ಗೋಕರ್ಣ: ಶ್ರೀ ಕ್ಷೇತ್ರ *ಗೋಕರ್ಣ* ದ ಸಂಸ್ಥಾನ ಶ್ರೀ ದೇವಾಲಯಕ್ಕೆ ಗೋವಾ ರಾಜ್ಯಪಾಲರಾದ ಗೌರವಾನ್ವಿತ ಶ್ರೀಮತಿ ಮೃದುಲಾ ಸಿನ್ಹಾ ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ನವಧಾನ್ಯಭಿಷೇಕ ಮತ್ತು ಸುವರ್ಣ ನಾಗಾಭರಣ ಪೂಜಾ ಸೇವೆ ನೆರವೇರಿಸಿದರು. ಶ್ರೀ ದೇವಾಲಯದ ಸ್ವಚ್ಛತೆ, ಪ್ರಶಾಂತತೆ ಮತ್ತು ಪೂಜಾ ವಿಧಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ವೇ ಮಹಾಬಲೇಶ್ವರ ಮಾರಿಗೋಳಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಉಪಾಧಿವಂತ ಮಂಡಳದ ಸದಸ್ಯರು ಉಪಸ್ಥಿತರಿದ್ದರು.




Leave a Comment