ಗೋಕರ್ಣ:- ಮೊಡರ್ನ ಎಜ್ಯುಕೇಶನ್ ಟ್ರಸ್ಟ್ (ರಿ.)ನ ವಿದ್ಯಾಸಂಸ್ಥೆಯಾದ ಶ್ರೀ ರಾಘವೇಶ್ವರ ಭಾರತೀ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ಶೇಕಡಾ 93 ಫಲಿತಾಂಶವನ್ನು ದಾಖಲಿಸುವ ಮೂಲಕ ಉತ್ತಮ ಸಾಧನೆ ಮಾಡಿರುತ್ತದೆ. ಕುಮಾರಿ ನವ್ಯಾ ಎಮ್ ಪೈ (97.6%) ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125/125 ಅಂಕಗಳನ್ನು ಪಡೆದಿರುತ್ತಾಳೆ. ಅದೇ ರೀತಿ ಕುಮಾರಿ ಭವ್ಯ ಎಮ್ ಪಟಗಾರ (95.84%) ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಪ್ರಥಮ ಭಾಷೆ ಕನ್ನಡದಲ್ಲಿ 125/125 ಹಾಗೂ ಸಮಾಜ ವಿಜ್ಞಾನ ವಿಷಯದಲ್ಲಿ 100/99 ಅಂಕಗಳನ್ನು ಪಡೆದಿರುತ್ತಾಳೆ. ಕುಮಾರಿ ಖುಷಿ ಆರ್ ಗಾಂವಕರ (95.36%) ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ. ಒಟ್ಟೂ 8 ವಿದ್ಯಾರ್ಥಿಗಳು A+ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಸಾದನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ ನಾಯಕ ತೊರ್ಕೆ, ಉಪಾಧ್ಯಕ್ಷರಾದ ಶ್ರೀ ನಾಗೇಂದ್ರ ಎಸ್ ಶೇಟ್, ಮೆನೆಜಮೆಂಟ್ ಟ್ರಸ್ಟಿಗಳಾದ ಡಾ. ಎಮ್.ಡಿ.ನಾಯ್ಕ ಮತ್ತು ಶಾಲಾ ಮುಖ್ಯಾಧ್ಯಾಪಕರಾದ ರಾಜೇಶ ಗೋನ್ಸಾಲ್ವೀಸ್ ಮುಖ್ಯಾಧ್ಯಾಪಕಿ ಉಷಾ ನಾಯಕ ಹಾಗೂ ಶಿಕ್ಷಕ ವೃಂದ, ಪಾಲಕರು ಊರನಾಗರೀಕರು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ
Leave a Comment