• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಚುನಾವಣೆ ಮತ್ತು ಕಂದಾಯ ಇಲಾಖೆ;ಚುನಾವಣೆ ಸಿಬ್ಬಂದಿಗಳ ಪರದಾಟ

April 21, 2019 by Gaju Gokarna Leave a Comment

ಹೊನ್ನಾವರ : 17ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ 12 ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮತದಾರರು ಮತದಾನಕ್ಕೆ ಸಿದ್ಧರಾಗಿದ್ದಾರೆ. ಚುನಾವಣಾ ಕೆಲಸಕ್ಕೆ ಸಿಬ್ಬಂದಿಗಳು ಮುಖ್ಯವಾಗಿ ಶಿಕ್ಷಣ ಇಲಾಖೆಯ ನೌಕರರು ಕಾತುರದಿಂದ ತಮ್ಮ ಜವಾಬ್ದಾರಿ ನಿರ್ವಹಿಸಲು ಸಿದ್ಧರಾಗಿದ್ದಾರೆ. ಆದರೆ ಹೊನ್ನಾವರ ತಾಲೂಕಿನಲ್ಲಿ ಮೊದಲನೆ ಹಂತದ ತರಬೇತಿಯನ್ನು ಯಶಸ್ವಿಯಾಗಿ ನೀಡಿಲ್ಲವೆಂದು ಚುನಾವಣಾ ಕರ್ತವ್ಯಕ್ಕೆ ನಿಗದಿಗೊಂಡಿರುವ ನೌಕರರು ದೂರುತ್ತಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಬೇಕಿರುವ ಸಾಹಿತ್ಯವನ್ನು ಎರಡನೇಯ ಹಂತದ ತರಬೇತಿಯವರಿಗೂ ನೀಡದೇ ಸತಾಯಿಸಿದ್ದಾರೆ. ಮಾಸ್ಟರ್ ಟ್ರೇನರೆಂದು ನಿರ್ಧಿಷ್ಟ ಪಡಿಸಿದ ಎರಡು ಜಾತಿಯ ನೌಕರರನ್ನು ಮಾತ್ರ ನೇಮಿಸಿಕೊಂಡಿದ್ದಾರೆಂದು ಹಲವಾರು ದೂರುತ್ತಿದ್ದಾರೆ. ಪಿ.ಡಿ.ಓಗಳು ಹಾಗೂ ಪ್ರೌಢಶಾಲೆಯ ಶಿಕ್ಷಕರು ಮತ್ತು ಪಿ.ಯು ಕಾಲೇಜಿನ ಉಪನ್ಯಾಸಕರನ್ನು ಈ ಕೆಲಸಕ್ಕೆ ಕೇಳಿಕೊಂಡಿದ್ದು ಇದರಲ್ಲಿ ಪಾರದರ್ಶಕತೆ ಇಲ್ಲವೆಂದು ಹೇಳುತ್ತಿದ್ದಾರೆ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಯು 8 ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಬೆಳಗಾವಿ ಜಿಲ್ಲೆಯವರೆಗೂ ವ್ಯಾಪಿಸಿದೆ. ಈ ಸಂದರ್ಭವನ್ನು ಬಹು ಚಾಣಕ್ಯತೆಯಿಂದ ಬಳಸುಕೊಂಡಿದ್ದು ಚುನಾವಣಾ ಸಿಬ್ಬಂದಿಗಳನ್ನು ಹೊನ್ನಾವರದಿಂದ ಯಲ್ಲಾಪುರ, ಹಳಿಯಾಳ, ಕಾರವಾರ ಮುಂತಾದ ವಿಧಾನಸಭಾ ಕ್ಷೇತ್ರಕ್ಕೂ ಕಳಿಸಿದ್ದಾರೆ. ಇದರಲ್ಲಿ ಆರ್ಥಿಕ ಅಪರಾ-ತಪರಾ ನಡೆಸಲು ಸಹಾಯವಾಗುತ್ತಿದೆ ಎಂಬ ಕಂದಾಯ ಇಲಾಖೆಯವರ ದೂರಾಲೋಚನೆ ಇದು ಎಂದು ಹಲವಾರು ದೂರುತ್ತಿದ್ದಾರೆ. ಪಕ್ಕದ ಉಡುಪಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಸಿಬ್ಬಂದಿಗಳನ್ನು ಹತ್ತಿರದ ಪಕ್ಕದ ತಾಲೂಕಿಗಳಿಗೆ ಕಳಸಿರುವಾಗ ಹೊನ್ನಾವರದಿಂದ ಹಾಗೇ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ದೂರು-ದೂರಕ್ಕೆ ನಿಯೋಜಿಸಿದ್ದು ಏಕೆ ಎಂದು ಸ್ಥಳೀಯರು ಪ್ರಶ್ನೆಸಿದ್ದಾರೆ.
