
ಮುಂಡಗೋಡ:- ದಿ.5 ಸೋಮವಾರದಂದು ಮಧ್ಯಾಹ್ನದ ವೇಳೆಗೆ ತನ್ನ ಇಬ್ಬರು ಸ್ನೇಹಿತರೊಂದಿಗೆ ಧರ್ಮಾ ಜಲಾಶಯದಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿಯೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ದುರ್ಘಟನೆ ನಡೆದಿದೆ.
ತಾಲೂಕಿನ ಮಳಗಿ ಗ್ರಾಮದ ಕ್ಯಾದಗಿಕೊಪ್ಪದ ಪ್ರತಿಭಾನ್ವಿತ ವಿದ್ಯಾರ್ಥಿ ಶಶಾಂಕ ರವಿ ನಾಯ್ಕ ( 16) ತನ್ನ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಸಾವಿಗಿಡಾದ ದುರ್ದೈವಿ ಯುವಕನಾಗಿದ್ದಾನೆ.
ಘಟನೆ ನಡೆದಾಗ
ಜೊತೆಗಿದ್ದ ಸ್ನೇಹಿತರು ಭಯಗೊಂಡು ಸ್ಥಳದಿಂದ ಓಡಿಹೋಗಿದ್ದು ಯಾರ ಗಮನಕ್ಕೂ ನಡೆದ ಘಟನೆಯ ಬಗ್ಗೆ ಬಾಯಿ ಬಿಟ್ಟಿರಲಿಲ್ಲ..
ಸೋಮವಾರ ಬೆಳಿಗ್ಗೆ ಈ ವಿಷಯ ತಿಳಿದ ಗ್ರಾಮಸ್ಥರು, ಸ್ಥಳಕ್ಕೆ ತೆರಳಿದ್ದು ಮೃತನ ದೇಹ ಪತ್ತೆ ಹಚ್ಚಿದ್ದಾರೆ.
ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೃತ ಶಶಾಂಕ ಈತನು ರಾಜ್ಯಮಟ್ಟದ ಕಬಡ್ಡಿ ಪಟುವಾಗಿದ್ದು ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 80% ಅಂಕ ಪಡೆದು ತೆರ್ಗಡೆಯಾಗಿದ್ದನು.


Leave a Comment