ಹಳಿಯಾಳ:- ಪ್ರಸಕ್ತ ಸಾಲಿನ ಹಳಿಯಾಳದ ಎಸ್.ಎಸ್.ಎಲ್.ಸಿ ಫಲಿತಾಂಶ 78.06% ಆಗಿದೆ. ಕಳೆದ ಬಾರಿ 75.5% ಫಲಿತಾಂಶ ದಾಖಲಿಸಿದ್ದು ಈ ಬಾರಿ 3% ಹೆಚ್ಚು ಫಲಿತಾಂಶ ದಾಖಲಿಸುವ ಮೂಲಕ ಜಿಲ್ಲೆಗೆ 4ನೇ ಸ್ಥಾನ ಪಡೆದಿದೆ ಎಂದು ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಹಮ್ಮದ ಮುಲ್ಲಾ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿರುವ ಅವರು 37 ಪ್ರೌಢಶಾಲೆಗಳ ಪರೀಕ್ಷೆ ಬರೆದಿದ್ದ 2505 ವಿದ್ಯಾರ್ಥಿಗಳಲ್ಲಿ 1969 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇನ್ನೂ ತಾಲೂಕಿನ ಗ್ರಾಮಾಂತರ ಶಾಲೆಗಳಾದ ಸಾತ್ನಳ್ಳಿ ಹಾಗೂ ಭಾಗವತಿ ಗ್ರಾಮದ ಸರ್ಕಾರಿ ಶಾಲೆಗಳು ಹಾಗೂ ಪಟ್ಟಣದ ಸ್ವಾಮೀ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ನೂರಕ್ಕೆ ನೂರಷ್ಟು ಫಲಿತಾಂಶ ದಾಖಲಿಸಿದೆ.
ಈ ಬಾರಿ ತಾಲೂಕಿನ ಅನೇಕ ಶಾಲೆಗಳಲ್ಲಿ 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳ ಸಂಖ್ಯೆಯು ಹೆಚ್ಚಾಗಿದೆ ಎಂದು ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಹಳಿಯಾಳ ಪಟ್ಟಣದ ಸ್ವಾಮೀ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪುಷ್ಪಲತಾ ಅಶೋಕ ಚೆನ್ನಬಸನ್ನವರ 614 ಅಂಕ(98.24%) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಇವಳು ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಶೋಕ ಅವರ ಪುತ್ರಿಯಾಗಿದ್ದಾಳೆ. ಬಾಲಕಿಯ ಸಾಧನೆಗೆ ಶಿಕ್ಷಣಾಧಿಕಾರಿಗಳು, ಶಾಲಾ ಆಡಳಿತ ಮಂಡಳಿ, ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.
Leave a Comment