• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಕ್ರಮ ಹಣ ಸಂಗ್ರಹಣೆ‌ ಆರೋಪ ಹಳಿಯಾಳದಲ್ಲಿ ಆನಂದ ಅಸ್ನೋಟಿಕರ್ ಆಪ್ತರ ಮನೆ ಮೆಲೆ ಚುನಾವಣಾಧಿಕಾರಿ ದಾಳಿ- ಬಿಡಿಗಾಸು ಸಿಗದೆ‌ ವಾಪಸ್ಸಾದ ಅಧಿಕಾರಿಗಳು.

April 21, 2019 by Yogaraj SK Leave a Comment

 

FLYING SCOD raid

ಹಳಿಯಾಳ:- ಚುನಾವಣೆಗೆ ಮತದಾರರಿಗೆ ಆಮಿಷವೊಡ್ಡಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿದ್ದಾರೆಂಬ ದೂರಿನ ಮೆರೆಗೆ ಹಳಿಯಾಳ ಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಆಪ್ತರೊಬ್ಬರ ಮನೆಯ ಮೇಲೆ ಚುನಾವಣಾಧಿಕಾರಿಗಳು ಹಾಗೂ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಪರಿಶೀಲನೆ ನಡೆಸಿದ ವಿದ್ಯಮಾನ ಶನಿವಾರ ನಡೆದಿದೆ.
ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜಕೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆದಿರುವುದು ಹಳಿಯಾಳದಲ್ಲಿ ಇದೆ ಮೊದಲಾಗಿದೆ.
ಪುರಸಭೆ ಮಾಜಿ ಸದಸ್ಯರು ಆಗಿರುವ ಹಿರಿಯ ರಾಜಕೀಯ ಮುಖಂಡ ಎಸ್.ಎ.ಶೇಟವಣ್ಣವರ ಅವರ ಆನೆಗುಂದಿ ಬಡಾವಣೆಯಲ್ಲಿರುವ ಮನೆಯ ಮೇಲೆ ದಾಳಿ ನಡೆದಿದ್ದು. ತಹಶೀಲ್ದಾರ್ ಶಿವಾನಂದ ಉಳ್ಳೆಗಡ್ಡಿ, ಫ್ಲಾಯಿಂಗ್ ಸ್ಕ್ವಾಡ್ ಅಧಿಕಾರಿ ರವೀಂದ್ರ ಮೆಟಗುಡ್ಡ ಸೇರಿದಂತೆ 7 ಕ್ಕೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿಗಳು ಶೇಟವಣ್ಣವರ ಅವರ ಮನೆಯಲ್ಲಿ ಸಮಗ್ರ ಪರಿಶೀಲನೆ ನಡೆಸಿದರು.
ಯಾವೊಂದು ಸ್ಥಳವನ್ನು ಬೀಡದೆ ಇಂಚಿಂಚೂ ಹುಡುಕಾಟ ನಡೆಸಿದ ಅಧಿಕಾರಿಗಳಿಗೆ ಯಾವ ಅಕ್ರಮ ಹಣ ಅಥವಾ ಯಾವುದೇ ವಸ್ತುಗಳು ಸಿಗದೆ ವಾಪಸ್ಸಾಗಿದ್ದಾರೆ. ದಾಳಿಯ ಸುದ್ದಿಯ ಬಗ್ಗೆ ಉಹಾಪೊಹಗಳು ಹರಡುತ್ತಿದ್ದಂತೆ ಪಟ್ಟಣದಲ್ಲಿ ಐಟಿ ಇಲಾಖೆ ರೇಡ್ ನಡೆದಿದೆ, ಅಪಾರ ಪ್ರಮಾಣದ ಹಣ ವಶಪಡಿಸಿಕೊಳ್ಳಲಾಗಿದೆ ಎಂಬ ಸುಳ್ಳು ಸುದ್ದಿ ಪಟ್ಟಣದಲ್ಲಿ ಹರಡುತ್ತಿದ್ದಂತೆ ಕೆಲ ಕಾಲ ಸಂಚಲನವನ್ನುಂಟು ಮಾಡಿದ್ದಂತು ಸತ್ಯ.
ದಾಳಿಯ ಕುರಿತು ಮಾಧ್ಯಮದವರಿಗೆ ಪ್ರತಿಕ್ರೀಯೆ ನೀಡಿದ ಶೇಟವಣ್ಣವರ ಅವರು ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ವಿರೋಧ ಪಕ್ಷದವರಿಗೆ ಸೋಲು ಅನುಭವಿಸುವ ಭಿತಿ ಕಾಡುತ್ತಿದ್ದು ಇದಕ್ಕಾಗಿ ಈ ರೀತಿಯ ಸುಳ್ಳು ದೂರುಗಳನ್ನು ನೀಡಿ ದಾಳಿ ನಡೆಸುವ ಹೇಡಿ ಕೈತ್ಯಕ್ಕೆ ಮುಂದಾಗಿದ್ದಾರೆಂದು ಕಿಡಿ ಕಾರಿದರು.
ದಾಳಿ ನಡೆಸಿ ಪರಿಶೀಲನೆ ನಡೆಸಿದ ಅಧೀಕಾರಿಗಳಿಗೆ ತಾವು ಸಹಕಾರ ನೀಡಿದ್ದು ಅವರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಅವರ ಬಗ್ಗೆ ತಮಗೆ ಬೇಸರವಿಲ್ಲ ಆದರೇ ಹಳಿಯಾಳದಲ್ಲಿ ವ್ಯಕ್ತಿಗತವಾಗಿ ದಾಳಿಗಳನ್ನು ಮಾಡಿಸಿ ಬೆದರಿಕೆ ಹಾಕುವ ತಂತ್ರಕ್ಕೆ ತಾವು ಹೆದರುವುದಿಲ್ಲ ಎಂದು ಖಡಕ್ ಆಗಿ ತಿರುಗೇಟು ನೀಡಿದ ಸಣ್ಣನಿಂಗಪ್ಪಾ ಶೆಟವಣ್ಣವರ್ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ದ ಅವರ ಪಕ್ಷದಲ್ಲೇ ವಿರೋಧಿ ಅಲೆ ಇದ್ದು ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಗೆಲುವು ನಿಶ್ಚಿತವಾಗಿದೆ. ಅಸ್ನೋಟಿಕರ್ ಆಯ್ಕೆಯಾದ ಬಳಿಕ ನಮ್ಮ ನಡೆಗಳನ್ನು ಎದುರಿಸಲು ಈಗ ದಾಳಿ ನಡೆಸಲು ಪಿತೂರಿ ಮಾಡಿದ ಹೇಡಿಗಳು ಸಿದ್ದರಾಗಲಿ ಎಂದು ಎಚ್ಚರಿಕೆ ನೀಡಿದರು.
ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರಾದ್ಯಂತ ಸಚಿವ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಭರದಿಂದ ಸಾಗಿದ್ದು ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಕಾರಣ ಮೈತ್ರಿ ಅಭ್ಯರ್ಥಿ ಗೆಲುವು ಶತಸಿದ್ದ ಎಂದು ಶೆಟವಣ್ಣವರ್ ಭವಿಷ್ಯ ನುಡಿದರು.