ಇದ್ದೆಲ್ಲದೇ ಡಿಮಸ್ಟರಿಂಗ್ ಸಂದರ್ಭದಲ್ಲಿ ಯಾವುದೋ ಜನ್ಮದ ಸೇಡು ತಿರಿಸಿಕೊಳ್ಳುವರಂತೆ ಕಾಗದ ಪತ್ರಗಳನ್ನು ಸರಿಯಾಗಿ ತೆಗೆದುಕೊಳ್ಳದೇ ಚುನಾವಣಾ ಕರ್ತವ್ಯಕ್ಕೆ ಹೋದ ಸಿಬ್ಬಂದಿಗಳನ್ನು ಕಂದಾಯ ಇಲಾಖೆಯ ಸಿಬ್ಬಂದಿಗಳು ಸತಾಯಿಸುತ್ತಾರೆ. ಈ ಕಂದಾಯ ಇಲಾಖೆಯ ನೌಕರರು ಯಾವುದೇ ಸರಿಯಾದ ಶಿಕ್ಷಣವನ್ನು ಪಡೆದವರಾಗಲೀ ಅಥವಾ ಕೆಲಸದಲ್ಲಿ ದಕ್ಷತೆಯನ್ನು ಹೊಂದಿದವರಾಗಲೀ ಆಗಿರದೇ ಕೇವಲ ಹಣದ ಆಮೀಶದಿಂದ ಚುನಾವಣಾ ಕೆಲಸಕ್ಕೆ ಬಂದವರಾಗಿರುತ್ತಾರೆ. ಇವರಿಂದ ಅನಾವಶ್ಯಕ ತೊಂದರೆ ಉಂಟಾಗುತ್ತದೆ. ಚುನಾವಣೆ ಕರ್ತವ್ಯಕ್ಕೆ ಬಂದಂತಹ ಚಹಾ. ತಿಂಡಿ ಊಟದ ವ್ಯವಸ್ಥೆಯೆಂದು ಹಣ ಖರ್ಚು ಮಾಡಿಯೂ ಉಪ್ಪಿಟ್ಟು ಸೀರಾ, ತಿಂಡಿಗೆ ಎಂದು ಅದು ಬಾಯಿಗೆ ಹಾಕಲಾಗದ ಲಡ್ಡು ರವೆಯಿಂದ ಮಾಡಿರುತ್ತಾರೆ. ಕೊಡುವ ಚಹಾಕ್ಕೆ ಲೆಕ್ಕಕ್ಕಿಂತಲೂ ಖರೀದಿ ಮಾಡಿ ಮೊದಲೊಂದು 50-60 ಜನರಿಗೆ ಕೊಟ್ಟು ಉಳಿದವರಿಗೆ ಕೊಡದೇ ಕಳಿಸುತ್ತಾರೆ. ಇವರನ್ನು ಬೇದರಿಯೇ ಶಿಕ್ಷಣ ಇಲಾಖೆಯ ಸಜ್ಜನರು ಚುನಾವಣೆ ಕೆಲಸಕ್ಕೆ ಗೈರು ಹಾಜರಾಗಲು ಪ್ರಯತ್ನಿಸುವುದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಚುನಾವಣಾ ಆಯೋಗದ ಮೇಲೆ ಕೈತೋರಿಸಿ ಶಿಕ್ಷಕರ ಸಂಘದ ಪದಾಧಿಕಾರಿಗಳು ಕೂಡ ಏನೇ ಮಾತಡದೇ ಕೈಚೆಲ್ಲುತ್ತಾರೆ. ಶಿಕ್ಷಕರ ಸಂಘ ಇಂತಹ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಸರ್ವರಿಗೂ ಸಮನಾದ ಅವಕಾಶವನ್ನು ಕಲ್ಪಿಸುವುದನ್ನು ಮಾಡಬೇಕು. ಕಂದಾಯ ಇಲಾಖೆಯವರ ಸರ್ವಾಧಿಕಾರವನ್ನು ಹಿಮ್ಮೆಟ್ಟಿಸಿ ಸರಿಯಾಗಿ ಚುನಾವಣೆ ನಡೆಯುವಂತೆ ಮಾಡಿ ಪ್ರಜಾಪ್ರಭುತ್ವ ಯಶಸ್ವಿಯಾಗುವಂತೆ ಮಾಡಬೇಕು.
ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಬರದಿರುವುದು ಮತ್ತು ಅವರು ಪರಸ್ಥಳೀಯರಾಗಿರುವುದು ಸ್ಥಳೀಯ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನೇ ಮೆಚ್ಚಿಕೊಂಡಿರಬೇಕಾಗಿರುವುದರಿಂದ ಇವರು ಮೋಸದ ಬಲೆಗೆ ಬಿದ್ದು ಸ್ಥಳೀಯ ಸಿಬ್ಬಂದಿಗಳು ಹೇಳದಂತೆ ನಡೆದುಕೊಳ್ಳುತ್ತಾರೆ. ಆದ್ದರಿಂದ ಚುನಾವಣೆ ಸಂದರ್ಭದಲ್ಲಿ ತರಬೇತಿದಾರರನ್ನು ಆಯ್ಕೆ ಮಾಡುವುದರಿಂದ ಹಿಡಿದು ಚುನಾವಣಾ ಸಿಬ್ಬಂದಿಗಳ ಆಯ್ಕೆಯವರೆಗೂ ಪ್ರತಿಯೊಂದು ಹಂತದಲ್ಲಿ ಬೇರೆ ಅಧಿಕಾರಿಗಳನ್ನು ತೊಡಗಿಸಬೇಕೆಂದು ಚುನಾವಣಾ ಆಯೋಗಕ್ಕೆ ಈ ಮೂಲಕ ಹಲವು ಜನ ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ವಿನಂತಿಸಿದ್ದಾರೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Election duty, Election Staff, Elections and Revenue Department of Uttar Kannada Lok Sabha constituency, General Elections, Lok Sabha constituency has not been successfully awarded, Shimoga constituency, The tea that came to the election duty. Udupi, Voters

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar