಿ ಶೇ.100 ಮತ್ತು ಕಲಾ ವಿಭಾಗÀದಲ್ಲಿ ಶೇ.98 ಫಲಿತಾಂಶ ಪಡೆದಿದೆ. ಬಹುತೇಕ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ.
ಕಲಾ ವಿಭಾಗದಲ್ಲಿ:- ಜ್ಯೊತಿ ಶಿಂಧೆ- 92.33%(ಪ್ರಥಮ), ನಿಕಿತಾಗೌಡಾ- 91.16%(ದ್ವಿತಿಯ) ಹಾಗೂ ಪೂಜಾ ಬಾಗೋಡಿ- 88.16%.
ವಾಣಿಜ್ಯ ವಿಭಾಗದಲ್ಲಿ :- ಗೀತಾ ಕೊರ್ವೇಕರ 85.00% ಪ್ರಥಮ, ಕವಿತಾ ಮಿಶಾಳಿ 68.33%- ದ್ವಿತೀಯ ಹಾಗೂ ಅರ್ಚನಾ ನಂದಿಗದ್ದಾ68.00% ತೃತೀಯ.
Leave a Comment