FLYING SCOD raid

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: alliance candidate Anand Asnotikar, Ananda Asnotikar home, BJP candidate V Sivanangara, Election Officer Attacks, Floating squad officer Ravindra Metaguddha, FLYING SCOD raid, Haila, illegal money, illegal money collection charges, looting voters, Ravindra Metaguddha, Returning Officers Without Dump, Vidya Sivananda, ಅಕ್ರಮ ಹಣ ಸಂಗ್ರಹಣೆ‌ ಆರೋಪ, ಅಕ್ರಮವಾಗಿ ಹಣ, ಆನಂದ ಅಸ್ನೋಟಿಕರ್ ಆಪ್ತರ ಮನೆ, ಇಂಚಿಂಚೂ ಹುಡುಕಾಟ, ಚುನಾವಣಾಧಿಕಾರಿ ದಾಳಿ, ತಿರುಗೇಟು ನೀಡಿದ ಸಣ್ಣನಿಂಗಪ್ಪಾ, ಫ್ಲಾಯಿಂಗ್ ಸ್ಕ್ವಾಡ್ ಅಧಿಕಾರಿ ರವೀಂದ್ರ ಮೆಟಗುಡ್ಡ, ಬಿಜೆಪಿ ಅಭ್ಯರ್ಥಿ ವಿ, ಬಿಡಿಗಾಸು ಸಿಗದೆ‌ ವಾಪಸ್ಸಾದ ಅಧಿಕಾರಿಗಳು, ಮತದಾರರಿಗೆ ಆಮಿಷವೊಡ್ಡಲು, ಮೆಲೆ, ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ, ಲೋಕಸಭಾ ಕ್ಷೇತ್ರದಲ್ಲಿ, ಶಿವಾನಂದ ಉಳ್ಳೆಗಡ್ಡಿ, ಶೆಟವಣ್ಣವರ್ ಕೆನರಾ, ಹಳಿಯಾಳದಲ್ಲಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...