
ಗೋಕರ್ಣ:- ಮೊಡರ್ನ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಶ್ರೀ ರಾಘವೇಶ್ವರ ಭಾರತೀ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಶೇಕಡಾ 93 ಫಲಿತಾಂಶವನ್ನು ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ. ಪ್ರಥಮ ಸ್ಥಾನವನ್ನು ಕುಮಾರಿ ನವ್ಯಾ ಎಮ್ ಪೈ (97.6%) ದ್ವಿತೀಯ ಸ್ಥಾನವನ್ನು ಕುಮಾರಿ ಭವ್ಯಾ ಎಮ್ ಪಟಗಾರ (95.84%) ತೃತೀಯ ಸ್ಥಾನವನ್ನು ಕುಮಾರಿ ಖುಷಿ ಆರ್ ಗಾಂವಕರ (95.36%) ನಾಲ್ಕನೇ ಸ್ಥಾನವನ್ನು ಕುಮಾರಿ ರಮ್ಯಾ ಪಿ ರೋಖಡೆ (93.6%) ಐದನೇ ಸ್ಥಾನವನ್ನು ಕುಮಾರಿ ಪೂಜಾ ಎನ್ ಗಾಂವಕರ (92.8%) ಆರನೇ ಸ್ಥಾನವನ್ನು ಕುಮಾರಿ ಪುಷ್ಪಾ ಎಮ್ ಗೌಡ (91.84%) ಏಳನೇ ಸ್ಥಾನವನ್ನು ಕುಮಾರಿ ಧನ್ಯಾ ಎಮ್ ಹೆಗಡೆ (91.68%) ಎಂಟನೇ ಸ್ಥಾನವನ್ನು ಕುಮಾರಿ ಶಾಂತಿಕಾ ಸಿ ಉಪಾಧ್ಯ (91.2%) ಪಡೆದಿರುತ್ತಾರೆ. ಒಟ್ಟೂ 8 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಶಾಲೆಗೆ, ಆಡಳಿತ ಮಂಡಳಿಯವರಿಗೆ, ಪಾಲಕರಿಗೆ ಹಾಗೂ ಊರಿಗೆ ಕೀರ್ತಿ ತಂದಿರುತ್ತಾರೆ. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸಂತೋಷ ನಾಯಕ ತೊರ್ಕೆ, ಮೆನೆಜಿಂಗ್ ಟ್ರಸ್ಟಿ ಡಾ. ಎಮ್.ಡಿ.ನಾಯ್ಕ ಮತ್ತು ಶಾಲಾ ಮುಖ್ಯಾಧ್ಯಾಪಕ ರಾಜೇಶ ಗೋನ್ಸಾಲ್ವೀಸ್, ಮುಖ್ಯಾಧ್ಯಾಪಕಿ ಉಷಾ ಆರ್ ನಾಯಕ ಶಿಕ್ಷಕವೃಂದ ಪಾಲಕರು ಹಾಗೂ ಊರನಾಗರೀಕರು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.
Leave a Comment