ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಈಗಾಗಲೇ ಗೆದ್ದಾಗಿದ್ದು ಕೇವಲ ಮತಗಳ ಅಂತರವನ್ನು ಮಾತ್ರ ಲೆಕ್ಕಾಚಾರ ಹಾಕಬೇಕಾಗಿದ್ದರು ಕೂಡ 4 ಲಕ್ಷ ಮತಗಳ ಅಂತರದಿಂದ ಅನಂತಕುಮಾರ ವಿಜಯದ ಪತಾಕೆ ಹಾರಿಸಲಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು.
ಪಟ್ಟಣದ ಮತಗಟ್ಟೆ ಸಂಖ್ಯೆ 94 ರಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ಕಾಂಗ್ರೇಸ್ ಪಕ್ಷದಲ್ಲಿರುವ ದೇಶ ಭಕ್ತರು ಸಹಿತ ಬಿಜೆಪಿಗೆ ಮತ ಚಲಾಯಿಸಲಿದ್ದಾರೆ. ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರಕ್ಕೂ ಅಧಿಕ ಮತಗಳನ್ನು ಬಿಜೆಪಿ ಪಡೆಯಲಿದೆ ಎಂದರು.
ಇನ್ನೂ ಲೋಕಸಭಾ ಕ್ಷೇತ್ರ ಕಾಂಗ್ರೇಸ್ ಅಭ್ಯರ್ಥಿ ಹಾಗೂ ಚಿಹ್ನೆ ಇಲ್ಲದೇ ಕಾಂಗ್ರೇಸ್ ಮುಕ್ತವಾಗಿರುವುದು ಇನ್ನೊಂದೆಡೆ ಜೆಡಿಎಸ್ಗೆ ಜಿಲ್ಲೆಯಲ್ಲಿ ಪ್ರಾಭಲ್ಯ ಇಲ್ಲದಿರುವುದು ಬಿಜೆಪಿಯ ಅಭ್ಯರ್ಥಿ ಅನಂತಕುಮಾರ ಅವರ ಗೆಲುವಿಗೆ ಸಲಿಸಾಗಲಿದ್ದು ಈ ಬಾರಿ ಐತಿಹಾಸಿಕ ಗೆಲುವನ್ನು ಬಿಜೆಪಿ ದಾಖಲಿಸಲಿದೆ ಎಂದರು.
Leave a Comment