• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂವಿಧಾನ ಬದಲಾಯಿಸಲು ಹೊರಟವರಿಗೆ ತಕ್ಕ ಪಾಠ ಕಲಿಸಿ ; ಬಿ.ಕೆ. ಹರಿಪ್ರಸಾದ

April 21, 2019 by Gaju Gokarna Leave a Comment

watermarked hnr 21 BK Hariprasad.r

ಹೊನ್ನಾವರ: ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಭಂಡ ಹೇಳಿಕೆ ನೀಡಿದಂತಹ ಸಂಸದ, ಸಚಿವ ಅನಂತಕುಮಾರ ಹೆಗಡೆಯವರಿಗೆ ಮನೆಗೆ ಕಳುಹಿಸಿ ತಕ್ಕ ಪಾಠ ಕಲಿಸುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಮತದಾರರಿಗೆ ಕರೆ ನೀಡಿದರು.
ಅವರು À ಹೊನ್ನಾವರ ಬ್ಲಾಕ್ ಕಾಂಗ್ರೆಸ್, ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನರೇಂದ್ರ ಮೋದಿಯಂತಹ ಸುಳ್ಳು ಭರವಸೆಗಳ ಸರದಾರನನ್ನು ದೇಶ ಈ ಹಿಂದೆಂದೂ ಕಂಡಿಲ್ಲಾ. ಜಗತ್ತಿನ ಮಹಾನ್ ಆರ್ಥಿಕ ತಜ್ಞ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಜಾಗತಿಕ ಮಟ್ಟದಲ್ಲಿ ದೇಶ ಆರ್ಥಿಕ ಕುಸಿತ ಕಂಡಾಗಲೂ ದೇಶವನ್ನು ಸಮರ್ಥವಾಗಿ ಮುನ್ನಡೆಸಿದ್ದರು. ಆದರೂ ಹಿಂದಿನ ಯು.ಜಿ.ಎ. ಸರ್ಕಾರದ ಮೇಲೆ ವಿನಾಃ ಕಾರಣ ಆರೋಪಗಳನ್ನು ಮಾಡಿ ಅಂದಿನ ಸರ್ಕಾರ ಪತನ ಮಾಡುವಲ್ಲಿ ಮೋದಿ ಯಶಸ್ವಿಯಾಗಿದ್ದರು. ದೇಶದ ಜನರಲ್ಲಿ ಅನೇಕ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದ್ದು, ವಿದೇಶದಿಂದ ಕಪ್ಪು ಹಣ ವಾಪಸ್ ತಂದು ದೇಶದ ಬಡವರ ಪ್ರತಿ ಖಾತೆಗೂ ಹಣ ಜಮಾ ಮಾಡುತ್ತೇನೆಂದು ಭರವಸೆ ನೀಡಿದ್ದು ಕನಸಾಗಿಯೇ ಉಳಿದುಕೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು, ಅಡಿಗೆ ಅನಿಲಗಳ ಬೆಲೆÉಗಳು ಮೋದಿ ಸರ್ಕಾರದಲ್ಲಿ ಗಗನಕ್ಕೇರಿರುವುದು ಅವರ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದರು.
ಕಾರಣ ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಉತ್ತಮ ಸರಕಾರ ಬರಬೇಕಾದರೆ ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ಅವರನ್ನು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಸ್ವಾಗತಿಸಿ ಮಾತನಾಡಿ, ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸಿದ್ದು, ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಾದ್ಯಂತ ಆನಂದ ಅಸ್ನೋಟಿಕರ್ ಪರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಅವರ ಗೆಲುವು ಖಚಿತ ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಮ್.ಎನ್. ಸುಬ್ರಹ್ಮಣ್ಯ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎನ್. ಆರಾದ್ಯ, ಮಾಜಿ ಶಾಸಕ ಮಂಕಾಳು ವೈದ್ಯ, ಕೆ.ಪಿ.ಸಿ.ಸಿ. ಕಾರ್ಯದರ್ಶಿ ಪುಷ್ಪಾ ನಾಯ್ಕ, ಇಂಟೆಕ್ ಅಧ್ಯಕ್ಷ ಆಗ್ನೆಲ್ ಡಾಯಸ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಿಕ್ರಿಯಾ ಸಾಬ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹಾದೇವಿ ನಾಯ್ಕ, ಪಕ್ಷದ ಮುಖಂಡರಾದ ಬಾಲಚಂದ್ರ ನಾಯ್ಕ, ವಿನಾಯಕ ಶೇಟ್, ದಾಮೋದರ ನಾಯ್ಕ, ರಾಮನಾಥ ನಾಯ್ಕ ಕರ್ಕಿ, ರಮೇಶ ಶೆಟ್ಟಿ, ಶಫಿವುಲ್ಲಾ ಚಂದಾವರ, ಮಂಜುನಾಥ ಭಟ್ಟ ಕಡ್ಲೆ, ಗಜಾನನ ನಾಯ್ಕ ಸಾಲ್ಕೋಡ, ಗಣೇಶ ನಾಯ್ಕ ಮುಗ್ವಾ, ನೆಲ್ಸನ್ ರೊಡ್ರಿಗೀಸ್, ಜೊಸ್ಪಿನ್ ಡಾಯಸ್, ಸುರೇಶ ಮೇಸ್ತ ಹಾಗೂ ಇನ್ನೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: addressing the election campaign meeting, Ananthakumar Hegde, cause allegations, Congress in JDS in Canara region Alliance candidate, for those who change the Constitution, Parliamentary Affairs Minister, petroleum products, price of kitchen gases, Teach those who go to change the Constitution; BK Short story, withdraw black money from abroad and guarantee money for each of the poorest of the country, ಅಡಿಗೆ ಅನಿಲಗಳ ಬೆಲೆ, ಕೆನರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿ, ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ, ತಕ್ಕ ಪಾಠ ಕಲಿಸಿ, ದೇಶದ ಬಡವರ ಪ್ರತಿ ಖಾತೆಗೂ, ನೀಡಿದಂತಹ, ಪೆಟ್ರೋಲಿಯಂ ಉತ್ಪನ್ನಗಳನ್ನು, ಬಿ.ಕೆ.ಹರಿಪ್ರಸಾದ, ಭಂಡ ಹೇಳಿಕೆ, ವಿದೇಶದಿಂದ ಕಪ್ಪು ಹಣ ವಾಪಸ್ ತಂದು, ವಿನಾಃ ಕಾರಣ ಆರೋಪ, ಸಚಿವ ಅನಂತಕುಮಾರ ಹೆಗಡೆ, ಸಂವಿಧಾನ ಬದಲಾಯಿಸಲು, ಸಂವಿಧಾನ ಬದಲಾಯಿಸಲು ಹೊರಟವರಿಗೆ, ಸಂಸದ, ಹಣ ಜಮಾ ಮಾಡುತ್ತೇನೆಂದು ಭರವಸೆ

Explore More:

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...