ಹಳಿಯಾಳ:- ಪಟ್ಟಣದ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ವ್ಹಿ.ಡಿ ಹೆಗಡೆ ಕಲಾ ಮತ್ತು ವಾಣಿಜ್ಯ ಪಿಯು ಕಾಲೇಜಿನ ಫಲಿತಾಂಶ 75.40% ರಷ್ಟಾಗಿದ್ದು 9 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 86 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಈ ವಿದ್ಯಾಲಯದ ಪರೀಕ್ಷೆ ಬರೆದ 220 ವಿದ್ಯಾರ್ಥಿಗಳಲ್ಲಿ 166 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 9 ವಿದ್ಯಾರ್ಥಿಗಳು ಉನ್ನತ ಶ್ರೇಣಿ 86 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 43 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ, ಮತ್ತು 28 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 77.52% ಫಲಿತಾಂಶ ಬಂದಿದ್ದು ಪ್ರಿಯಾ ಫಕೀರ ಮೋರಿ 92.% ಪ್ರಥಮ, ಧನಶ್ರೀ ನಾಯ್ಕೋಜಿ 90% ದ್ವಿತೀಯ ಮತ್ತು ಸಂಧ್ಯಾರಾಣಿ ನಾಳಕರ 88.16% ಹಾಗೂ ಪೂಜಾ ಧಾಮಣೆಕರ 88.16% ಇವರಿಬ್ಬರು ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗದಲ್ಲಿ ನಿಕಿತಾ ಶಿವಾಜಿ ಕೊರವೆಕರ 88% ಪ್ರಥಮ, ಸ್ನೆಹಲ್ ಡೊಂಗ್ರು ಜಿವೇಕರ 84% ದ್ವಿತೀಯ ಮತ್ತು ಸ್ವಪ್ನಾ ಸುರೇಶ ಕೊಲ್ಕಾರ 77% ತೃತೀಯ ಸ್ಥಾನ ಪಡೆದಿದ್ದಾರೆ. ಗಣಕ ವಿಜ್ಞಾನದಲ್ಲಿ ಪ್ರೀಯಾ ಫಕೀರ ಮೋರಿ, 100 ಕ್ಕೆ 100 ಅಂಕ ಪಡೆದಿದ್ದಾರೆಂದು ತಿಳಿಸಿರುವ ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮಾಜಿ ವಿಪ ಸದಸ್ಯ ವ್ಹಿ.ಡಿ ಹೆಗಡೆ ಅವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Leave a Comment