
ಶಿರಸಿ: ರಾಷ್ಟ್ರೀಯ ಸಮಾಜ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯಧರ್ಶಿಗಳಾದ ನಿವೇದಿತಾ ಕೊಟ್ರೇಜಾ ರವರ ಮೌಕಿಕ ಆದೇಶದ ಮೇರೆಗೆ ನಾಗರಾಜ ನಾಯ್ಕರವರನ್ನು ಉತ್ತರ ಕನ್ನಡ ಜಿಲ್ಲಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಸಂಯೋಜಕರಾದ ಡಿ ಎಸ್ ತೊಂಟಾಪುರರವರು ನೇಮಕಮಾಡಿ ಆದೇಶಿಸಿದ್ದಾರೆ.
ರಾಷ್ಟ್ರೀಯ ಸಮಾಜ ಪಕ್ಷದ ಸಂಘಟನೆಗಾಗಿ ಹೊಸ ಚಿಂತನೆಯೊಂದಿಗೆ ಸ್ಥಾಪಿತವಾಗಿರುವ ರಾಷ್ಟ್ರೀಯ ಸಮಾಜ ಪಕ್ಷವು ನಾಗರಾಜ ನಾಯ್ಕರವರಿಗೆ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಜವಾಬ್ಧಾರಿಯನ್ನು ನೀಡಿದೆ. ತಮ್ಮ ಕಾರ್ಯವ್ಯಾಪ್ತಿಗೆ ಬರುವಂತಹ ತಾಲೂಕಾ ಮತ್ತು ಹೋಬಳಿಗಳಿಗೆ ಹಾಗೂ ಗ್ರಾಮಗಳಿಗೆ ಬೇಟಿ ಕೊಟ್ಟು ಎಲ್ಲಾ ಸಮಾಜದ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡು, ಸಮಾಜಗಳ ಜೊತೆ ಉತ್ತಮ ಬಾಂಧವ್ಯ ಕಾಪಾಡಿಕೊಂಡು, ಜನರ ಆಶೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆಂದು ಪರಿಗಣಿಸಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
ನಾಗರಾಜ ನಾಯ್ಕರು 23ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ರಾಷ್ಟ್ರೀಯ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದರು.
Leave a Comment