ಹಳಿಯಾಳ:- ಎಸ್ ಎಸ್.ಎಲ್.ಸಿ ಪರೀಕ್ಷೆಯಲ್ಲಿ 614 ಅಂಕ(ಶೇ.98.24) ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಪುಷ್ಪಲತಾಳಿಗೆ ಅಭಿನಂದನೆಯ ಮಹಾಪುರವೇ ಹರಿದು ಬರುತ್ತಿದೆ.
ಪಟ್ಟಣದ ಕಂದಾಯ ಇಲಾಖೆಯ ನೌಕರ ಅಶೋಕ ಚೆನ್ನಬಸನ್ನವರ ಅವರ ಪುತ್ರಿಯಾಗಿರುವ ಪುಷ್ಪಲತಾಳ ಸಾಧನೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಭಿನಂದನೆ ಸಲ್ಲಿಸಿದ್ದಾರೆ.
ಪಟ್ಟಣದ ವಿ.ಆರ್.ಡಿಎಮ್ ಟ್ರಸ್ಟ್‍ನ ಪ್ರಬಂಧಕರಾದ ವಿವೇಕ ಹೆಗಡೆ, ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ದಿನೇಶ ನಾಯ್ಕ, ಟ್ರಸ್ಟ್‍ನ ಶ್ರೀಪಾದ ಜಿ.ಮಾನಗೆ ಅವರು ಸಚಿವರ ಸೂಚನೆಯಂತೆ ಇಂದು ಪುಷ್ಪಲತಾ ಅವರ ಮನೆಗೆ ಭೆಟಿ ನೀಡಿದ ವಿದ್ಯಾರ್ಥಿನಿಗೆ ಸತ್ಕರಿಸುವ ಮೂಲಕ ಅಭಿನಂದನೆ ಸಲ್ಲಿಸಿದರು.
Leave a Comment